ನವದೆಹಲಿ(ಜ.24): ಭಾರತ ಇದೀಗ ಗಣರಾಜ್ಯೋತ್ಸವದ ಅಂತಿಮ ತಯಾರಿಯಲ್ಲಿದೆ. ಕೊರೋನಾ ನಡುವೆ ಸಾಕಷ್ಟು ಮುಂಜಾಗ್ರತೆಯೊಂದಿಗೆ ಗಣತಂತ್ರ ದಿನ ಆಚರಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷತೆಗಳಿವೆ. ಇದರಲ್ಲಿ 18ನೇ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ರಿಯೋ ಕುದರೆ ಸಾಧನೆ ಪ್ರಮುಖವಾಗಿದೆ.

ಗಣರಾಜ್ಯೋತ್ಸವಕ್ಕೆ ಕರಾಚಿ ಬಂದರು ದಾಳಿ ಸ್ಥಬ್ಧಚಿತ್ರ; ಇಂಡೋ-ಪಾಕ್ ಯುದ್ಧ ಮೆಲುಕು ಹಾಕಲಿದೆ ನೌಕಾಪಡೆ!.

ಭಾರತದ 61ನೇ ಕ್ಯಾವಲ್ರಿ ರಿಜಿಮೆಂಟ್(ಅಶ್ವದಳ)ನಲ್ಲಿ ಸಕ್ರೀಯವಾಗಿರು ಏಕೈಕ ಕುದುರೆ ರಿಯೋ.  ರಿಯೋ ಈ ಬಾರಿಯ ಪರೇಡ್‌ನಲ್ಲಿ ಭಾರತೀಯ ಸೇನೆಯ 61ನೇ ಅಶ್ವದಳವನ್ನು ಮುನ್ನಡೆಸಲಿದೆ. 4ನೇ ವಯಸ್ಸಿನಿಂದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ರಿಯೋಗೆ ಇದು 18ನೇ ಪರೇಡ್ ಆಗಿದೆ. ಈ ಮೂಲಕ ಅತೀ ಹೆಚ್ಚು ಬಾರಿ ಪರೇಡ್‌ನಲ್ಲಿ ಪಾಲ್ಗೊಂಡು ಅಶ್ವದಳದ ಕಮಾಂಡರ್ ಎಂಬ ಹೆಗ್ಗಳಿಕೆಗೆ ರಿಯೋ ಪಾತ್ರವಾಗಲಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ದೇಶದ ಮೊದಲ ಮಹಿಳಾ ಪೈಲೆಟ್ ಭಾವನಾ ಕಾಂತ್!

ಸದ್ಯ ರಿಯೋ ವಯಸ್ಸು 21. ಕಳೆದ  17 ಪರೇಡ್‌ಗಳಲ್ಲಿ ರಿಯೋ ಅತ್ಯಂತ ಹುರುಪಿನಿಂದ ಹಾಗೂ ಯಾವುದೇ ಸಮಸ್ಯೆ ಇಲ್ಲದ ಪಾಲ್ಗೊಂಡಿದೆ. ಕಾರಣ ಪ್ರಾಣಿಗಳನ್ನು ಜನರ ಮುಂದೆ ಪರೇಡ್ ಮಾಡಿಸುವುದು, ಕ್ಯಾಮಾರ, ಲೈಟ್, ಧ್ವನಿವರ್ಧಕಗಳ ಮುಂದೆ ಪರೇಡ್ ಮಾಡಿಸುವುದು ಸವಾಲೇ ಸರಿ. ಆದರೆ ರಿಯೋ ಪ್ರತಿ ಬಾರಿ ಯಾವುದೇ ಸಮಸ್ಯೆ ಮಾಡಿಲ್ಲ ಎಂದು 61 ಕ್ಯಾವಲ್ರಿ ರಿಜಿಮೆಂಟ್ ಮುನ್ನಡೆಸುವ ಕ್ಯಾಪ್ಟನ್ ದೀಪಾಂಶು ಶೋರೋನ್ ಸುವರ್ಣನ್ಯೂಸ್.ಕಾಂಗೆ ಹೇಳಿದ್ದಾರೆ.

"

ಪ್ರತಿ ಪರೇಡ್‌ನಲ್ಲಿ ಪರಿಸ್ಥಿತಿ ನೋಡಿಕೊಂಡು ಹೆಚ್ಚುವರಿ ಕಮಾಂಡ್ ನೀಡಿದರೂ ರಿಯೋ ಅನುಸರಿಸಿದೆ. ಅಶ್ವದಳದ ಕಮಾಂಡರ್ ಆಗಿರವ ರಿಯೋ ನಮಗೆಲ್ಲ ಅಚ್ಚುಮೆಚ್ಚು. ಈ ಬಾರಿಯೂ ಪರೇಡ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಗರಿಷ್ಠ ಬಾರಿ ಪರೇಡ್‌ನಲ್ಲಿ ಪಾಲ್ಗೊಂಡ ಸಾಧನೆ ಮಾಡಲಿದೆ ಎಂದು ಕ್ಯಾ. ದೀಪಾಂಶು ಹೇಳಿದ್ದಾರೆ.