ಅಯ್ಯೋ ಮಗಳೇ.. ವೈದ್ಯರ ನಿಲ್ಷಕ್ಷ್ಯಕ್ಕೆ ಪ್ರಾಣ ಬಿಟ್ಟ 17ರ ಹರೆಯದ ಹುಡುಗಿ
ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ 17 ವರ್ಷದ ಬಾಲಕಿಯೊಬ್ಬಳು ಜೀವ ಕಳೆದುಕೊಂಡ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಮಣಿಪುರಿಯ ಖಾಸಗಿ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ.
ಲಕ್ನೋ: ವೈದ್ಯರ ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ 17 ವರ್ಷದ ಬಾಲಕಿಯೊಬ್ಬಳು ಜೀವ ಕಳೆದುಕೊಂಡ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಮಣಿಪುರಿಯ ಖಾಸಗಿ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ. ಬಾಲಕಿಯ ಅಸ್ವಸ್ಥತೆಗೆ ಸಂಬಂಧವೇ ಇಲ್ಲದ ಇಂಜೆಕ್ಷನ್ ಕೊಟ್ಟ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ತಮ್ಮ ಹುಡುಗಿಯ ದೇಹವನ್ನು ಆಸ್ಪತ್ರೆ ಸಮೀಪ ಪಾರ್ಕ್ ಮಾಡಲಾಗಿದ್ದ ವಾಹನದಲ್ಲಿ ಬಿಟ್ಟು, ಆಕೆ ಸಾವನ್ನಪ್ಪಿದ್ದಾಳೆ ಎಂಬುದನ್ನು ಕೂಡ ತಿಳಿಸದೇ ಆಸ್ಪತ್ರೆ ಸಿಬ್ಬಂದಿ ಪರಾರಿಯಾಗಿದ್ದಾರೆ ಎಂದು ಸಾವಿಗೀಡಾದ ಹುಡುಗಿ ಮನೆಯವರು ಆರೋಪಿಸಿದ್ದಾರೆ.
ಈ ಹದಿಹರೆಯದ ಹುಡುಗಿಯ ಮನೆಯವರು, ಸಂಬಂಧಿಕರಿಗೆ ಹೆದರಿ ಇಡೀ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈಗ ಹುಡುಗಿ ಮನೆಯವರು ನ್ಯಾಯಕ್ಕಾಗಿ ಆಗ್ರಹಿಸಿ ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಹುಡುಗಿ ಮನೆಯವರ ಆರೋಪಕ್ಕೆ ಪುಷ್ಟಿ ನೀಡುವಂತೆ ಘಟನೆಯ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮೋಟಾರ್ ಸೈಕಲ್ ಮೇಲೆ ಹುಡುಗಿಯನ್ನು ಅಂಗಾತ ಮಲಗಿಸಿ ಆಸ್ಪತ್ರೆ ಸಿಬ್ಬಂದಿ ಪರಾರಿಯಾಗಿದ್ದಾರೆ.
ಪಾಕಿಸ್ತಾನದ ಬಲೋಚ್ ಪ್ರಾಂತ್ಯದಲ್ಲಿ ಮಸೀದಿ ಬಳಿ ಸ್ಫೋಟ: 52 ಜನರ ಸಾವು, 130ಕ್ಕೂ ಹೆಚ್ಚು ಜನರಿಗೆ ಗಾಯ
ಮೃತ ಹುಡುಗಿಯನ್ನು 17 ವರ್ಷದ ಭಾರ್ತಿ (Bharti) ಎಂದು ಗುರುತಿಸಲಾಗಿದೆ. ಈಕೆಗೆ ಮಂಗಳವಾರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಘಿರೋರ್ ಪ್ರದೇಶದ ಕರ್ಹಾಲ್ ರಸ್ತೆಯಲ್ಲಿರುವ ರಾಧಾ ಸ್ವಾಮಿ ಆಸ್ಪತ್ರೆಗೆ (Radha Swami Hospital)ಆಕೆಯ ಮನೆಯವರು ಆಕೆಯನ್ನು ಕರೆತಂದಿದ್ದರು. ಬುಧವಾರ ಈಕೆ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ಇದಾದ ನಂತರ ಆಕೆಯ ತಪಾಸಣೆಗೆ ಬಂದ ವೈದ್ಯರು ಆಕೆಗೆ ಇಂಜೆಕ್ಷನ್ ಒಂದನ್ನು ನೀಡಿದ್ದು, ಇದಾದ ಬಳಿಕ ಆಕೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇದಾದ ನಂತರ ಆಸ್ಪತ್ರೆ ಸಿಬ್ಬಂದಿ, ಆಕೆಯ ಆರೋಗ್ಯ ಹದಗೆಟ್ಟಿದೆ. ಇಲ್ಲಿ ಆಕೆಗೆ ಏನು ಮಾಡಲು ಸಾಧ್ಯವಿಲ್ಲ, ಆಕೆಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಆದರೆ ಅಷ್ಟರಲ್ಲಿ ಭಾರ್ತಿ ಸಾವನ್ನಪ್ಪಿದ್ದಾಳೆ ಎಂದು ಹುಡುಗಿಯ ಚಿಕ್ಕಮ್ಮ ಮನೀಷಾ ಎಂಬುವವರು ಆರೋಪಿಸಿದ್ದಾರೆ.
ಟಿವಿ ಡಿಬೇಟ್‌ನಲ್ಲಿ ಕ್ಯಾಮರಾ ಮುಂದೆಯೇ ಹೊಡೆದಾಡಿಕೊಂಡ ಪಾಕ್ ನಾಯಕರು: ವೀಡಿಯೋ
ಘಟನೆಯ ತಿಳಿದು ಸ್ಥಳಕ್ಕೆ ನೋಡಲ್ ಅಧಿಕಾರಿಯನ್ನು ಕಳುಹಿಸಿದ ಮುಖ್ಯ ವೈದ್ಯಾಧಿಕಾರಿಗಳಿಗೆ ಅಲ್ಲಿ ವೈದ್ಯರಾಗಲಿ ಸಿಬ್ಬಂದಿ ಆಗಲಿ ಯಾರೂ ಇಲ್ಲದೇ ಇರುವ ಮಾಹಿತಿ ಸಿಕ್ಕಿದ್ದು,ಕೂಡಲೇ ಅಲ್ಲಿಗೆ ಬಂದ ಅವರು ಆಸ್ಪತ್ರೆಯನ್ನು ಸೀಲ್ ಮಾಡಿದ್ದಾರೆ. ಈ ವೇಳೆ ಅಲ್ಲಿ ಶಸ್ತ್ರಚಿಕಿತ್ಸೆಗ ಒಳಗಾಗಿದ್ದ ರೋಗಿಯೊಬ್ಬರು ಇದ್ದು, ಅವರನ್ನುಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರ ಮಾಡಿ ಆಸ್ಪತ್ರೆಯನ್ನು ಸೀಲ್ ಮಾಡಲಾಯ್ತು. ಈ ಆಸ್ಪತ್ರೆ ನೋಂದಣಿಯಾಗಿದೆ. ಆದರೆ ಆಸ್ಪತ್ರೆಯನ್ನು ನಡೆಸುವವ ವೈದ್ಯನಲ್ಲ ಹೀಗಾಗಿ ಆತನ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (Chief Medical Officer) ಆರ್.ಸಿ ಗುಪ್ತ(RC Gupta) ಹೇಳಿದ್ದಾರೆ.
ಬಿಟ್ಟು ಹೋಗುತ್ತಿದ್ದ ಒಡೆಯನ ಬೈಕ್ ಏರದಂತೆ ತಡೆದ ಆನೆ: ಭಾವುಕ ವೀಡಿಯೋ ವೈರಲ್
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನಿಡುವಂತೆ ಆಗ್ರಹಿಸಿದ್ದಾರೆ.