Asianet Suvarna News Asianet Suvarna News

ಆಫ್ಘನ್‌ ಉಲ್ಲೇಖಿಸಿ 370 ವಿಧಿ ಮರುಜಾರಿ ಕೋರಿದ ಮೆಹಬೂಬಾ ಮುಫ್ತಿ!

* 2019ರಲ್ಲಿ ರದ್ದು ಮಾಡಲಾದ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ

* 370ನೇ ವಿಧಿಯನ್ನು ಮರುಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಫ್ತಿ

* ಅಫ್ಘಾನಿಸ್ತಾನದ ಅಧಿಕಾರವನ್ನು ತಾಲಿಬಾನ್‌ ವಶಕ್ಕೆ

Mehbooba Mufti Refers To Afghanistan Over Jammu Kashmir Statehood Sparks Row pod
Author
Bangalore, First Published Aug 22, 2021, 9:39 AM IST
  • Facebook
  • Twitter
  • Whatsapp

ಶ್ರೀನಗರ(ಆ.22): ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳನ್ನು ಪಾಠವಾಗಿಟ್ಟುಕೊಂಡು 2019ರಲ್ಲಿ ರದ್ದು ಮಾಡಲಾದ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಮರುಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶನಿವಾರ ಒತ್ತಾಯಿಸಿದ್ದಾರೆ.

ಅಫ್ಘಾನಿಸ್ತಾನದ ಅಧಿಕಾರವನ್ನು ತಾಲಿಬಾನ್‌ ವಶಕ್ಕೆ ಪಡೆದಿದೆ. ಇದರಿಂದಾಗಿ ಸೂಪರ್‌ ಪವರ್‌ ಎಂದು ಮೆರೆಯುತ್ತಿದ್ದ ಅಮೆರಿಕ ಸಹ ಗಂಟು ಮೂಟೆ ಕಟ್ಟಿಕೊಂಡು ಹೋಗಿದೆ. ನೆರೆಯ ದೇಶದ ಈ ಪರಿಸ್ಥಿತಿಯನ್ನು ಭಾರತ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕೇಂದ್ರಾಡಳಿತ ಪ್ರದೇಶದಲ್ಲಿ ತನ್ನ ನೆಲೆ ಕಳೆದುಕೊಂಡಿರುವ ಮೆಹಬೂಬಾ ಅವರು ದ್ವೇಷದ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಪಿತೂರಿ ಮಾಡುವ ಯಾರಾದರೂ ಸರಿಯೇ ನಾಶವಾಗುತ್ತಾರೆ ಎಂದು ತೀಕ್ಷ$್ಣ ತಿರುಗೇಟು ನೀಡಿದೆ.

Follow Us:
Download App:
  • android
  • ios