ಖಾರ್ಗೋನ್ ಕೋಮುಘರ್ಷಣೆಯ ವೇಳೆ ಹಿಂದೂ ಸ್ನೇಹಿತನಿಂದ ಮುಸ್ಲಿಂ ವ್ಯಕ್ತಿಯ ರಕ್ಷಣೆ!

ಏ. 10 ರಂದು ತಾಲಾಬ್ ಚೌಕ್‌ನಲ್ಲಿ ಮೊದಲು ಘರ್ಷಣೆಗಳು ಸ್ಫೋಟಗೊಂಡವು ಮತ್ತು ಸಂಜಯ್ ನಗರ, ಖಾಜಿಪುರ, ತಾವಡಿ ಮೊಹಲ್ಲಾ, ಆನಂದ್ ನಗರ, ಭೌಸರ್ ಮೊಹಲ್ಲಾ ಮತ್ತು ಖಾಸ್ಖಾಸ್ವಾಡಿ ಸೇರಿದಂತೆ ಇತರ ಪ್ರದೇಶಗಳಿಗೆ ಹರಡಿತು.

Me and My family wouldnt have survived says Muslim Man Saved by Hindu Friend Amid Khargone Clashes san

ಭೋಪಾಲ್ (ಏ.14): ರಾಮನವಮಿ (Ram Navami) ಮೆರವಣಿಗೆ ಮೇಲೆ ಕಲ್ಲುತೂರಾಟ (Stone Pelting) ನಡೆಸಿದ್ದರಿಂದ ಕೋಪಗೊಂಡಿದ್ದ ಜನಸಮೂಹ ನಮ್ಮ ಮನೆಗೆ ನುಗ್ಗಿತ್ತು. ಈ ವೇಳೆ ನಾನು ಹಾಗೂ ನನ್ನ ಕುಟುಂಬದವರು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸುಮಿತ್ ಭಯ್ಯಾ (Sumith Bhaiya) ಅವರ ಸಹೋದರನನ್ನು ಕೇಳದೇ ಇದ್ದಿದ್ದರೆ ನಾವು ಅಲ್ಲೇ ಸಾಯುತ್ತಿದ್ದೆವು ಇದು ಖಾರ್ಗೋನ್ ಕೋಮು ಘರ್ಷಣೆಯ (Khargone Clashes)ವೇಳೆ ಹಿಂದೂಗಳ (Hindu) ಸಹಾಯದಿಂದಲೇ ಬದುಕಿ ಬಂದ ಸಂಜಯ್ ನಗರದ ವಿವಾಸಿ ಸಾದಿಕ್ ಖಾನ್ (Sadiq Khan) ಮಾತುಗಳು.

ಸಂಜೆ 7 ಗಂಟೆಯ ಸುಮಾರಿಗೆ, ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದ ಸುಮಿತ್ ಚಂದೋಕೆ ಅವರು ತಮ್ಮ ಸ್ನೇಹಿತ ಸಾದಿಕ್‌ನಿಂದ ಕರೆಯನ್ನು ಸ್ವೀಕರಿಸಿದ್ದರು. ಈ ವೇಳೆ ಅವರು ತಮ್ಮ ಮನೆಯಲ್ಲಿ ಅಡಗಿಕೊಂಡು ಸಹಾಯಕ್ಕಾಗಿ ಅಳುತ್ತಿದ್ದರೆ, ಹೊರಗಡೆ ಉದ್ರಿಕ್ತರ ಗಂಪು ಕಲ್ಲು ತೂರಾಟ ನಡೆಸಿದ್ದಲ್ಲದೆ, ಬಾಗಿಲನ್ನು ಬಡಿಯುತ್ತಿದ್ದರು.

'ನಾವು ನಮ್ಮ ಮನೆಯಲ್ಲಿದ್ದೆವು ಮತ್ತು ರಂಜಾನ್ ಉಪವಾಸದವಾಗಿರುವ  ಕಾರಣ ನಮ್ಮ ಉಪವಾಸವನ್ನು ಮುಗಿಸಲು ಸಿದ್ಧರಾಗುತ್ತಿದ್ದೆವು. ಈ ವೇಳೆ ನಮಗೆ ದೊಡ್ಡ ಶಬ್ದಗಳು ಮತ್ತು ಜನರು ಕೂಗುವುದನ್ನು ಕೇಳಿದೆವು. ನಾವು ಹೊರಗೆ ಬಂದು ನೋಡಿದಾಗ, ಹಲ್ಲು ಕಚ್ಚಿಕೊಂಡು, ಶಸ್ತ್ರಸಜ್ಜಿತವಾಗಿ ನಿಂತಿದ್ದ ಜನರ ಗುಂಪನ್ನು ಕಂಡಿದ್ದು ಮಾತ್ರವಲ್ಲ, ಅವರ ಕಣ್ಣುಗಳಲ್ಲಿ ರೋಷಾವೇಶವನ್ನು ನೋಡಿದ್ದೆವು. ನಮ್ಮ ಪಕ್ಕದ ಮನೆಯನ್ನು ಸುಟ್ಟು ಹಾಕುವ ಹೊತ್ತಿಗೆ ಅವರು ನನ್ನ ಕುಟುಂಬವನ್ನು ಖಂಡಿತ ಕೊಲ್ಲುತ್ತಾರೆ ಎಂದು ಗೊತ್ತಿತ್ತು. ಇದರಿಂದಾಗಿ ನಾನು ನಿಜವಾಗಿಯೂ ಭಯಗೊಂಡಿದ್ದೆ' ಎಂದು ಹೇಳಿದ್ದಾರೆ.

ಈ ವೇಳೆ ನಾನು ನನ್ನ ಸ್ನೇಹಿತರಲ್ಲಿ ಒಬ್ಬರಾದ ಸುಮಿತ್ ಚಂದೋಕೆಗೆ ಕರೆ ಮಾಡಿದೆ. ಸೊಂಟದ ಸಮಸ್ಯೆಯಿಂದ ಬಳಲುತ್ತಿದ್ದರೂ ತ್ವರಿತವಾಗಿ ಅವರು ನನ್ನ ಸಹಾಯಕ್ಕೆ ಬಂದರು ಎಂದು ಸಾದಿಕ್ ಹೇಳಿದ್ದಾರೆ. ಘರ್ಷಣೆಗಳು ಮೊದಲು ತಾಲಾಬ್ ಚೌಕ್‌ನಲ್ಲಿ ಏಪ್ರಿಲ್ 10 ರಂದು ಸ್ಫೋಟಗೊಂಡವು ಮತ್ತು ಸಂಜಯ್ ನಗರ, ಖಾಜಿಪುರ, ತಾವಡಿ ಮೊಹಲ್ಲಾ, ಆನಂದ್ ನಗರ, ಭೌಸರ್ ಮೊಹಲ್ಲಾ ಮತ್ತು ಖಾಸ್ಖಾಸ್ವಾಡಿ ಸೇರಿದಂತೆ ಇತರ ಪ್ರದೇಶಗಳಿಗೆ ಹರಡಿತು.

"ನನಗೆ ಕರೆ ಬಂದಾಗ, ನಾನು ನನ್ನ ಸಹೋದರನನ್ನು ಹೋಗಿ ಸಾದಿಕ್ ಮತ್ತು ಅವನ ಕುಟುಂಬವನ್ನು ರಕ್ಷಿಸಲು ಕೇಳಿದೆ. ಜನಸಮೂಹವು ಅವರ ಮನೆಗೆ ಬೆಂಕಿ ಹಚ್ಚಿದಾಗ ಅವರು ಸಾದಿಕ್‌ಗೆ ಸಹಾಯ ಮಾಡಲು ಗುಂಪಿನ ಮೂಲಕ ಮುಂದೆ ಹೋಗಿದ್ದರು. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದ ನಂತರ ಅವರು ಮನೆಗೆ ಹಿಂತಿರುಗಿದರು ಮತ್ತು ಗಲಭೆಕೋರರು ಸುಟ್ಟು ಹಾಕಲು ಪ್ರಯತ್ನಿಸುತ್ತಿದ್ದ ಸಾದಿಕ್ ಅವರ ವಾಹನವನ್ನು ಈ ವೇಳೆ ಸುಟ್ಟು ಹಾಕಿದರು' ಎಂದು ಸುಮಿತ್ ಹೇಳಿದ್ದಾರೆ.

ಸಾದಿಕ್ ಮತ್ತು ಅವರ ಕುಟುಂಬವನ್ನು ರಕ್ಷಿಸುವ ಅವರ ಪ್ರಯತ್ನಕ್ಕೆ ಅಲ್ಲಿದ್ದ ಜನಸಮೂಹದಿಂದ ವಿರೋಧ ವ್ಯಕ್ತವಾಯಿತು. ಈ ವೇಳೆ ನನ್ನ ಸಹೋದರನಿಗೆ ಕಿರುಕುಳವನ್ನೂ ನೀಡಲಾಯಿತು ಎಂದು ಸುಮಿತ್ ಹೇಳಿದ್ದಾರೆ. ಸುಮಿತ್ ಮತ್ತು ಸಾದಿಕ್ ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು ಮತ್ತು ಹಿಪ್ ನೆಕ್ರೋಸಿಸ್ಗೆ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಸಾದಿಕ್ ಅವರ ಬೆಂಬಲಕ್ಕೆ ನಿಂತಿದ್ದರು ಮತ್ತು ಅಂತಹ ಕಷ್ಟದ ಸಮಯದಲ್ಲಿ ತನ್ನ ಸ್ನೇಹಿತನಿಗೆ ಸಹಾಯ ಮಾಡುವುದು ಮಾನವೀಯತೆ ಎಂದು ನಾನು ಅಂದುಕೊಳ್ಳುತ್ತೇನೆ ಎಂದಿದ್ದಾರೆ.
ಇನ್ನೊಂದು ಇಂಥದ್ದೇ ಪ್ರಕರಣದಲ್ಲಿ, ಸಂಜಯ್ ನಗರದ ಇನ್ನೊಬ್ಬ ನಿವಾಸಿ ಶ್ಯಾಮ್ ಪ್ರಜಾಪತಿ, ಖಾರ್ಗೋನ್ ಘರ್ಷಣೆಯ ರಾತ್ರಿ ನೂರ್ ಜಹಾನ್ ಮತ್ತು ಅವರ ಸೊಸೆ ನಜ್ಮಾ ಬಿಗೆ ಅವರಿಗೆ ತಮ್ಮ ಮನೆಯಲ್ಲಿ ಮಲಗಲು ಅವಕಾಶ ನೀಡಿದ್ದರು.

ಜನಸಮೂಹ ಬಂದಾಗ ನಾನು ನನ್ನ ಸೊಸೆ ನಜ್ಮಾ ಬಿ ಜೊತೆ ಒಬ್ಬಂಟಿಯಾಗಿದ್ದೆವು. ನನ್ನ ಮನೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು, ಅವರನ್ನು ಪ್ರವೇಶಿಸದಂತೆ ತಡೆಯುವ ಯತ್ನದಲ್ಲಿ ಯಶಸ್ವಿಯಾದರೂ, ನಾನು ಹಾಗೂ ನನ್ನ ಸೊಸೆ ಮನಯೆಲ್ಲಿ ಮಲಗಲು ಭಯಪಟ್ಟಿದ್ದೆವು. ಈ ವೇಳೆ ನೆರಮನೆಯ ಸುಮನ್ ದೀದಿ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ನೀಡಿದ್ದರು ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios