ಸಹರಾನ್‌ಪುರ-ದೆಹಲಿ ರೈಲಿನ ಬೋಗಿಯಲ್ಲಿ ಬೆಂಕಿ ಬೆಂಕಿ ಬಿದ್ದ ಭೋಗಿಯನ್ನು ಬೇರ್ಪಡಿಸಿದ ಪ್ರಯಾಣಿಕರು ಪ್ರಯಾಣಿಕರು ಬೋಗಿ ಬೇರ್ಪಡಿಸುತ್ತಿರುವ ದೃಶ್ಯ ವೈರಲ್‌

ಮೀರತ್‌(ಮಾ.5): ರೈಲೊಂದರ ಭೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರೈಲು ನಿಲ್ಲಿಸಿದ ಬಳಿಕ ರೈಲಿನಿಂದ ಕೆಳಗಿಳಿದ ಪ್ರಯಾಣಿಕರೆಲ್ಲರೂ ಸೇರಿ ಬೆಂಕಿ ಬಿದ್ದ ಭೋಗಿಯನ್ನು ಇತರ ಬೋಗಿಗಳಿಂದ ಎಳೆದು ಪ್ರತ್ಯೇಕಿಸಿದ ಘಟನೆ ನಡೆದಿದೆ. ಉತ್ತರಪ್ರದೇಶದ ಮೀರತ್‌(Meerut)ನಲ್ಲಿ ಈ ಘಟನೆ ಸಂಭವಿಸಿದ್ದು, ಸಹರಾನ್‌ಪುರದಿಂದ ದೆಹಲಿಗೆ ಹೋಗುತ್ತಿದ್ದ ಸಹರಾನ್‌ಪುರ-ದೆಹಲಿ ರೈಲಿನ ಇಂಜಿನ್ ಮತ್ತು ಎರಡು ಭೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಈ ವೇಳೆ ಧೈರ್ಯ ಪ್ರದರ್ಶಿಸಿದ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡ ಎರಡು ಬೋಗಿಗಳನ್ನು ಮತ್ತು ಎಂಜಿನ್ ಅನ್ನು ಉಳಿದ ಬೋಗಿಗಳಿಂದ ಪ್ರತ್ಯೇಕಿಸುವ ಸಲುವಾಗಿ ಎಲ್ಲರೂ ಸೇರಿ ಬೋಗಿಗಳನ್ನು ಎಳೆದು ಪ್ರತ್ಯೇಕಗೊಳಿಸುವಲ್ಲಿ ಯಶಸ್ವಿಯಾದರು. ಪ್ರಯಾಣಿಕರ ಈ ಪ್ರಯತ್ನದಿಂದ ಬೆಂಕಿ ಹರಡುವುದು ತಪ್ಪಿದ್ದು ರೈಲ್ವೆ ಇಲಾಖೆಗೆ ಆಗುತ್ತಿದ್ದ ಭಾರಿ ನಷ್ಟವನ್ನು ಪ್ರಯಾಣಿಕರು ತಪ್ಪಿಸಿದ್ದಾರೆ. ಮೀರತ್ (Meerut) ಬಳಿಯ ದೌರಾಲಾ ರೈಲು ನಿಲ್ದಾಣದಲ್ಲಿ (Daurala railway station) ಈ ಘಟನೆ ನಡೆದಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Scroll to load tweet…

ಈ ಬಗ್ಗೆ ಮಾತನಾಡಿದ ರೈಲ್ವೆ ವಿಭಾಗೀಯ ಮ್ಯಾನೇಜರ್, ಡಿಂಪಿ ಗಾರ್ಗ್ (Dimpy Garg) ಪ್ರಾಥಮಿಕ ತನಿಖೆಯು ರೈಲಿನ ನಾಲ್ಕನೇ ಬೋಗಿಯಲ್ಲಿ ಸಣ್ಣಗೆ ಉಂಟಾದ ಕಿಡಿಯಿಂದ ಬೆಂಕಿ ಆರಂಭವಾಗಿ ಹಬ್ಬಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. ಆದಾಗ್ಯೂ, ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ರೈಲು ಸಹರಾನ್‌ಪುರದಿಂದ ಹೊರಟಿತು ಮತ್ತು ದೌರಾಲಾ (ಮೀರತ್) ಬಳಿ ನಾವು ರೈಲಿನಲ್ಲಿ ಕಿಡಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಪಡೆದೆವು. 4 ನೇ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತೋರುತ್ತಿದೆ . ಬೆಂಕಿ ಹತ್ತಿಕೊಳ್ಳಲು ನಿಖರವಾದ ಕಾರಣಗಳನ್ನು ಕಂಡುಹಿಡಿಯಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಗಾರ್ಗ್ ಹೇಳಿದರು.

ರೈಲು ಅಪಘಾತ ತಡೆದ ರೈಲ್ವೆ ಸಚಿವರು... ಏನಿದು ಘಟನೆ
04460 ಸಂಖ್ಯೆಯ ಈ ರೈಲು ಸಹರಾನ್‌ಪುರದಿಂದ ದೆಹಲಿಗೆ ಹೋಗುತ್ತಿತ್ತು. ಬೆಂಕಿ ಕಾಣಿಸಿಕೊಂಡ ಕೋಚ್ ಅನ್ನು ರೈಲಿನ ಉಳಿದ ಭಾಗದಿಂದ ಬೇರ್ಪಡಿಸಲಾಗಿದೆ ಮತ್ತು ಈ ವಿಭಾಗದಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ ಎಂದು ಭಾರತೀಯ ರೈಲ್ವೇಯ ಟ್ರಾಫಿಕ್ ಇನ್ಸ್‌ಪೆಕ್ಟರ್ ವೈ.ಕೆ. ಝಾ (YK Jha) ಹೇಳಿದ್ದಾರೆ, ಈ ಮಧ್ಯೆ, ರೈಲಿನಲ್ಲಿದ್ದ ಪ್ರಯಾಣಿಕರನ್ನು ಮುಂದಿನ ಮೇಲ್ ರೈಲಿನಲ್ಲಿ ಅವರ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

IRCTC Confirm Ticket App: ರೇಲ್ವೇ ತತ್ಕಾಲ್‌ ಟಿಕೇಟ್ ಪಡೆಯುವುದು ಈಗ ಇನ್ನೂ ಸುಲಭ: ಬುಕ್‌ ಮಾಡುವುದು ಹೇಗೆ?

ನಿನ್ನೆಯಷ್ಟೇ ಕೇಂದ್ರ ರೈಲ್ವೆ ಸಚಿವರು ತೆಲಂಗಾಣದ ಸಿಕಂದರಾಬಾದ್‌ನಲ್ಲಿ ರೈಲು ಅಪಘಾತ ತಡೆಯಬಲ್ಲ ದೇಶಿ ನಿರ್ಮಿತ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರು.