Asianet Suvarna News Asianet Suvarna News

Covid Threat: ಕೊರೋನಾ ಹೆಚ್ಚಳ, ಶಾಲಾ- ಕಾಲೇಜು ಬಂದ್ ಬಗ್ಗೆ ಸುಳಿವು ಕೊಟ್ಟ ಸಚಿವ!

* ಶಾಲಾಕಾಲೇಜು ಬಂದ್ ವಿಚಾರ

* ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದ್ರೆ ಶಾಲಾಕಾಲೇಜು ಬಂದ್

* ಬೆಂಗಳೂರಿನಲ್ಲಿ ಶಾಲಾಕಾಲೇಜು ಬಂದ್ ಮುಂದುವರಿಕೆ ಕುರಿತು ಶೀಘ್ರದಲ್ಲಿ ನಿರ್ಧಾರ ಪ್ರಕಟ

Minister BC Nagesh Hints On Closing Schools If Covid Cases Increases In Karnataka pod
Author
Bangalore, First Published Jan 11, 2022, 12:24 PM IST | Last Updated Jan 11, 2022, 12:24 PM IST

ಬೆಂಗಳೂರು(ಜ.11): ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ನಿರೀಕ್ಷೆಗೂ‌ ಮೀರಿ ನಗರದಲ್ಲಿ ಹರಡುತ್ತಿರುವ ಸೋಂಕು ತಡೆಯಲಿ ಬಿಬಿಎಂಪಿ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಮಹದೇವಪುರ & ಬೊಮ್ಮನಹಳ್ಳಿ ವಲಯಗಳನ್ನು ಅತ್ಯಂತ ಡೇಂಜರ್ ಎಂದು ಹೇಳಲಾಗಿದೆ. ಸದ್ಯ ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಹೌದು ಬೆಂಗಳೂರಿನಲ್ಲಿ ಶಾಲಾಕಾಲೇಜು ಬಂದ್ ಮುಂದುವರಿಕೆ ಕುರಿತು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಬೆಂಗಳೂರು ನಗರದಲ್ಲಿ ಪಾಸಿಟಿವಿ ದರ ಹೆಚ್ಚಿದೆ, ಇದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾಹಿತಿ ನೀಡಿದ್ದಾರೆ. ಆಯಾ ಜಿಲ್ಲೆಯ ಪಾಸಿಟಿವಿ ದರದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. 

ಇದೇ ವೇಳೆ ರಾಜ್ಯಾದ್ಯಂತ ಶಾಲಾ ಕಾಲೇಜು ಬಂದ್ ಬಗ್ಗೆಯೂ ಮಾತನಾಡಿದ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಆಯಾ ಜಿಲ್ಲಾಧಿಕಾರಿ ಶಾಲಾಕಾಲೇಜು ಬಂದ್ ಕುರಿತು ನಿರ್ಧಾರ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಆಯಾ ಜಿಲ್ಲೆಯಲ್ಲಿ ತಾಲೂಕುವಾರು ಪಾಸಿಟಿವಿಟಿ ದರ ನೋಡಿಕೊಂಡು ಬಂದ್ ಮಾಡಲಾಗುತ್ತೆ. ಹೀಗಂತ ಇಡೀ ಜಿಲ್ಲೆ, ರಾಜ್ಯವ್ಯಾಪಿ ಶಾಲಾಕಾಲೇಜು ಬಂದ್ ಮಾಡೋದಿಲ್ಲ. ಎಲ್ಲೆಲ್ಲಿ ಪಾಸಿಟಿವಿ ಹೆಚ್ಚಿರುತ್ತದೆ ಅಲ್ಲಿ ಮಾತ್ರ ಭೌತಿಕ ತರಗತಿ ಬಂದ್ ಮಾಡಲಾಗುತ್ತದೆ ಎಂದಿದ್ದಾರೆ. 

412ಕ್ಕೆ ಏರಿಕೆಯಾದ ಕಂಟೈನ್ಮೆಂಟ್‌ ಜೋನ್​ ಗಳ ಸಂಖ್ಯೆ 

ಬೆಂಗಳೂರಿನ ಎರಡು ವಲಯಗಳು ಭಾರೀ ಡೇಂಜರ್ ಎಂದು ಘೋಷಿಸಲಾಗಿದ್ದು, ಈ‌ ಎರಡು ವಲಯಗಳಲ್ಲೇ 243 ಕಂಟೈನ್ಮೆಂಟ್ ಜೋನ್ ಗಳ ರಚನೆ ಮಾಡಲಾಗಿದೆ. ಮಹದೇವಪುರ & ಬೊಮ್ಮನಹಳ್ಳಿ ವಲಯಗಳಲ್ಲಿ ಅತೀ ಹೆಚ್ಚಿನ ಕಂಟೈನ್ಮೆಂಟ್ ಜೋನ್ ಗಳ ರಚನೆಯಾಗಿದೆ ಎಂಬುವುದು ಉಲ್ಲೇಖನೀಯ. 

ಯಾವ್ಯಾವ ವಲಯಗಳಲ್ಲಿ ಎಷ್ಟೆಷ್ಟು ಕಂಟೈನ್ಮೆಂಟ್ ಜೋನ್ ಗಳು ರಚನೆಯಾಗಿವೆ.!?

ಬೊಮ್ಮನಹಳ್ಳಿ ವಲಯ - 100
ಮಹದೇವಪುರ - 143
ದಕ್ಷಿಣ ವಲಯ - 49
ಪಶ್ಚಿಮ ವಲಯ - 44
ಪೂರ್ವ ವಲಯ - 33
ಯಲಹಂಕ ವಲಯ‌ - 33
ದಾಸರಹಳ್ಳಿ‌ವಲಯ - 6
ಆರ್‌ಆರ್‌ ನಗರ ವಲಯ - 4

ಒಟ್ಟು - 412 ಕಂಟೈನ್ಮೆಂಟ್ ಜೋನ್ ಗಳು

ನಗರದಲ್ಲಿ ಪಾಸಿಟಿವಿಟಿ ದರ ಶೇ.13ಕ್ಕೇರಿಕೆ

ಸಿಲಿಕಾನ್‌ಸಿಟಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಏರಿಕೆಯಾಗಿದ್ದು, 226 ದಿನಗಳ ಬಳಿಕ ಸೋಮವಾರ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ನಗರದಲ್ಲಿ ಪಾಸಿಟಿವಿಟಿ ದರ ಶೇ.13ಕ್ಕೆ ಹೆಚ್ಚಳವಾಗಿದೆ.

ಈ ಹಿಂದೆ ಮೇ 21ರಂದು ಪತ್ತೆಯಾಗಿದ್ದ 9591 ಸೋಂಕಿತ ಪ್ರಕರಣಗಳೇ ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ನಗರದಲ್ಲಿ ಸೋಮವಾರ 9221 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿರುವ ವರದಿಯಾಗಿದೆ. ಇದರಿಂದ ಒಟ್ಟಾರೆ ಕೊರೋನಾ ಪ್ರಕರಣಗಳ ಸಂಖ್ಯೆ 13.08 ಲಕ್ಷಕ್ಕೆ ಏರಿಕೆಯಾಗಿದೆ. 829 ಮಂದಿ ಗುಣಮುಖರಾಗಿದ್ದು, ಈವರೆಗೆ ಸೋಂಕಿನಿಂದ ಬಿಡುಗಡೆಯಾದರ ಸಂಖ್ಯೆ 12.43ಕ್ಕೆ ಹೆಚ್ಚಳವಾಗಿದೆ. ಇಬ್ಬರ ಸಾವಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 16,424ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 48,960ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಸೋಮವಾರ ಪತ್ತೆಯಾದ 9221 ಸೋಂಕಿತ ಪ್ರಕರಣಗಳ ಪೈಕಿ 9 ವರ್ಷದೊಳಗಿನ 274 ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. 10ರಿಂದ 19 ವಯೋಮಿತಿಯೊಳಗಿನ 91 ಮಕ್ಕಳು, 20ರಿಂದ 29 ವರ್ಷದೊಳಗಿನ 878 ಯುವಕರು, 30ರಿಂದ 39 ವಯೋಮಿತಿಯೊಳಗಿನ 2390, 40ರಿಂದ 49 ವರ್ಷದೊಳಗಿನ 2250 ವಯಸ್ಕರಲ್ಲಿ ಸೋಂಕು ದೃಢಪಟ್ಟಿದೆ. 40ರಿಂದ 49 ವರ್ಷದ 1465, 50ರಿಂದ 59 ವಯೋಮಿತಿಯೊಳಗಿನ 972 ಮತ್ತು 60ರಿಂದ 69 ವರ್ಷದೊಳಗಿನ 609 ಹಾಗೂ 70 ವರ್ಷ ಮೇಲ್ಪಟ್ಟ392 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ದಿನಾಂಕ - ಸೋಂಕಿತರು

ಜ.3-1041

ಜ.4-2053

ಜ.5 -3605

ಜ.6-4324

ಜ.7-6812

ಜ.8-7113

ಜ.9-9020

ಜ.10-9221

Latest Videos
Follow Us:
Download App:
  • android
  • ios