Asianet Suvarna News Asianet Suvarna News

ಜೀವವಿಮೆ ಮೇಲಿನ ಜಿಎಸ್‌ಟಿ ರದ್ದತಿಗೆ ಸಚಿವರ ಶಿಫಾರಸು

ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಮೇಲಿನ 18% ಜಿಎಸ್‌ಟಿ ತೆಗೆದುಹಾಕಲು ಸಚಿವರ ಸಮೂಹ ಶಿಫಾರಸು ಮಾಡಿದೆ. 20 ಲೀ. ನೀರಿನ ಬಾಟಲ್, ಬೈಸಿಕಲ್ ಮೇಲಿನ ಜಿಎಸ್‌ಟಿ ಶೇ.5ಕ್ಕೆ ಇಳಿಕೆ ಮತ್ತು ಐಷಾರಾಮಿ ವಸ್ತುಗಳ ಮೇಲೆ 28% ಜಿಎಸ್‌ಟಿ ವಿಧಿಸಲು ಶಿಫಾರಸು ಮಾಡಿದೆ.

Minister recommends abolition of GST on life insurance mrq
Author
First Published Oct 20, 2024, 8:37 AM IST | Last Updated Oct 20, 2024, 8:37 AM IST

ನವದೆಹಲಿ: ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಮೇಲೆ ವಿಧಿಸಲಾಗುತ್ತಿದ್ದ ಶೇ.18ರಷ್ಟು ಜಿಎಸ್‌ಟಿ ತೆರಿಗೆಯನ್ನು ತೆಗೆದು ಹಾಕಬೇಕು ಎಂದು ಸರಕು- ಸೇವಾ ತೆರಿಗೆ (ಜಿಎಸ್‌) ಮಂಡಳಿಗೆ ಜಿಎಸ್ಟಿ ಕುರಿತ ರಾಜ್ಯ ಸಚಿವರ ಸಮೂಹ ಶಿಫಾರಸು ಮಾಡಿದೆ. ಇದೇ ವೇಳೆ, 20 ಲೀ. ನೀರಿನ ಬಾಟಲಿ, ಬೈಸಿಕಲ್ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು. ಆದರೆ ಐಷರಾಮಿ ಕೈಗಡಿ ಯಾರ ಮತ್ತು ಐಷರಾಮಿ ಶೂಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಶೇ.18ರಿಂದ ಶೇ.28ಕ್ಕೆ ಏರಿಸಬೇಕು ಎಂದೂ ಅದು ಶಿಫಾರಸಿನಲ್ಲಿ ತಿಳಿಸಿದೆ. ತನ್ನ ಶಿಫಾರಸನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ್ಯಸ್ಥರಾಗಿರುವ ಜಿಎಸ್‌ಟಿ ಮಂಡ ಳಿಗೆ ಸಮಿತಿ ಸಲ್ಲಿಸಿದೆ. ಈ ಬಗ್ಗೆ ಜಿಎಸ್‌ಟಿ ಮಂಡಳಿ ತನ್ನ ಮುಂದಿನ ತಿಂಗಳಿನ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸಭೆ ನಿರ್ಣಯಗಳು: ಜೀವ ವಿಮೆ ಹಾಗೂ ಹಿರಿಯ ನಾಗರಿಕರ ಆರೋಗ್ಯ ವಿಮೆಯ 5 ಲಕ್ಷ ರು.ಗಳ ಕವರೇಜ್ ವರೆ ಗಿನ ವಿಮೆಗಳಿಗೆ ಜಿಎಸ್‌ಟಿಯಿಂದ ವಿನಾ ಯಿತಿ ನೀಡಬೇಕು ಎಂದು ಶಿಫಾರಸು ಮಾಡಲು ಸಭೆ ನಿರ್ಣಯಿಸಿತು. ಆದರೆ, 5 ಲಕ್ಷ ರು.ಗಿಂತ ಅಧಿಕ ಮೊತ್ತದ ಕವರೇಜ್‌ನ ವಿಮೆಗಳ ಮೇಲಿನ ಶೇ.18 ತೆರಿಗೆ ಮುಂದುವರೆಯಲಿದೆ. ಜೊತೆಗೆ, ಕವರೇಜ್ ಮೊತ್ತವನ್ನು ಲೆಕ್ಕಿಸದೆ, ಹಿರಿಯ ನಾಗರಿಕರ ವಿಮೆ ಮೇಲಿನ ತೆರಿಗೆಗಳನ್ನು ಜಿಎಸ್‌ಟಿ ಮಂಡಳಿ ರದ್ದು ಗೊಳಿಸುವ ನಿರೀಕ್ಷೆಯಿದೆ.

ಇ-ಆಸ್ತಿ ತಂತ್ರಾಂಶ: ಬಿಬಿಎಂಪಿ ವಿಳಂಬದಿಂದ ಎಡವಟ್ಟು?

ಇವುಗಳ ಮೇಲೆ ಜಿಎಸ್ಟಿ ಇಳಿಕೆ: ನೋಟ್ ಪುಸ್ತಕದ ಮೇಲಿನ ಶೇ.12ರಷ್ಟು ಜಿಎಸ್ಟಿ ಯನ್ನು ಶೇ.5ಕ್ಕೆ ಇಳಿಸಬೇಕು. 20 ಲೀ. ನೀರಿನ ಬಾಟಲಿ, 10,000 ರು.ಒಳಗಿನ ಬೈಸಿಕಲ್ ಮೇಲಿನ ಜಿಎಸ್ಟಿಯನ್ನು ಶೇ.5ಕ್ಕೆ ಇಳಿಸುವಂತೆ ಸಭೆ ನಿರ್ಣಯಿಸಿದೆ. ಜೊತೆಗೆ 25,000 ರು. ಮೇಲಿನ ಕೈಗಡಿ ಯಾರ, 15,000 ರು.ಮೇಲಿನ ಶೂಗಳ ಮೇಲೆ ಮೇಲೆ ಶೇ.18 ಶೇ.18ರಷ್ಟು ಜಿಎಸ್ಟಿ ವಿಧಿಸುವಂತೆ ಜಿಎಸ್‌ಟಿ ಮಂಡಳಿಗೆ ಸಚಿವರ ಸಮಿತಿ ಶಿಫಾರಸು ಮಾಡಿದೆ.

Latest Videos
Follow Us:
Download App:
  • android
  • ios