ನವದೆಹಲಿ(ಮೇ.02): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಾಡ್‌ಡೌನ್ ವಿಸ್ತರಿಸಿದೆ. ಮೇ.3ಕ್ಕೆ ಅಂತ್ಯವಾಗಬೇಕಿದ್ದ 2ನೇ ಹಂತದ ಲಾಕ್‌ಡೌನ್ ಇದೀಗ 3ನೇ ಹಂತಕ್ಕೆ ವಿಸ್ತರಣೆಯಾಗಿದೆ. ರೆಡ್ ಝೋನ್, ಆರೇಂಜ್ ಝೋನ್ ಸೇರಿದಂತೆ ಕೆಲ ವಲಯಗಳಾಗಿ ವಿಂಗಡನೆ ಮಾಡಲಾಗಿದೆ.

"

ರೆಡ್ ವಲಯಗಳಲ್ಲಿ ಲಾಕ್‌ಡೌನ್ ಮತ್ತಷ್ಟು ಕಠಿಣವಾಗಲಿದೆ. ಆದರೆ ಆರೇಂಜ್ ಝೋನ್‌ನಲ್ಲಿ ಕೊಂಚ ಸಡಿಲಿಕೆ ಮಾಡಲಾಗಿತ್ತು. ಇದೀಗ ಆರೇಂಜ್ ಝೋನ್ ವಲಯಗಳಲ್ಲಿ ನಿಮಯ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ.

ಬಿಗ್ ನ್ಯೂಸ್: ಬಾರ್ ಓಪನ್ ಮಾಡುವಂತಿಲ್ಲ, ಆದ್ರೂ ಮದ್ಯ ಮಾರಾಟಕ್ಕೆ ಅನುಮತಿ

ಕೇಂದ್ರ ಗೃಹ ಇಲಾಖೆ ಆದೇಶದ ಪ್ರಕಾರ, ಕೆಲ ಷರತ್ತುಗಳೊಂದಿಗೆ ಆರೇಂಜ್ ಜೋನ್‌ಗೆ ವಿನಾಯತಿ ನೀಡಲಾಗಿದೆ. ಕಿತ್ತಳೆ ವಲಯದಲ್ಲಿ ಟ್ಯಾಕ್ಸಿ ಮತ್ತ ಕ್ಯಾಬ್‌ಗಳಿಗೆ ಅನುಮತಿ ನೀಡಲಾಗಿದೆ. ಚಾಲಕನ ಜೊತೆಗೆ ಇಬ್ಬರಿಗೆ ಪ್ರಯಾಣ ಮಾಡಲು ಅನುಮತಿ ನೀಡಲಾಗಿದೆ. ಇಷ್ಟೇ ಅಲ್ಲ ರಾಜ್ಯ ಗಡಿ ದಾಟಲು ಅವಕಾಶ ನೀಡಲಾಗಿದೆ. ಇದರೊಂದಿಗೆ ನಾಲ್ಕು ಚಕ್ರದ ವಾಹನಗಳಿಗೂ ಅವಕಾಶ ನೀಡಲಾಗಿದೆ.

ಅಂತರ್ ಜಿಲ್ಲೆಗಳಲ್ಲಿ ನಿರ್ದಿಷ್ಟ ಉದ್ದೇಶಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಅದರಲ್ಲೂ ನಾಲ್ಕು ಚಕ್ರದ ಖಾಸಗಿ ವಾಹನಗಳಲ್ಲೂ ಚಾಲಕ ಹಾಗೂ ಇಬ್ಬರೂ ಪ್ರಯಾಣಿಕರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ. ಆಯಾ ರಾಜ್ಯ ಸರ್ಕಾರಗಳು ಆರೇಂಜ್ ಝೋನ್ ಚಟುವಟಿಕೆ ಕಾರ್ಯಕ್ಷೇತ್ರವನ್ನು ನಿರ್ಧರಿಸಲಿದೆ ಎಂದು ಕೇಂದ್ರ ಗೃಹ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.