ಆನಂದ್ ಮಹೀಂದ್ರ ಭೇಟಿ ಮಾಡಿದ ಬಿಲ್ ಗೇಟ್ಸ್, ನನ್ನ ಕ್ಲಾಸ್‌ಮೇಟ್ಸ್ ಎಂದು ಬರೆದು ಪುಸ್ತುಕ ಉಡುಗೊರೆ!
ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ , ಉದ್ಯಮಿ ಆನಂದ್ ಮಹೀಂದ್ರ ಭೇಟಿ ಮಾಡಿದ್ದಾರೆ. ಈ ವೇಳೆ ತಮ್ಮ ಪುಸ್ತಕವನ್ನು ಮಹೀಂದ್ರಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಪುಸ್ತಕದ ಮೇಲೆ ನನ್ನ ಕ್ಲಾಸ್‌ಮೇಟ್ ಎಂದು ಗೇಟ್ಸ್ ಬರೆದಿದ್ದಾರೆ. ಅಷ್ಟಕ್ಕೂ ಬಿಲ್ ಗೇಟ್ಸ್ ಹಾಗೂ ಆನಂದ್ ಮಹೀಂದ್ರ ಜೊತೆಯಾಗಿ ವಿದ್ಯಾಭ್ಯಾಸ ಮಾಡಿದ್ದಾರಾ? ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಮುಂಬೈ(ಮಾ.01): ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಬಿಲೆನಿಯರ್ ಬಿಲ್ ಗೇಟ್ಸ್ ಭಾರತ ಪ್ರವಾಸದಲ್ಲಿದ್ದಾರೆ. ಬಿಲ್ ಗೇಟ್ಸ್ ಹಲವು ದಿಗ್ಗಜರನ್ನು ಭೇಟಿ ಮಾಡಿದ್ದಾರೆ. ಇದರಲ್ಲಿ ಉದ್ಯಮಿ ಹಾಗೂ ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಆನಂದ್ ಮಹೀಂದ್ರ ಭೇಟಿ ಮಾಡಿದ ಬಿಲ್ ಗೇಟ್ಸ್ ತಮ್ಮ ಗೇಟ್ಸ್ ಸ್ಕ್ರಿಬಲ್ಡ್ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಷ್ಟೇ ಅಲ್ಲ ಈ ಪುಸ್ತಕದ ಮೇಲೆ ನನ್ನ ಕ್ಲಾಸ್‌ಮೇಟ್ಸ್ ಎಂದು ಬರೆದಿದ್ದಾರೆ. ಈ ಉಲ್ಲೇಖ ಭಾರಿ ಕುತೂಹಲಕ್ಕೆ ಕಾರಣಾವಾಗಿತ್ತು. ಬಿಲ್ ಗೇಟ್ಸ್ ಹಾಗೂ ಆನಂದ್ ಮಹೀಂದ್ರ ಕ್ಲಾಸ್ ಮೇಟ್ಸ್ ಆಗಿದ್ದರೇ? ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿತ್ತು. ಇದಕ್ಕೆ ಉತ್ತರ ಬಂದಿದೆ. ಹೌದು, ಬಿಲ್ ಗೇಟ್ಸ್ ಹಾಗೂ ಆನಂದ್ ಮಹೀಂದ್ರ ಒಂದೇ ಕಾಲೇಜಿಲ್ಲಿ ಓದಿದ್ದಾರೆ. ಆದರೆ ಬಿಲ್ ಗೇಟ್ಸ್ ಪರೀಕ್ಷೆ ಫೇಲ್ ಆಗಿ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದರೆ, ಆನಂದ್ ಮಹೀಂದ್ರ ಯಶಸ್ವಿಯಾಗಿ ಶಿಕ್ಷಣ ಮುಗಿಸಿದ್ದಾರೆ.
ಆನಂದ್ ಮಹೀಂದ್ರ ಹಾಗೂ ಬಿಲ್ ಗೇಟ್ಸ್ ಇಬ್ಬರೂ ಕೂಡ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ. ಇವರಿಬ್ಬರ ವಿದ್ಯಾರ್ಹತೆ ದಾಖಲೆಗಳ ಪ್ರಕಾರ, ಆನಂದ್ ಮಹೀಂದ್ರ 1977ರಲ್ಲಿ ಹಾರ್ವಡ್ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದಾರೆ. ಆದರೆ ಬಿಲ್ ಗೇಟ್ಸ್ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. 1973ರಲ್ಲಿ ಬಿಲ್ ಗೇಟ್ಸ್ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಅಡ್ಮಿಷನ್ ಮಾಡಿದ್ದಾರೆ. ಎರಡು ವರ್ಷಗಳ ಬಳಿಕ ಅಂದರೆ 1975ರಲ್ಲಿ ಬಿಲ್ ಗೇಟ್ಸ್ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ.
ಆನಂದ್ ಮಹೀಂದ್ರಾಗೆ 'ನಾಟು ನಾಟು..' ಡಾನ್ಸ್ ಹೇಳಿಕೊಟ್ಟ ತೆಲುಗು ಸ್ಟಾರ್ ರಾಮ್ ಚರಣ್; ವಿಡಿಯೋ ವೈರಲ್
1973 ಅಥವಾ 1974ರಲ್ಲಿ ಆನಂದ್ ಮಹೀಂದ್ರ ಹಾಗೂ ಬಿಲ್ ಗೇಟ್ಸ್ ಒಂದೇ ಕಾಲೇಜಿನ ಕ್ಯಾಂಪಸ್‌ನಲ್ಲಿದ್ದರು ಅನ್ನೋದು ಇವರ ವಿದ್ಯಾರ್ಹತೆ ದಾಖಲೆಗಳು ಹೇಳುತ್ತಿದೆ. ಬಿಲ್ ಗೇಟ್ಸ್ ಭೇಟಿ ಸಂತಸವನ್ನು ಆನಂದ್ ಮಹೀಂದ್ರ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಬಿಲ್ ಗೇಟ್ಸ್ ಜೊತೆಗಿನ ಫೋಟೋ ಹಾಗೂ ಗೇಟ್ಸ್ ನೀಡಿದ ಪುಸ್ತಕದ ಫೋಟೋವನ್ನು ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣಧಲ್ಲಿ ಭಾರಿ ಚರ್ಚೆಯಾಗಿತ್ತು.
ಬಿಲ್ ಗೇಟ್ಸ್ ತಮ್ಮ ಫೌಂಡೇಶನ್ ಕಾರ್ಯಕ್ರಮದ ಭಾಗವಾಗಿ ಭಾರತ ಪ್ರವಾಸ ಮಾಡಿದ್ದಾರೆ. ಇದಕ್ಕಾಗಿ ಹಲವು ಗಣ್ಯರನ್ನು ಬೇಟಿ ಮಾಡಿ ಜೊತೆಯಾಗಿ ಕೆಲಸ ಮಾಡುವ ಮನವಿ ಮಾಡಿದ್ದಾರೆ. ಇದರಲ್ಲಿ ಆನಂದ್ ಮಹೀಂದ್ರ ಜೊತೆಗೂಡಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಇದರ ಭಾಗವಾಗಿ ಬಿಲ್ ಗೇಟ್ಸ್ ಭೇಟಿಯಾಗಿದ್ದಾರೆ. ಭಾರತ ಪ್ರವಾಸಕ್ಕೂ ಮುನ್ನ ಬಿಲ್ ಗೇಟ್ಸ್, ಭಾರತವನ್ನು ಜಗದ್ಗುರು ಎಂದು ಪ್ರಶಂಸಿದ್ದರು. ಎಲ್ಲಾ ಸಮಸ್ಯೆಗಳನ್ನು ಭಾರತ ಮೆಟ್ಟಿ ನಿಂತು ಮಾರ್ಗದರ್ಶನ ನೀಡುತ್ತಿದೆ ಎಂದಿದ್ದರು.
‘ಜಗತ್ತು ಹಲವು ಸಮಸ್ಯೆಗಳ ನಡುವೆ ತೊಳಲಾಡುತ್ತಿರುವಾಗಲೇ ಎಲ್ಲಾ ಬಿಕ್ಕಟ್ಟುಗಳನ್ನು ಒಟ್ಟಿಗೆ ಬಗೆಹರಿಸಬಹುದು ಎಂದು ಭಾರತ ತೋರಿಸಿದೆ. ಹಾಗಾಗಿ ಭಾರತ ಭವಿಷ್ಯದ ಭರವಸೆಯನ್ನು ನೀಡುತ್ತಿದೆ’ ಎಂದು ಮೈಕ್ರೋಸಾಫ್‌್ಟನ ಸಹ ಸಂಸ್ಥಾಪಕ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹ-ಮುಖ್ಯಸ್ಥ ಬಿಲ್‌ಗೇಟ್ಸ್ ಹೇಳಿದ್ದಾರೆ.
ಒಂದೇ ಕೈಯಲ್ಲಿ 16 ದೋಸೆ ಪ್ಲೇಟ್ ಬ್ಯಾಲೆನ್ಸ್, ವಿದ್ಯಾರ್ಥಿಭವನದ ಸರ್ವರ್‌ಗೆ ಆನಂದ್ ಮಹೀಂದ್ರಾ ಮೆಚ್ಚುಗೆ
ಈ ಕುರಿತಾಗಿ ತಮ್ಮ ಬ್ಲಾಗ್ ‘ಗೇಟ್ಸ್ ನೋಟ್ಸ್’ನಲ್ಲಿ ಬರೆದಿರುವ ಅವರು, ‘ಪ್ರಸ್ತುತ ಜಗತ್ತು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಇವುಗಳನ್ನೆಲ್ಲಾ ಒಟ್ಟಿಗೆ ಬಗೆಹರಿಸಲು ಹಣ ಮತ್ತು ಸಮಯದ ಕೊರತೆ ಇದೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಭಾರತ ಈ ಊಹೆಗಳನ್ನು ಸುಳ್ಳಾಗಿಸಿದೆ. ಹಾಗಾಗಿ ಭಾರತ ಸಂಪೂರ್ಣವಾಗಿ ಭವಿಷ್ಯದ ಭರವಸೆ ನೀಡುತ್ತಿದೆ. ಭಾರತ ಬಹುದೊಡ್ಡ ಬಿಕ್ಕಟ್ಟುಗಳಿಂದ ಹೊರಬಂದಿದೆ. ಪೋಲಿಯೋವನ್ನು ಸಂಪೂರ್ಣವಾಗಿ ತೊಡೆದುಹಾಕಿದೆ. ಎಚ್‌ಐವಿ ಪ್ರಸರಣವನ್ನು ಕಡಿಮೆ ಮಾಡಿದೆ. ಬಡತನವನ್ನು ಕಡಿಮೆ ಮಾಡಿದೆ. ಶಿಶುಮರಣ ಪ್ರಮಾಣವನ್ನು ತಗ್ಗಿಸಿದೆ. ಅಲ್ಲದೇ ಆರ್ಥಿಕ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸಿದೆ’ ಎಂದು ಅವರು ಹೇಳಿದ್ದಾರೆ.