ಬೆಂಗಳೂರು ಗ್ರಾಹಕರ ನ್ಯಾಯಾಲಯ ಮಹತ್ವದ ಆದೇಶ ಕ್ಯಾನ್ಸರ್‌ ಚಿಕಿತ್ಸೆಗೆ ಖರ್ಚಾದ ಹಣ ಪಾವತಿ ಮಾಡುವುದಿಲ್ಲ ಎಂದಿದ್ದ ಕಂಪನಿ  5 ಲಕ್ಷ ರೂ ವಾರ್ಷಿಕ ಶೇ.12ರಷ್ಟುಬಡ್ಡಿ ದರದಲ್ಲಿ ಪಾವತಿಸಲು ಆದೇಶ

ಬೆಂಗಳೂರು(ಮೇ.04): ಆರೋಗ್ಯ ವಿಮೆ ಮಾಡಿಸುವ ವೇಳೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಬಗ್ಗೆ ಮಾಹಿತಿ ತಿಳಿಸಿಲ್ಲ ಎಂಬ ಕಾರಣಕ್ಕೆ ಕ್ಯಾನ್ಸರ್‌ ಚಿಕಿತ್ಸೆಗೆ ವಿಮಾ ಹಣ ಪಾವತಿಸಲು ನಿರಾಕರಿಸಿದ ಖಾಸಗಿ ವಿಮಾ ಕಂಪನಿಗೆ ಒಂದು ಲಕ್ಷ ರು. ದಂಡ ವಿಧಿಸಿರುವ ಬೆಂಗಳೂರು ಗ್ರಾಹಕರ ನ್ಯಾಯಾಲಯ, ವಿಮೆದಾರರಿಗೆ ವಿಮೆ ಮಾಡಿಸಿದ 5 ಲಕ್ಷ ರು. ಮೊತ್ತವನ್ನು ವಾರ್ಷಿಕ ಶೇ.12ರಷ್ಟುಬಡ್ಡಿ ದರದಲ್ಲಿ ಪಾವತಿಸುವಂತೆ ಆದೇಶಿಸಿದೆ. ಈ ಮೂಲಕ ಒಟ್ಟು 6.7 ಲಕ್ಷ ರೂಪಾಯಿ ಪರಿಹಾರ ಮೊತ್ತ ಪಡೆದಿದ್ದಾರೆ.

ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗವಲ್ಲ, ಈ ಎರಡು ಆರೋಗ್ಯ ಸಮಸ್ಯೆಗಳಿರುವ ಕಾರಣಕ್ಕೆ ಕ್ಯಾನ್ಸರ್‌ ಚಿಕಿತ್ಸೆಗೆ ವಿಮಾ ಹಣ ಪಾವತಿಸಲು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ಇಂದಿರಾನಗರದ ಹಿರಿಯ ನಾಗರಿಕರೊಬ್ಬರು ತಮಗೆ, ಪತ್ನಿ ಹಾಗೂ ಇಬ್ಬರು ಪುತ್ರರಿಗೆ ಖಾಸಗಿ ವಿಮಾ ಕಂಪನಿಯಿಂದ 2011ರಲ್ಲಿ ಆರೋಗ್ಯ ವಿಮೆ ಮಾಡಿಸಿದ್ದರು. ಕಾಲ ಕಾಲಕ್ಕೆ ಅದನ್ನು ನವೀಕರಣ ಮಾಡಿಸಿಕೊಂಡು ಬಂದಿದ್ದರು. 2019ರ ನ.4ರವರೆಗೆ ವಿಮೆ ಚಾಲ್ತಿಯಲ್ಲಿತ್ತು. ಈ ಮಧ್ಯೆ 2018ರ ಮೇ ತಿಂಗಳಲ್ಲಿ ಅನಾರೋಗ್ಯಕ್ಕೆ ಗುರಿಯಾಗಿದ್ದರು. ವೈದ್ಯಕೀಯ ಪರೀಕ್ಷೆಗೆ ಒಳಗಾದಾಗ ‘ಬೆವರು ಗ್ರಂಥಿಯ ಕ್ಯಾನ್ಸರ್‌’ ಪತ್ತೆಯಾಗಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು, ಅದಕ್ಕಾಗಿ .11 ಲಕ್ಷ ಖರ್ಚಾಗಿತ್ತು. ನಂತರ ವಿಮಾ ಕಂಪನಿಗೆ ಚಿಕಿತ್ಸೆಗೆ ಖರ್ಚಾಗಿರುವ ಹಣವನ್ನು ಪಾವತಿಸುವಂತೆ ಕೋರಿದ್ದರು.

ಕ್ಯಾರಿ ಬ್ಯಾಗ್‌ಗೆ 12 ರೂ : ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 21,000 ರೂ. ಪರಿಹಾರ

ಈ ಮನವಿ ನಿರಾಕರಿಸಿದ್ದ ಖಾಸಗಿ ವಿಮಾ ಕಂಪನಿ, 10 ವರ್ಷಗಳಿಂದ ಅಧಿಕ ರಕ್ತದೊತ್ತಡ ಹಾಗೂ ಎರಡು ಮೂರು ವರ್ಷಗಳಿಂದ ಮಧುಮೇಹ ಸಮಸ್ಯೆಗಳು ಇರುವುದು ವೈದ್ಯಕೀಯ ತಪಾಸಣೆ ದಾಖಲೆಗಳಿಂದ ತಿಳಿದು ಬಂದಿದೆ. ಪಾಲಿಸಿ ನಿಯಮ ಪ್ರಕಾರ ಈ ಎರಡು ಆರೋಗ್ಯ ಸಮಸ್ಯೆಯಿದ್ದರೆ ವಿಮಾ ಹಣವನ್ನು ಕ್ಲೇಮು ಮಾಡಲು ಸಾಧ್ಯವಿರುವುದಿಲ್ಲ. ಜತೆಗೆ ಕ್ಯಾನ್ಸರ್‌ ಚಿಕಿತ್ಸೆಗೆ ಖರ್ಚಾದ ಹಣ ಪಾವತಿ ಮಾಡುವುದಿಲ್ಲ ಎಂದು ತಿಳಿಸಿತ್ತು.

ಬಡ್ಡಿ ಸಹಿತ ಠೇವಣಿ ಹಿಂದಿರುಗಿಸಲು ಗ್ರಾಹಕರ ನ್ಯಾಯಾಲಯದ ಆದೇಶ
ಠೇವುದಾರರು ಇಟ್ಟಿರುವ ಠೇವಣಿ ಹಣವನ್ನು ವಾಪಸು ಮಾಡುವಂತೆ ಸಹಕಾರಿ ಸಂಘವೊಂದರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗ ಒಂದೇ ದಿನ ಹತ್ತು ಆದೇಶಗಳನ್ನು ಹೊರಡಿಸಿದೆ.

ವಿಶ್ವ ಗುರು ವಿವಿಧೋದ್ದೇಶ ಸಹಕಾರ ಸಂಘ ಬೆಳಗಾವಿ ಶಾಖೆ ಮಹಾಲಿಂಗಪೂರದಲ್ಲಿ ಠೇವಣಿ ಇಟ್ಟಿದ್ದ ಚೆನ್ನಯ್ಯ ಶಿವರುದ್ರಯ್ಯ ಸ್ಥಾವರಿ, ಶಿಲ್ಪಾ ನೇಮಿನಾಥ ಪಟ್ಟನಶೆಟ್ಟಿ, ಸೋಮಶೇಖರ ಮರೆಗುದ್ದಿ, ಮಡಿವಾಳಪ್ಪ ಕೊಣ್ಣೂರ, ಪಾರವ್ವ ಶ್ರೀಕಾಂತ ಮುರುಗೋಡ, ಶಾರವ್ವ ಗುರುಪಾದಪ್ಪ ಅಂಗಡಿ, ಮಲ್ಲಯ್ಯ ಶಂಕ್ರಯ್ಯ ಮಠಪತಿ, ಶೈಲಾ ಮಲ್ಲಯ್ಯ ಮಠಪತಿ, ಶೋಭಾ ಸಂಜಯ ಧವನ್‌, ಶ್ರೇಯಾ ಈಶ್ವರ ಮಠಪತಿ ಇವರು ವಿಶ್ವ ಗುರು ವಿವಿಧೋದ್ದೇಶ ಸಂಘ ಬೆಳಗಾವಿ, ಅಧ್ಯಕ್ಷರು ಎಸ್‌.ಎಸ್‌.ಅರಬಳ್ಳಿ, ಮಾಜಿ ಅಧ್ಯಕ್ಷರು ರಾಜೇಂದ್ರಗೌಡ ಪಾಟೀಲ, ಮುಖ್ಯ ಆಡಳಿತಾ​ಕಾರಿ ಬಿ.ಆರ್‌.ಪಾಟೀಲ, ಪ್ರಧಾನ ವ್ಯವಸ್ಥಾಪಕರು ಅಲ್ಲದೇ ಮಹಾಲಿಂಗಪೂರ ಶಾಖಾ ವ್ಯವಸ್ಥಾಪಕ ಆನಂದ ಚೌಲಗೇರಿ ಇವರ ವಿರುದ್ಧ 2019 ರಲ್ಲಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಾಗಿರುತ್ತದೆ.

ನ್ಯಾನೋ ಕಾರಿನ ಪಾರ್ಕಿಂಗ್‌ಗೆ 91,000 ರೂ ದಂಡ; ಕೋರ್ಟ್ ಆದೇಶಕ್ಕೆ ಕಂಗಾಲಾದ ಒಡತಿ!

ಎಲ್ಲ ದಾಖಲೆ ಹಾಗೂ ಸಾಕ್ಷಿಗಳನ್ನು ಪರಿಸೀಲಿಸಿದ ಆಯೋಗ ಅಧ್ಯಕ್ಷರು ಎಸ್‌.ಎಸ್‌.ಅರಬಳ್ಳಿ ಹಾಗೂ ಮಾಜಿ ಅಧ್ಯಕ್ಷರು ರಾಜೇಂದ್ರಗೌಡ ಪಾಟೀಲ ಅವರ ವಿರುದ್ಧದ ದೂರು ವಜಾ ಮಾಡಿ ಉಳಿದ ಮೂವರು, ಪ್ರಕರಣ ದಾಖಲಾದ ದಿನದಿಂದ 60 ದಿನಗಳಲ್ಲಿ ಶೇ 6ರಂತೆ ಬಡ್ಡಿಸಮೇತ ಅವರ ಠೇವು ಹಣ ಕೊಡಬೇಕು. ತಪ್ಪಿದಲ್ಲಿ ಶೇ 9ರಂತೆ ಬಡ್ಡಿಸಮೇತ ಕೊಡಬೇಕು ಎಂದು ಆದೇಶ ಮಾಡಿದೆ.

ಇದಲ್ಲದೆ, ಮಾನಸಿಕ ವ್ಯಥೆಗಾಗಿ .5000, ದಾವಾ ವೆಚ್ಚ .2000 ಕೊಡಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗ ಅಧ್ಯಕ್ಷರು ವಿಜಯಕುಮಾರ ಪಾವಲೆ, ಸದಸ್ಯರುಗಳಾದ ಸಿ.ಎಚ್‌.ಸಮಿವುನ್ನೀಸಾ ಅಬ್ರಾರ ಮತ್ತು ರಂಗನಗೌಡ ದಂಡಣ್ಣವರ ಇವರಿದ್ದ ನ್ಯಾಯಪೀಠ ಆದೇಶ ಹೊರಡಿಸಿದೆ.