ನವದೆಹಲಿ(ಫೆ.14): ಅದು ಫೆ.14, 2019. ಇಡೀ ದೇಶ ಅಂತಾರಾಷ್ಟ್ರೀಯ ಪ್ರೇಮಿಗಳ ದಿನ ಆಚರಿಸುವಲ್ಲಿ ಮಗ್ನವಾಗಿತ್ತು. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿದ್ದ ದೇಶಕ್ಕೆ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಬೆಚ್ಚಿ ಬಿದ್ದಿತ್ತು.

40 CRPF ಯೋಧರನ್ನು ಬಳಿ ಪಡೆದ ಭೀಕರ ಭಯೋತ್ಪಾದಕ ದಾಳಿಯಿಂದ ಇಡೀ ದೇಶದ ಕಣ್ಣಲ್ಲಿ ನೀರು ಜಿನುಗಿತ್ತು. ಅದರಂತೆ ಪುಲ್ವಾಮಾ ದಾಳಿ ಮಹಾರಾಷ್ಟ್ರದ ಸಂಗೀತಕಾರನೋರ್ವನ ಮನಸ್ಸನ್ನೂ ಕದಡಿತ್ತು.

ಪುಲ್ವಾಮಾ ದಾಳಿಯಿಂದ ತೀವ್ರ ನೊಂದಿದ್ದ ಮಹಾರಾಷ್ಟ್ರದ ಸಂಗೀತಕಾರ ಉಮೇಶ್ ಗೋಪಿನಾಥ್ ಜಾಧವ್, ಪುಲ್ವಾಮಾ ಹುತಾತ್ಮರ ಮನೆಯ ಮಣ್ಣನ್ನು ಸಂಗ್ರಹಿಸುವ ನಿರ್ಧಾರಕ್ಕೆ ಬಂದಿದ್ದರು.

ಅದರಂತೆ  ತಮ್ಮ ಕಾರಿನಲ್ಲೇ ಪುಲ್ವಾಮಾ ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡತೊಡಗಿದ ಉಮೇಶ್ ಗೋಪಿನಾಥ್ ಜಾಧವ್, ದೇಶದ ಮೂಲೆ ಮೂಲೆಯಲ್ಲಿರುವ 40 ಹುತಾತ್ಮರ ಮನೆಗಳಿಗೆ ಭೇಟಿ ನೀಡಿ ಮಣ್ಣನ್ನು ಸಂಗ್ರಹಿಸಿದ್ದಾರೆ.

'ನಾವು ಮರೆತಿಲ್ಲ, ನಾವು ಕ್ಷಮಿಸೋದೂ ಇಲ್ಲ': ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!

ಪುಲ್ವಾಮಾ ಹುತಾತ್ಮರಿಗಾಗಿ ಸ್ಮಾರಕ ನಿರ್ಮಾಣಕ್ಕಾಗಿ ಉಮೇಶ್ ಗೋಪಿನಾಥ್ ಹುತಾತ್ಮರ ಮನೆಗಳಿಂದ ಮಣ್ಣನ್ನು ಸಂಗ್ರಹಿಸುತ್ತಿದ್ದು, ಇದಕ್ಕಾಗಿ ಒಟ್ಟು 61 ಸಾವಿರ ಕೀ.ಮೀ ಕ್ರಮಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪುಲ್ವಾಮಾ ಹುತಾತ್ಮರ ಸ್ಮರಣಾರ್ಥ ಶ್ರೀನಗರದಲ್ಲಿ ಇಂದು ನಡೆದ ಸ್ಮಾರಕ ಉದ್ಘಾಟನೆಯಲ್ಲಿ ಉಮೇಶ್ ಗೋಪಿನಾಥ್ ಜಾಧವ್ ಸಂಗ್ರಹಿಸಿದ್ದ ಹುತಾತ್ಮರ ಮನೆಯ ಮಣ್ಣನ್ನು CRPF ಅತ್ಯಂತ ಗೌರವಯುತವಾಗಿ ಸ್ವೀಕರಿಸಿತು.

"