ಕೊರೋನಾ ವೈರಸ್ ಕಳೆದ ವರ್ಷ ಸೃಷ್ಟಿಸಿದ ಅನಾಹುತ ಯಾರು ಮರೆತಿಲ್ಲ. ಇದೀಗ ಅದೇ ಪರಿಸ್ಥಿತಿ ಮತ್ತೆ ಬಂದಿದೆ. ಕೊರೋನಾ ಸೋಂಕಿತರ ಸಂಖ್ಯೆ ಪ್ರತಿ 2 ಲಕ್ಷ ಗಡಿ ದಾಟುತ್ತಿದೆ. ಕಳೆದ ವರ್ಷ ನಟ ಸೋನು ಸೂದ್ ಸೇರಿಂತೆ ಹಲವರು, ಸಂಘ ಸಂಸ್ಥೆಗಳು ಮಾನವೀಯತೆ ಮೆರೆದು ನೆರವಿನ ಹಸ್ತ ಚಾಚಿತ್ತು. ಇದೀಗ ಇದೇ ರೀತಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸೇವೆ ಸಲ್ಲಿಸುತ್ತಿರುವ ವಡೋದರದ ಶುಭಾಲ್ ಶಾ ಕಾರ್ಯಕ್ಕೆ ದೇಶವೆ ಸಲಾಂ ಹೇಳಿದೆ.

ವಡೋದರ(ಏ.16): ಭಾರತದಲ್ಲೀಗ ಕೊರೋನಾ ಪ್ರಕರಣಗಳು ಸಂಖ್ಯೆ ಹಿಂದೆಂದೂ ಕಾಣದ ಗಡಿ ದಾಟಿದೆ. ಕೊರೋನಾ ಸೋಂಕಿಗೆ ಬಲಿಯಾಗುತ್ತಿದ್ದವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದೆ. ಇದರ ನಡುವೆ ವಡೋದರದ ಶುಭಾಲ್ ಶಾ ಸೋಂಕಿತರಿಗೆ ಉಚಿತ ಆಹಾರ ನೀಡುತ್ತಾ ಆರೈಕೆ ಮಾಡುತ್ತಿದ್ದಾರೆ. 

ರಾಜ್ಯದಲ್ಲಿ ಕೊರೋನಾಗೆ 10 ದಿನದಲ್ಲಿ 360 ಬಲಿ; ಈಗಲಾದ್ರೂ ಎಚ್ಚೆತ್ತುಕೊಳ್ಳಿ

ಕೊರೋನಾ ಸೋಂಕು ತಗುಲಿ ಬಳಲುತ್ತಿರುವ ಪ್ರತಿಯೊಬ್ಬರಿಗೂ ಹೈಜಿನಿಕ್ ಉಚಿತ ಆಹಾರ ನೀಡುತ್ತೇವೆ. ನಿಮ್ಮ ಮನೆ ಬಾಗಿಲಿಗೆ ಆರೋಗ್ಯಕರ ಆಹಾರ ನೀಡುತ್ತೇವೆ. ಕ್ವಾರಂಟೈನ್, ಐಸೋಲೇಶನ್‌ಗೆ ಒಳಗಾಗಿರುವವರಿಗೆ ಉಚಿತ ಆಹಾರ ನೀಡುತ್ತೇವೆ. ಇದರಲ್ಲಿ ಯಾವುದೇ ಪ್ರಚಾರತೆ ಇಲ್ಲ. ಸಣ್ಣ ಸಾಮಾಜಿಕ ಕಳಕಳಿ ಎಂದು ಶುಭಾಲ್ ಶಾ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

Scroll to load tweet…

ಬೆಂಗಳೂರೊಂದರಲ್ಲೇ ಆತಂಕದ ಪ್ರಮಾಣದ ಕೇಸ್ : ಸಾವೂ ಹೆಚ್ಚಳ- ಎಚ್ಚರ!.

ಶುಭಾಲ್ ಶಾ ಟ್ವೀಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಇವರ ಕಾರ್ಯಕ್ಕೆ ಮೆಚ್ಚುಗೆಗೆ ಸುರಿಮಳೆ ಬಂದಿದೆ. ಇದೇ ವೇಳೆ ಹಲವರು ಶುಭಾಲ್ ಶಾ ಜೊತೆ ಕೋಜೋಡಿಸಲು ಮುಂದಾಗಿದ್ದಾರೆ. ತಾವು ಕೂಡ ನಿಮ್ಮ ಜೊತೆ ಸೋಂಕಿತರಿಗೆ, ಅಗತ್ಯವಿರುವರಿಗೆ ಉಚಿತ ಆಹಾರ ನೀಡುವುದಾಗಿ ಹೇಳಿದ್ದಾರೆ.