ಉಕ್ರೇನ್‌ನಲ್ಲಿ ಆಪರೇಷನ್ ಗಂಗಾ ಮುಂದುವರಿಕೆ ಕೊನೆಯ ವ್ಯಕ್ತಿಯ ರಕ್ಷಣೆ ಆಗುವವರೆಗೂ ಸ್ಥಳಾಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರ ಹೇಳಿಕೆ
ನವದೆಹಲಿ(ಮಾ.5): ಕೊನೆಯ ವ್ಯಕ್ತಿ ಸ್ಥಳಾಂತರವಾಗುವವರೆಗೂ ಭಾರತ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಹೇಳಿದ್ದಾರೆ. ಭಾರತವೂ ಉಕ್ರೇನ್‌ನಲ್ಲಿ ಭಾರತದ ಕೊನೆಯ ಪ್ರಜೆಯ ಸ್ಥಳಾಂತರ ಆಗುವವರೆಗೂ ಈ ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ಮುಂದುವರೆಸಲಿದೆ ಎಂದು ಅವರು ಹೇಳಿದರು.
ನಾವು ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ನಿಲ್ಲಿಸುತ್ತೇವೆ, ನಾವು ಕೆಳಮುಖವಾಗಿ ಚಲಿಸುತ್ತಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ. ಕೊನೆಯ ವ್ಯಕ್ತಿಯನ್ನು ಸ್ಥಳಾಂತರಿಸುವವರೆಗೂ ನಾವು ಆಪರೇಷನ್ ಗಂಗಾವನ್ನು (Operation Ganga) ಮುಂದುವರಿಸುತ್ತೇವೆ. ಸರಿಸುಮಾರು 2000 ದಿಂದ 3000ಕ್ಕೂ ಹೆಚ್ಚು ಭಾರತೀಯರು ಇನ್ನೂ ಅಲ್ಲಿರುವ ಸಾಧ್ಯತೆ ಇದೆ. ಈ ಸಂಖ್ಯೆ ಬಹುಶಃ ಬದಲಾಗಬಹುದು ಎಂದು ಅರಿಂದಮ್ ಬಾಗ್ಚಿ (Arindam Bagchi) ಹೇಳಿದರು.
ಅಲ್ಲದೇ ನಾವು ಒಬ್ಬ ಬಾಂಗ್ಲಾದೇಶದ ಪ್ರಜೆಯನ್ನು ಸ್ಥಳಾಂತರಿಸಿದ್ದೇವೆ ಮತ್ತು ತನ್ನನ್ನು ಸ್ಥಳಾಂತರಿಸುವಂತೆ ನೇಪಾಳದ ಪ್ರಜೆಯೋರ್ವನಿಂದ ವಿನಂತಿಯನ್ನು ಸ್ವೀಕರಿಸಿದ್ದೇವೆ. ಇದುವರೆಗೆ ನಾವು ಸಲಹೆಗಳನ್ನು ನೀಡಿದ ನಂತರ 20,000 ಕ್ಕೂ ಹೆಚ್ಚು ಭಾರತೀಯರು ಉಕ್ರೇನ್ ಗಡಿಯನ್ನು ತೊರೆದಿದ್ದಾರೆ. ಆದರೆ ಭಾರತೀಯರನ್ನು ಒತ್ತೆಯಾಳುಗಳಾಗಿ ಉಕ್ರೇನಿಗರು ಇರಿಸಿಕೊಂಡಿದ್ದಾರೆ ಎಂಬ ವಿಚಾರವನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದರು.
Russia Ukraine Crisis ರಷ್ಯಾ ಯುದ್ಧದ ಬಗ್ಗೆ ಸುಳ್ಳು ಸುದ್ದಿ ಹರಡಿದರೆ 15 ವರ್ಷ ಜೈಲು
ಈ ಮಧ್ಯೆ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರ ತನ್ನ ಕಾಯಕವನ್ನು ಚುರುಕುಗೊಳಿಸಿದೆ. ಗುರುವಾರ ಸುಮಾರು 19 ವಿಮಾನಗಳಲ್ಲಿ 3726 ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಉಕ್ರೇನ್ ಯುದ್ಧ ಆರಂಭವಾದ ಬಳಿಕ ಇದು ಈವರೆಗಿನ ಒಂದು ದಿನದ ಬೃಹತ್ ರಕ್ಷಣಾ ಕಾರ್ಯಾಚರಣೆಯಾಗಿದೆ. ಈ ವಿಮಾನಗಳಲ್ಲಿ 63 ಕನ್ನಡಿಗರನ್ನೂ ಕರೆತರಲಾಗಿದ್ದು, 5 ದಿನದಲ್ಲಿ ಏರ್‌ಲಿಫ್ಟ್ ಅಡಿ ರಕ್ಷಿಸಲ್ಪಟ್ಟ ಕರುನಾಡಿಗರ ಸಂಖ್ಯೆ 149ಕ್ಕೇರಿಕೆಯಾಗಿದೆ.
Russia-Ukraine War: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಪರಾರಿ?
ಈ ಮೂಲಕ ಈವರೆಗೆ 34 ವಿಮಾನಗಳಲ್ಲಿ 7115 ಜನರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಕರೆತಂದಂತಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನೊಂದೆಡೆ, ಮುಂದಿನ 2 ದಿನಗಳಲ್ಲಿ 17 ವಿಮಾನಗಳ ಮೂಲಕ 7400 ಮಂದಿಯನ್ನು (ಶುಕ್ರವಾರ 3500, ಶನಿವಾರ 3900 ಜನರನ್ನು) ಭಾರತಕ್ಕೆ ಕರೆತರಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
798 ಜನರ ಕರೆತಂದ ‘ಗ್ಲೋಬ್ ಮಾಸ್ಟರ್’: ಗುರುವಾರ ರೊಮೇನಿಯಾದ (Romania) ಬುಕಾರೆಸ್ಟ್ (Bucharest), ಹಂಗೇರಿಯ(Hungary) ಬುಡಾಪೆಸ್ಟ್ (Budapest)ಮತ್ತು ಪೋಲೆಂಡ್‌ನ(Poland) ಝೇಶುವ್‌ನಿಂದ ಹೊರಟ 798 ಜನರನ್ನು ಹೊತ್ತ ವಾಯುಸೇನೆಯ (Air Force) ನಾಲ್ಕು ಸಿ-17 ಗ್ಲೋಬ್ ಮಾಸ್ಟರ್ (Globe Master) ವಿಮಾನಗಳು ಗುರುವಾರ ಬೆಳಗ್ಗೆ ನವದೆಹಲಿಗೆ (New Delhi) ಬಂದಿಳಿದವು. ಕೇಂದ್ರ ಸಚಿವ ಅಜಯ್ ಭಟ್ (Ajay Bhat) ಅವರು ಪ್ರಯಾಣಿಕರನ್ನು ಸ್ವಾಗತಿಸಿದರು. ಇವುಗಳ ಹೊರತಾಗಿ ಏರ್ ಇಂಡಿಯಾ, ಇಂಡಿಗೋ ವಿಮಾನಗಳು ರೊಮೇನಿಯಾ ರಾಜಧಾನಿ ಬುಕಾರೆಸ್ಟ್, ಹಂಗೇರಿಯ ಬುಡಾಪೆಸ್ಟ್ ಮತ್ತಿತರ ಉಕ್ರೇನ್ ನೆರೆಯ ರಾಷ್ಟ್ರಗಳಿಂದ ಏರ್‌ಲಿಫ್ಟ್ ಕಾರಾರಯಚರಣೆ ನಡೆಸಿದವು.
ಫೆ.24ರಿಂದ ಭಾರತ ಸರ್ಕಾರ ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲು ರೊಮೇನಿಯಾ, ಪೋಲೆಂಡ್, ಹಂಗೇರಿ ಸೇರಿದಂತೆ ಉಕ್ರೇನ್ ನೆರೆಯ ದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ನಾಲ್ವರು ಕೇಂದ್ರ ಸಚಿವರು ಉಕ್ರೇನ್ ಗಡಿ ದೇಶಗಳಿಗೆ ತೆರಳಿ ಸ್ಥಳಾಂತರ ಕಾರಾರಯಚರಣೆಯ ಉಸ್ತುವಾರಿ ವಹಿಸಿದ್ದಾರೆ.