ಮದುವೆಯಾಗಲು ಹುಡುಗ-ಹುಡುಗಿ ಒಪ್ಪಿಗೆ ಮಾತ್ರವಲ್ಲ, ಇದೀಗ ಹೆಚ್ಐವಿ-ಏಡ್ಸ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಮದುವೆಗೂ ಮೊದಲು ಪರೀಕ್ಷೆ ಮಾಡಿ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
KNOW
ಶಿಲ್ಲಾಂಗ್ (ಜು.28) ಮದುವೆ ಪವಿತ್ರ ಸಂಬಂಧ. ಕುಟುಂಬದ ಒಪ್ಪಿಗೆ ಮೇರೆಗೆ ಮದುವೆ ಅಥವಾ ರಿಜಿಸ್ಟರ್ಡ್ ಮದುವೆ. ಯಾವುದೇ ಆಗಿರಲಿ, ಮದುವೆಯಾಗಲು ಇನ್ನು ಹೆಚ್ಐವಿ-ಏಡ್ಸ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಈ ರೀತಿಯ ನಿಯಮ ಜಾರಿಗೊಳಿಸಲು ಮೆಘಾಲಯ ಸರ್ಕಾರ ಮುಂದಾಗಿದೆ. ಮದುವೆಯಾಗುವ ಗಂಡು ಹಾಗೂ ಹೆಣ್ಣು ಇಬ್ಬರೂ ಹೆಚ್ಐವಿ-ಏಡ್ಸ್ ಟೆಸ್ಟ್ ಕಡ್ಡಾಯವಾಗಿ ಮಾಡಬೇಕು. ಈ ಕುರಿತು ಮೆಘಾಲಯ ಗೃಹ ಸಚಿವ ಹಾಗೂ ಆರೋಗ್ಯ ಸಚಿವರು ಮಹತ್ವದ ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಹೊಸ ನಿಯಮ ಮೆಘಾಲದಲ್ಲಿ ಜಾರಿಯಾಗಲಿದೆ.
ಮದುವೆಗೆ ಹೆಚ್ಐವಿ ಪರೀಕ್ಷೆ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದೇಕೆ?
ಮೆಘಾಲಯದಲ್ಲಿ ಮದುವೆಯಾಗಲು ಹೆಚ್ಐವಿ ಪರೀಕ್ಷೆ ಕಡ್ಡಾಯಗೊಳಿಸಲು ಸತತ ಸಭೆಗಳು, ಚರ್ಚೆಗಳು ನಡೆಯುತ್ತಿದೆ.ಈ ಕುರಿತು ಶೀಘ್ರದಲ್ಲೇ ಹೊಸ ನೀತಿ ಜಾರಿಯಾಗಲಿದೆ. ಈ ನೀತಿ ಜಾರಿಗೊಳಿಸಲು ಮುಖ್ಯ ಕಾರಣ ಮೆಘಾಲದಲ್ಲಿ ಹೆಚ್ಚುತ್ತಿರುವ ಹೆಚ್ಐವಿ ಸಮಸ್ಯೆ. ಮೆಘಾಲಯದ ಹಲವು ಭಾಗದಲ್ಲಿ ಹೆಚ್ಐವಿ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಮೆಘಾಲಯ ಸರ್ಕಾರ ಈ ನೀತಿ ಜಾರಿಗೊಳಿಸಲು ಮುಂದಾಗಿದೆ.
ಅಮಾಯಕರು ಹೆಚ್ಐವಿಗೆ ಬಲಿಯಾಗುತ್ತಿದ್ದಾರೆ
ಮೆಘಾಲಯದಲ್ಲಿ ಹೆಚ್ಐವಿ ಸೋಂಕು ಪೀಡಿತರಾದವರು ಗೌಪ್ಯವಾಗಿಟ್ಟು ಅಥವಾ ತಿಳಿಯದೇ ಮದುವೆಯಾಗುತ್ತಿದ್ದಾರೆ. ಇದರಿಂದ ಹೆಚ್ಐವಿ ಸೋಂಕು ಸಂಗಾತಿಗೂ ಅಂಟಿಕೊಳ್ಳುತ್ತಿದೆ. ಇಷ್ಟೇ ಅಲ್ಲ ಹುಟ್ಟುವ ಮಗುವಿಗೂ ಸೋಂಕು ಹರಡುತ್ತಿದೆ. ಹೀಗಾಗಿ ಮದುವೆಗೂ ಮೊದಲೇ ಹೆಚ್ಐವಿ ಸೋಂಕು ಪರೀಕ್ಷೆ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಆರೋಗ್ಯ ಸಚಿವ ಅಂಪರೀನ್ ಲಿಂಗ್ಡ್ಯೋ ಹೇಳಿದ್ದಾರೆ. ಮೆಘಾಲಯದಲ್ಲಿ ಹೆಚ್ಐವಿ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ ಮದುವೆಗೂ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಬ್ಬರಿಗೂ ತಮ್ಮ ಟೆಸ್ಟ್ ವರದಿ ಮಾಹಿತಿ ಇರಬೇಕು ಎಂದಿದ್ದಾರೆ.
ಗೋವಾದಲ್ಲಿ ಈಗಾಗಲೇ ಜಾರಿಯಲ್ಲಿದೆ ಈ ನಿಯಮ
ಮದುವೆಗೂ ಮೊದಲು ಹೆಚ್ಐವಿ ಪರೀಕ್ಷೆ ಕಡ್ಡಾಯ ಭಾರತದಲ್ಲಿ ಹೊಸದೇನಲ್ಲ. ಸದ್ಯ ಮೆಘಾಲದಲ್ಲಿ ಈ ನಿಯಮದ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಗೋವಾದಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ಪ್ರವಾಸಿ ತಾಣವಾಗಿರುವ ಗೋವಾದಲ್ಲಿ ಮದುವೆಗೂ ಮೊದಲು ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಕಾನೂನು ತಜ್ಞರ ಮೊರೆ ಹೋದ ಸರ್ಕಾರ
ಮೆಘಾಲಯ ಸರ್ಕಾರ ಸದ್ಯ ಕಾನೂನು ತಜ್ಞರ ಮೊರೆ ಹೋಗಿದೆ. ಈ ಕುರಿಕು ಕರಡು ನೀತಿ ರಚಿಸಿ ಚರ್ಚಿಸಲು ಮುಂದಾಗಿದೆ. ಶೀಘ್ರದಲ್ಲೇ ಕರಡು ನೀತಿ ರಚನೆಯಾಗಲಿದೆ. ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ನೀತಿ ಜಾರಿಯಾಗಲಿದೆ.
