ರತನ್ ಟಾಟಾ ಭೇಟಿಯಾದ ಬಿಲ್ ಗೇಟ್ಸ್, ಆರೋಗ್ಯ ಕ್ಷೇತ್ರದಲ್ಲಿ ಜೊತೆಯಾಗಿ ಹೆಜ್ಜೆ!
ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಭಾರತ ಪ್ರವಾಸದಲ್ಲಿದ್ದಾರೆ. ಈಗಾಗಲೇ ಹಲವು ಗಣ್ಯರನ್ನು, ಕೇಂದ್ರ ಸಚಿವರನ್ನು ಬಿಲ್ ಗೇಟ್ಸ್ ಭೇಟಿಯಾಗಿದ್ದಾರೆ. ಇದೀಗ ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಹಾಗೂ ಟಾಟಾ ಸನ್ಸ್ ಚೇರ್ಮೆನ್ ಎನ್ ಚಂದ್ರಶೇಖರನ್ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಲ್ ಗೇಟ್ಸ್ ಉಡುಗೊರೆಯನ್ನು ನೀಡಿದ್ದಾರೆ.
ಮುಂಬೈ(ಮಾ.03): ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ತಮ್ಮ ಫೌಂಡೇಶನ್ ಕಾರ್ಯಕ್ರಮದ ಭಾಗವಾಗಿ ಭಾರತ ಪ್ರವಾಸದಲ್ಲಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ, ಉದ್ಯಮಿ ಆನಂದ್ ಮಹೀಂದ್ರ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದೀಗ ಬಿಲ್ ಗೇಟ್ಸ್ ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ಹಾಗೂ ಟಾಟಾ ಸನ್ಸ್ ಚೇರ್ಮೆನ್ ಎನ್ ಚಂದ್ರಶೇಖರನ್ ಭೇಟಿ ಮಾಡಿ ಮಹತ್ವದ ಭೇಟಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಬಿಲ್ ಗೇಟ್ಸ್ ತಮ್ಮ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಬಿಲ್ ಗೇಟ್ಸ್ ಜೊತೆ ಸೇರಿ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಜೊತೆಯಾಗಿ ಹೆಜ್ಜೆ ಹಾಕುವ ಮಾತುಕತೆ ನಡೆಸಿದ್ದಾರೆ.
ಇಂದು ಬಿಲ್ ಗೇಟ್ಸ್ ರತನ್ ಟಾಟಾ ಹಾಗೂ ಎನ್ ಚಂದ್ರಶೇಕರ್ ಜೊತೆಯಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಆರೋಗ್ಯ, ಪೋಷಣೆ ಸೇರಿದಂತೆ ಕೆಲ ಕ್ಷೇತ್ರದಲ್ಲಿ ಜೊತೆಯಾಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ರತನ್ ಟಾಟಾ ಹಾಗೂ ಚಂದ್ರಶೇಖರನ್ ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಕುರಿತು ಬಿಲ್ ಗೇಟ್ಸ್ ಭಾರತದ ಫೌಂಡೇಷನ್ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಆನಂದ್ ಮಹೀಂದ್ರ ಭೇಟಿ ಮಾಡಿದ ಬಿಲ್ ಗೇಟ್ಸ್, ನನ್ನ ಕ್ಲಾಸ್‌ಮೇಟ್ಸ್ ಎಂದು ಬರೆದು ಪುಸ್ತುಕ ಉಡುಗೊರೆ!
ಟಾಟಾ ಹಾಗೂ ಬಿಲ್ ಗೇಟ್ಸ್ ಮಾತುಕತೆ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ರತನ್ ಟಾಟಾ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಬಿಲ್ ಗೇಟ್ಸ್ ಜೊತೆ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆ ತರಲು ರತನ್ ಟಾಟಾ ಮುಂದಾಗಿದ್ದಾರೆ.
ಭಾರತ ಪ್ರವಾಸದಲ್ಲಿ ಬಿಲ್ ಗೇಟ್ಸ್ ಉದ್ಯಮಿ ಆನಂದ್ ಮಹೀಂದ್ರ ಭೇಟಿಯಾಗಿದ್ದರು. ಈ ವೇಳೆ ತಮ್ಮ ಪುಸ್ತಕ ಉಡುಗೊರೆಯಾಗಿ ನೀಡಿದ್ದರು. ಈ ಪುಸ್ತಕ ಮೇಲೆ ನನ್ನ ಕ್ಲಾಸ್‌ಮೇಟ್ಸ್ ಎಂದು ಆನಂದ್ ಮಹೀಂದ್ರ ಅವರಿಗೆ ಹೇಳಿದ್ದರು. ಇದು ಭಾರಿ ಚರ್ಚೆಯಾಗಿತ್ತು. ಆನಂದ್ ಮಹೀಂದ್ರ ಹಾಗೂ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಹೀಗಾಗಿ ಕ್ಲಾಸ್ ಮೇಟ್ಸ್ ಎಂದು ಹೇಳಿದ್ದರು.
ಆರ್‌ಸಿ-ಬಿಲ್ ಗೇಟ್ಸ್ ಭೇಟಿ : ಕೃತಕ ಬುದ್ಧಿಮತ್ತೆ ಬಗ್ಗೆ ಚರ್ಚೆ
ಇತ್ತೀಚೆಗೆ ಬಿಲ್ ಗೇಟ್ಸ್ ಭಾರತದ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಭೇಟಿ ಮಾಡಿದ್ದರು. ಈ ವೇಳೆ ಕೊರೋನಾ ನಿರ್ವಹಣೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಭಾರತವನ್ನು ಕೊಂಡಾಡಿದ್ದರು. ಭಾರತ ಪ್ರವಾಸಕ್ಕೂ ಮುನ್ನ ಭಾರತ ಕುರಿತು ಭಾರಿ ಮೆಚ್ಚುಗೆ ಮಾತುಗಳನ್ನಾಡಿದ್ದರು. ಪ್ರಸ್ತುತ ಜಗತ್ತು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಇವುಗಳನ್ನೆಲ್ಲಾ ಒಟ್ಟಿಗೆ ಬಗೆಹರಿಸಲು ಹಣ ಮತ್ತು ಸಮಯದ ಕೊರತೆ ಇದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಭಾರತ ಈ ಊಹೆಗಳನ್ನು ಸುಳ್ಳಾಗಿಸಿದೆ. ಹಾಗಾಗಿ ಭಾರತ ಸಂಪೂರ್ಣವಾಗಿ ಭವಿಷ್ಯದ ಭರವಸೆ ನೀಡುತ್ತಿದೆ. ಭಾರತ ಬಹುದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದೆ. ಪೋಲಿಯೋವನ್ನು ಸಂಪೂರ್ಣವಾಗಿ ತೊಡೆದುಹಾಕಿದೆ. ಎಚ್‌ಐವಿ ಪ್ರಸರಣವನ್ನು ಕಡಿಮೆ ಮಾಡಿದೆ. ಬಡತನವನ್ನು ಕಡಿಮೆ ಮಾಡಿದೆ. ಶಿಶುಮರಣ ಪ್ರಮಾಣವನ್ನು ತಗ್ಗಿಸಿದೆ. ಅಲ್ಲದೇ ಆರ್ಥಿಕ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸಿದೆ’ ಎಂದು ಅವರು ಹೇಳಿದ್ದಾರೆ.