ನವದೆಹಲಿ(ಮೇ.29): ನೆರೆ ದೇಶಗಳಲ್ಲಿ ನೆಲೆಸಿರುವ ಮುಸ್ಲಿಮೇತರ ವ್ಯಕ್ತಿಗಳಿಗೆ ಭಾರತೀಯ ಪೌರತ್ವ ನೀಡುವ ತನ್ನ ಬಹು ನಿರೀಕ್ಷಿತ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

'ಕೇಂದ್ರದ ನೀತಿಗಳ ವಿರುದ್ಧ ರಾಜ್ಯ ಸರ್ಕಾರಗಳು ಮಸೂದೆ ಪಾಸ್ ಮಾಡಬಹುದು'

ಆಷ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿ, ಕ್ರೈಸ್ತರು ಮತ್ತು ಬೌದ್ಧರು ಭಾರತೀಯ ಪೌರತ್ವ ಕೋರಬಹುದು. ಇದರ ಜೊತೆಗೆ ಗುಜರಾತ್‌, ರಾಜಸ್ಥಾನ, ಛತ್ತೀಸ್‌ಗಢ, ಹರಾರ‍ಯಣ ಮತ್ತು ಪಂಜಾಬ್‌ನ 13 ಜಿಲ್ಲೆಗಳಲ್ಲಿ ವಿವಿಧ ದೇಶಗಳಿಂದ ಬಂದು ನೆಲೆಸಿರುವವರು (2014ರ ಡಿ.31ಕ್ಕೆ ಮುನ್ನ) ಕೂಡಾ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪೌರತ್ವ ಕಾಯ್ದೆ ಜಾರಿಗೆ ದಿನಾಂಕ ಫಿಕ್ಸ್ ಮಾಡಿದ ಅಮಿತ್ ಶಾ!

2019ರಲ್ಲೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾಗಿತ್ತಾದರೂ, ಭಾರೀ ವಿರೋಧದ ಹಿನ್ನೆಲೆಯಲ್ಲಿ ಅದರ ಜಾರಿ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ 1955ರ ಪೌರತ್ವ ಕಾಯ್ದೆ ಮತ್ತು 2009ರಲ್ಲಿ ಜಾರಿ ಮಾಡಲಾದ ಕಾನೂನಿನ ಅನ್ವಯ ಪೌರತ್ವ ನೀಡಲು ಮುಂದಾಗಿದೆ.