Asianet Suvarna News

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​!

* ದೇಶದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ, ತಮ್ಮ ಇಕ್ಬಾಲ್ ಕಸ್ಕರ್‌ ಅರೆಸ್ಟ್

* ಡ್ರಗ್ಸ್ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ ಬಂಧಿಸಿದ ಎನ್‌ಸಿಬಿ ಅಧಿಕಾರಿಗಳು

 * ಜಮ್ಮು ಕಾಶ್ಮೀರದಿಂದ  ಪಂಜಾಬ್​ ಮೂಲಕ ಮುಂಬೈಗೆ ಡ್ರಗ್ಸ್ ತರಿಸಿ, ಮಾರಾಟ ಮಾಡುತ್ತಿದ್ದ ಇಕ್ಬಾಲ್

NCB takes Dawood Ibrahim brother Iqbal Kaskar into custody pod
Author
Bangalore, First Published Jun 23, 2021, 4:55 PM IST
  • Facebook
  • Twitter
  • Whatsapp

ಮಂಬೈ(ಜೂ.23): ಕುಖ್ಯಾತ ಭೂಗತ ಪಾತಕಿ ಹಾಗೂ ದೇಶದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ, ತಮ್ಮ ಇಕ್ಬಾಲ್ ಕಸ್ಕರ್‌ನನ್ನು NCB ಅಧಿಕಾರಿಗಳು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ನಡೆದಿದ್ದ ಅಂತಾರಾಜ್ಯ ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಲಾಗಿದೆ. ಜಮ್ಮು ಕಾಶ್ಮೀರದಿಂದ  ಪಂಜಾಬ್​ ಮೂಲಕ ಮುಂಬೈಗೆ ಡ್ರಗ್ಸ್ ತರಿಸುತ್ತಿದ್ದ ದಾವೂದ್ ಇಬ್ರಾಹಿಂ ತಮ್ಮ, ಬಳಿಕ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

2017ರಲ್ಲಿ ಮುಂಬೈನ ಥಾನೆಯಲ್ಲಿ ಬಿಲ್ಡರ್ಸ್‌ಗಳಿಂದ ಹಫ್ತಾ ವಸೂಲಿ ನಡೆಸುತ್ತಿದ್ದ ದಾವೂದ್‌ ತಮ್ಮ ಇಕ್ಬಾಲ್ ಕಸ್ಕರ್‌ನನ್ನು ಪೊಲೀಸರು ಬಂಧಿಸಿ, ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ 2003ರಲ್ಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬ್​ ಕೊಲ್ಲಿ ರಾಷ್ಟ್ರದಿಂದ ಇಕ್ಬಾಲ್ ಕಸ್ಕರ್‌ನನ್ನು ಗಡೀಪಾರು ಮಾಡಲಾಗಿತ್ತು.  ಆದರೆ 2007ರಲ್ಲಿ ಆತ ನಿರ್ದೋಷಿ ಎಂದು ಬಿಡುಗಡೆ ಮಾಡಲಾಗಿತ್ತು.

Follow Us:
Download App:
  • android
  • ios