ಬೆಂಗಳೂರೊಂದರಲ್ಲೇ ಆತಂಕದ ಪ್ರಮಾಣದ ಕೇಸ್ : ಸಾವೂ ಹೆಚ್ಚಳ- ಎಚ್ಚರ!

ಬೆಂಗಳೂರಿನಲ್ಲಿ ದಿನದಿನವೂ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮೊದಲ ಅಲೆಗಿಂತ ದ್ವಿಗುಣ ಪ್ರಮಾಣದಲ್ಲಿ ಕೇಸ್‌ಗಳು ಪತ್ತೆಯಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. 

Corona Cases record number Of high in bengaluru snr

  ಬೆಂಗಳೂರು (ಏ.16):  ಕೊರೋನಾ ಹಾವಳಿ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ 10 ಸಾವಿರಕ್ಕೂ ಹೆಚ್ಚಿನ ಸೋಂಕು ಪ್ರಕರಣ ದಾಖಲಾಗುವ ಮೂಲಕ ಉದ್ಯಾನ ನಗರಿ ‘ಮತ್ತೊಂದು ಮುಂಬೈ’ ಆಗುವ ಹಾದಿಯಲ್ಲಿ ಸಾಗಿದೆ.

ನಗರದಲ್ಲಿ ಗುರುವಾರ 10,497 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ಕರೋನಾ ಸೋಂಕಿನ ಸಾರ್ವಕಾಲಿಕ ದಾಖಲೆ.

ನಗರದಲ್ಲಿ ಮೊದಲ ಅಲೆಯ ವೇಳೆ ಅಕ್ಟೋಬರ್‌ 8ರಂದು 5121 ಸಂಖ್ಯೆಯೇ ದಾಖಲೆಯಾಗಿತ್ತು. ಆದರೆ, ಎರಡನೇ ಅಲೆಯ ಆರಂಭಿಕ ಘಟದಲ್ಲೇ ನಿತ್ಯ ಸೋಂಕಿನ ಪ್ರಮಾಣ 10 ಸಾವಿರ ದಾಟುವ ಮೂಲಕ ಆತಂಕ ಹುಟ್ಟಿಸಿದೆ.

ರಾಜ್ಯದಲ್ಲಿ 2020 ಮಾರ್ಚ್‌ಲ್ಲಿ ಆರಂಭಗೊಂಡಿದ್ದ ಮೊದಲ ಅಲೆಯಲ್ಲಿ ಆರು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, ಕಳೆದ ಐದು ದಿನಗಳಿಂದ ನಿರಂತರವಾಗಿ ಆರು ಸಾವಿರಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗುತ್ತಲೇ ಇವೆ. ಬುಧವಾರ ದಾಖಲಾಗಿದ್ದ 8,155 ಸೋಂಕಿತ ಪ್ರಕರಣವೇ ಅತ್ಯಧಿಕ ಎನ್ನಲಾಗಿತ್ತು.

ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್ ...

ಆದರೆ ಈ ಸಂಖ್ಯೆಯನ್ನು ಮೀರಿ ಗುರುವಾರ ಒಂದೇ ದಿನ 10,497 ಪ್ರಕರಣಗಳು ದೃಢಪಟ್ಟಿದ್ದು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 71,827ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,12,521 ಮುಟ್ಟಿದೆ. ಇದೇ ದಿನ 1807 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಸೋಂಕಿನಿಂದ 4,35,730 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 174 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 30 ಮಂದಿ ಮೃತ ಪಡುವುದರೊಂದಿಗೆ ಒಟ್ಟು ಮರಣ ಹೊಂದಿದವರ ಸಂಖ್ಯೆ 4963ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಜನರು ಕೋವಿಡ್‌ ನಿಯಂತ್ರಣಗಳನ್ನು ಕಡ್ಡಾಯವಾಗಿ ಅನುಸರಿಸದೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ಮೂರ್ನಾಲ್ಕು ದಿನದೊಳಗೆ ನಿತ್ಯದ ಸೋಂಕಿನ ಪ್ರಕರಣಗಳು 13 ಸಾವಿರಕ್ಕೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಯಸ್ಕರಲ್ಲೇ ಸೋಂಕು ಹೆಚ್ಚು:  20 ವರ್ಷದಿಂದ 49 ವರ್ಷದೊಳಗಿನ ವಯಸ್ಕರಲ್ಲೇ ಗುರುವಾರ ಹೆಚ್ಚು ಸೋಂಕು ಪತ್ತೆಯಾಗಿದ್ದು ಬರೋಬ್ಬರಿ 6674 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದು ಕೂಡ ಸಾರ್ವಕಾಲಿಕ ದಾಖಲೆಯಾಗಿದೆ.

ಉಳಿದಂತೆ 20-29 ವಯಸ್ಸಿನೊಳಗಿನ 2404, 30-39 ವರ್ಷದೊಳಗಿನ 2532 ಮತ್ತು 40-49 ವಯೋಮಿತಿಯೊಳಗಿನ 1738 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅದೇ ರೀತಿ 9 ವರ್ಷದೊಳಗಿನ 330 ಹಾಗೂ 50ರಿಂದ 59 ವರ್ಷದೊಳಗಿನ 1298 ಮಂದಿ, 60ರಿಂದ ಮೇಲ್ಪಟ್ಟವಯಸ್ಸಿನ 1428 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.

ಗುರುವಾರ ಮೃತಪಟ್ಟ30 ಮಂದಿ ಪೈಕಿ 70 ವರ್ಷ ಮೇಲ್ಪಟ್ಟರೇ ಹೆಚ್ಚು. 70 ವರ್ಷ ಮೇಲ್ಪಟ್ಟ9 ಪುರುಷರು 7 ಮಹಿಳೆಯರು ಸೇರಿ 16 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ 30ರಿಂದ 69 ವರ್ಷದೊಳಗಿನ 9 ಪುರುಷರು 5 ಮಹಿಳೆಯರು ಸಾವನ್ನಪ್ಪಿದ್ದು ಒಟ್ಟು 18 ಪುರುಷರು ಮತ್ತು 12 ಮಹಿಳೆಯರು ಮೃತಪಟ್ಟಿದ್ದಾರೆ.

Latest Videos
Follow Us:
Download App:
  • android
  • ios