ದಡಾರ ಲಸಿಕೆಯಿಂದ ಕೋವಿಡ್‌ ವಿರುದ್ಧ ಶೇ.87.5ರಷ್ಟುರಕ್ಷಣೆ: ಅಧ್ಯಯನ ಹ್ಯೂಮನ್‌ ವ್ಯಾಕ್ಸಿನ್ಸ್‌ ಅಂಡ್‌ ಇಮ್ಯೂನೊಥೆರಪಾಟಿಕ್ಸ್‌ ಜರ್ನಲ್‌ನಲ್ಲಿ ಪ್ರಕಟ

ನವದೆಹಲಿ(ಜೂ.24): ಕೋವಿಡ್‌ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕಗಳ ಬೆನ್ನಲ್ಲೇ, ದಡಾರ ತಡೆಗೆ ಮಕ್ಕಳಿಗೆ ನೀಡುವ ಲಸಿಕೆಯು, ಅವರನ್ನು ಕೊರೋನಾದ ಗಂಭೀರ ಅಪಾಯದಿಂದ ತಡೆಗಟ್ಟಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಕೊರೋನಾ ವೈರಸ್‌ ಮೇಲೆ ದಡಾರ ಲಸಿಕೆಯ ಪರಿಣಾಮಗಳ ಕುರಿತು ವಿಶ್ವದಲ್ಲೇ ಮೊದಲ ಬಾರಿಗೆ ಪುಣೆಯ ಬಿ.ಜೆ.ವೈದ್ಯಕೀಯ ಕಾಲೇಜಿನ ತಜ್ಞರ ತಂಡವೊಂದು ಅಧ್ಯಯನ ನಡೆಸಿತ್ತು.

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​!

ಈ ವೇಳೆ, ದಡಾರಕ್ಕೆ ಲಸಿಕೆ ಪಡೆದ ಮಕ್ಕಳ ಮೇಲೆ ವೈರಸ್‌ ದಾಳಿ ನಡೆಸಿದ ಸಂದರ್ಭದಲ್ಲಿ ಅವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರುವುದು ಕಂಡುಬಂದಿದೆ. ಆದರ ಲಸಿಕೆ ಪಡೆಯದೇ ಇದ್ದ ಮಕ್ಕಳಲ್ಲಿ ಇಂಥ ತೀವ್ರತೆ ಹೆಚ್ಚಿರುವುದು ಕಂಡುಬಂದಿದೆ. ಕೊರೋನಾ ವೈರಸ್‌ ವಿರುದ್ಧ ದಡಾರ ಲಸಿಕೆ ಶೇ.87.5ರಷ್ಟುಪರಿಣಾಮಕಾರಿ ಎಂದು ಕಂಡುಬಂದಿದೆ ಎಂದು ವರದಿ ಹೇಳಿದೆ.

ಅಲ್ಲದೆ ದಡಾರ ಲಸಿಕೆ ಮಕ್ಕಳಿಗೆ ಕೊರೋನಾ ವಿರುದ್ಧ ಸುದೀರ್ಘ ಅವಧಿಗೆ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿದೆ. ಈ ಕುರಿತು ಇನ್ನಷ್ಟುಅಧ್ಯಯನ ನಡೆಯಬೇಕಿದೆ ಎಂದು ಹ್ಯೂಮನ್‌ ವ್ಯಾಕ್ಸಿನ್‌ ಮತ್ತು ಇಮ್ಯೂನೊಥೆರಪಾಟಿಕ್ಸ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.