Asianet Suvarna News Asianet Suvarna News

ಮೆಟ್ಟೂರು ಡ್ಯಾಂಗೆ ಎರಡೇ ದಿನದಲ್ಲಿ 16 ಅಡಿ ನೀರು!

ಕರ್ನಾಟಕದ ಕೃಷ್ಣರಾಜಸಾಗರ (ಕೆಆರ್‌ಎಸ್‌) ಹಾಗೂ ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ| ಮೆಟ್ಟೂರು ಡ್ಯಾಂಗೆ ಎರಡೇ ದಿನದಲ್ಲಿ 16 ಅಡಿ ನೀರು

Mettur dam water level rises 16 feet in 48 hours
Author
Bangalore, First Published Aug 11, 2020, 11:07 AM IST
  • Facebook
  • Twitter
  • Whatsapp

ಸೇಲಂ(ಆ.11): ಕರ್ನಾಟಕದ ಕೃಷ್ಣರಾಜಸಾಗರ (ಕೆಆರ್‌ಎಸ್‌) ಹಾಗೂ ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ಎರಡೇ ದಿನದಲ್ಲಿ 16 ಅಡಿ ನೀರು ಬಂದಿದೆ.

ಜಲಾಶಯದ ಮಟ್ಟ87 ಅಡಿಗೆ ಏರಿಕೆಯಾಗಿದೆ. ಹೀಗಾಗಿ ಈ ವರ್ಷ ಕಾವೇರಿ ವಿವಾದ ತಲೆದೋರುವ ಸಾಧ್ಯತೆ ದೂರವಾಗತೊಡಗಿದೆ. ಜಲಾಶಯಕ್ಕೆ ಸೋಮವಾರ 1.30 ಲಕ್ಷ ಕ್ಯುಸೆಕ್ಸ್‌ ನೀರು ಹರಿದುಬರುತ್ತಿದೆ. ಹೊರಹರಿವು 10 ಸಾವಿರ ಕ್ಯುಸೆಕ್ಸ್‌ ಇದೆ. ಶನಿವಾರವಷ್ಟೇ 71 ಅಡಿ ಇದ್ದ ಜಲಾಶಯದ ಮಟ್ಟಎರಡೇ ದಿನದಲ್ಲಿ 16 ಅಡಿಯಷ್ಟುಹೆಚ್ಚಿರುವುದು ಇಲ್ಲಿ ಗಮನಾರ್ಹ.

ಧರಿಸಿದ್ದ ಸೀರೆ ಬಿಚ್ಚಿ ನದಿಗೆಸೆದು ಮುಳುಗುತ್ತಿದ್ದ ಯುವಕರ ಕಾಪಾಡಿದ ಮಹಿಳೆಯರು!

ಜಲಾಶಯದ ಗರಿಷ್ಠ ಮಟ್ಟ120 ಅಡಿಗಳಾಗಿವೆ. ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ 93 ಟಿಎಂಸಿ ಇದ್ದು, ಈಗ 49 ಟಿಎಂಸಿಯಷ್ಟುನೀರು ಸಂಗ್ರಹವಾಗಿದೆ. ಕಳೆದ ವರ್ಷ ಮುಂಗಾರಿನಲ್ಲಿ 2.5 ಲಕ್ಷ ಕ್ಯುಸೆಕ್ಸ್‌ ನೀರು ಕರ್ನಾಟಕದಿಂದ ಹರಿದುಬಂದಿತ್ತು. ಇದು ಈವರೆಗಿನ ದಾಖಲೆಯಾಗಿದೆ.

ಪ್ರಧಾನಿ ಮೋದಿ ಜೊತೆ ವಿಡಿಯೋ ಸಂವಾದ: ರಾಜ್ಯದ ಸಚಿವರಿಗೆ ಸಿದ್ದರಾಮಯ್ಯ ಸಲಹೆ

‘ಕರ್ನಾಟಕವು ಕೆಆರ್‌ಎಸ್‌ ಹಾಗೂ ಕಬಿನಿಯಿಂದ ಬಿಟ್ಟನೀರು, ತಮಿಳುನಾಡಿನಲ್ಲಿ ಕಾವೇರಿ ನದಿ ಪ್ರವೇಶಿಸುವ ಸ್ಥಳವಾದ ಬಿಳಿಗುಂಡ್ಲುವಿನಲ್ಲಿ ಭಾನುವಾರ 1.1 ಲಕ್ಷದಿಂದ 1.3 ಲಕ್ಷ ಕ್ಯುಸೆಕ್ಸ್‌ ಇತ್ತು. ಇದು ಕ್ರಮೇಣ 86 ಸಾವಿರ ಕ್ಯುಸೆಕ್ಸ್‌ಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ ಮಳೆ ಇಳಿಕೆ ಆಗಿರುವುದೇ ಇದಕ್ಕೆ ಕಾರಣ. ಹೀಗಾಗಿ ಮುಂಬರುವ ದಿನಗಳಲ್ಲಿ ಒಳಹರಿವು ಕಡಿಮೆ ಆಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

Follow Us:
Download App:
  • android
  • ios