Asianet Suvarna News Asianet Suvarna News

ಚುನಾವಣೆ ಮಧ್ಯೆ ಅಮಿತ್ ಶಾ ಹೊಗಳಿ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿದ ಮಾಯಾವತಿ!

* ಉತ್ತರ ಪ್ರದೇಶದಲ್ಲಿ ರಂಗೇರಿದ ಚುನಾವಣಾ ಕಣ

* ಅಮಿತ್ ಶಾ ಹೊಗಳಿದ ಮಾಯಾವತಿ

* ಊಹಾಪೋಹಗಳ ಬಗ್ಗೆ ಮುಂದುವರೆದ 

Mayawati Praises Amit Shah For Acknowledging BSP Ability To Get Dalit Votes pod
Author
Bangalore, First Published Feb 23, 2022, 9:21 PM IST | Last Updated Feb 23, 2022, 9:21 PM IST

ಲಕ್ನೋ(ಫೆ.23): ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಹೀಗಿರುವಾಗ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು 2007 ರಂತೆ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ಸಾಧನೆಗೆ ಮರಳಿ ಯತ್ನಿಸುತ್ತೇವೆ. ಈ ಮೂಲಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸರ್ಕಾರ ರಚಿಸುವ ಎಲ್ಲಾ ಕನಸುಗಳು ನುಚ್ಚು ನೂರಾಗುತ್ತವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಬಿಎಸ್‌ಪಿಯ ಪ್ರಸ್ತುತತೆ ಹಾಗೇ ಉಳಿಯಬೇಕು ಎಂದು ಉಲ್ಲೇಖಿಸಿದ್ದ ಅಮಿತ್ ಶಾ ಅವರನ್ನುದ್ದೇಶಿಸಿ ಸತ್ಯ ಒಪ್ಪಿಕೊಂಡಿರುವುದು ಅವರ ದೊಡ್ಡತನ ಎಂದು ಹೊಗಳಿದ್ದಾರೆ. 

ವಾಸ್ತವವಾಗಿ ಮಾಯಾವತಿ ಅವರು ಮತ ಚಲಾಯಿಸಿದ ನಂತರ ಸಾಮಾಜಿಕ ಮಾಧ್ಯಮ ಟ್ವಿಟರ್ ಹ್ಯಾಂಡಲ್‌ನಿಂದ ಪತ್ರಿಕಾ ಪ್ರಕಟಣೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಗೆ ಬಿಎಸ್‌ಪಿ ಮುಖ್ಯಸ್ಥರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದೂ ಹೇಳಲಾಗಿದೆ. ಈ ನಡುವೆ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ್ದಾರೆ. ಹೀಗಿರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಎಸ್‌ಪಿ ಕೂಡ ಚುನಾವಣೆಯಲ್ಲಿ ಪ್ರಬಲವಾಗಿ ಹೋರಾಡುತ್ತಿದೆ. ದಲಿತರು ಮತ್ತು ಮುಸ್ಲಿಮರ ಮತಗಳನ್ನು ಹೆಚ್ಚು ಪಡೆಯುತ್ತಿದೆ ಎಂಬ ಬಗ್ಗೆ ಪ್ರಶ್ನಿಸಲಾಗಿದೆ. 

ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಯಾವತಿ, ಅವರು ನೆಲದ ವಾಸ್ತವತೆಯನ್ನು ಒಪ್ಪಿಕೊಂಡಿರುವುದು ಅವರ ಉದಾತ್ತತೆ ಎಂದು ನಾನು ಭಾವಿಸುತ್ತೇನೆ. ಬಿಎಸ್ಪಿ ದಲಿತರು ಮತ್ತು ಮುಸ್ಲಿಮರಿಂದ ಮಾತ್ರವಲ್ಲದೆ ಇಡೀ ಉತ್ತರ ಪ್ರದೇಶದ ಹಿಂದುಳಿದ ವರ್ಗಗಳಿಂದಲೂ ಬೆಂಬಲ ಪಡೆಯುತ್ತಿದೆ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಮೇಲ್ಜಾತಿಯವರೂ ಇದ್ದಾರೆ. ಬಿಎಸ್ಪಿ ಇಡೀ ಸಮಾಜದ ಮತ ಪಡೆಯುತ್ತಿದೆ. ಮಾಯಾವತಿ ಅವರು 2007ರಂತೆಯೇ ಸಂಪೂರ್ಣ ಬಹುಮತದ ಆಧಾರದ ಮೇಲೆ ಖಂಡಿತವಾಗಿಯೂ ತಮ್ಮ ಸರ್ಕಾರವನ್ನು ರಚಿಸುವುದಾಗಿ ಹೇಳಿಕೊಂಡಿದ್ದಾರೆ.

ಬಿಎಸ್‌ಪಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಎಂದು ಶಾ ಈ ಹಿಂದೆ ಹೇಳಿದ್ದರು ಎಂಬುವುದು ಉಲ್ಲೇಖನೀಯ. ಅವರಿಗೆ ವೋಟ್ ಬರುತ್ತೆ ಅನ್ನೋ ನಂಬಿಕೆ ನಮಗಿದೆ, ಎಷ್ಟು ಸೀಟು ಬರುತ್ತೆ ಅಂತ ಗೊತ್ತಿಲ್ಲ, ಆದ್ರೆ ಖಂಡಿತಾ ವೋಟ್ ಹಾಕ್ತಾರೆ. ಜಾಟ್ ವೋಟ್ ಬ್ಯಾಂಕ್ ಬಿಎಸ್‌ಪಿ ಬಳಿ ಇದೆ ಎಂದು ಅವರು ಭಾವಿಸುತ್ತಾರೆಯೇ ಎಂಬ ಪ್ರಶ್ನೆಗೆ, ಮುಸ್ಲಿಮರು ಸಹ ಬಿಎಸ್‌ಪಿಗೆ ಹೆಚ್ಚಿನ ಸ್ಥಾನಗಳಲ್ಲಿ ಸಹಕರಿಸುತ್ತಾರೆ ಎಂದು ಶಾ ಹೇಳಿದ್ದಾರೆ.

ಜನ ಎಸ್ಪಿಯನ್ನು ತಿರಸ್ಕರಿಸಿದ್ದಾರೆ: ಮಾಯಾವತಿ

ಈ ಬಾರಿ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಜಾಟ್ ಮತದಲ್ಲಿ ದಕ್ಕೆ ಮಾಡುವ ಬಗ್ಗೆ ಹೇಳಿಕೆ ನೀಡಿದ್ದು, ಜಾಟ್ ಮತಗಳನ್ನು ಪಡೆಯುವುದು ಅವರ ಕನಸಾಗಿ ಉಳಿಯುತ್ತದೆ ಎಂದು ಮಾಯಾವತಿ ಹೇಳಿದ್ದಾರೆ. ಅಖಿಲೇಶ್ ಅವರು ತಮ್ಮ ಯಾದವ್ ಬಂಧುಗಳ ಮತ ಗಳಿಸಲು ಸಾಧ್ಯವೇ ಇಲ್ಲವೇ ಎಂದು ಮೊದಲು ಯೋಚಿಸಬೇಕು. ಅಖಿಲೇಶ್‌ ಒಬ್ಬ ನಕಲಿ ಅಂಬೇಡ್ಕರ್‌ವಾದಿ ಎಂದು ಆರೋಪಿಸಿದರು. ದಲಿತ ಗುರುಗಳು ಮತ್ತು ಮಹಾಪುರುಷರ ಹೆಸರಿನ ಜಿಲ್ಲೆಗಳು ಮತ್ತು ಯೋಜನೆಗಳನ್ನು ಅವರು ಹೇಗೆ ಬದಲಾಯಿಸಿದರು ಎಂಬುದು ನಮಗೆ ನೆನಪಿದೆ ಎಂದೂ ಕಿಡಿ ಕಾರಿದ್ದರು. 

ಗೆಲುವಿನ‌ ವಿಶ್ವಾಸ ವ್ಯಕ್ತಪಡಿಸಿದ ಮಾಯಾವತಿ

ಬಹುಜನ ಸಮಾಜ ಪಕ್ಷ 2007ರಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಪುನರಾವರ್ತಿಸಲಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ 10ರಂದು ಫಲಿತಾಂಶಗಳು ಪ್ರಕಟವಾದಾಗ 2007ರ ರೀತಿಯಲ್ಲೇ ಸಂಪೂರ್ಣ ಬಹುಮತದೊಂದಿಗೆ ಬಿಎಸ್ಪಿ ತನ್ನ ಸರ್ಕಾರವನ್ನು ರಚಿಸುತ್ತದೆ ಎಂದು ತಿಳಿಸಿದ್ದಾರೆ‌. ಫೆಬ್ರವರಿ 27ರಂದು ಉತ್ತರ ಪ್ರದೇಶದಲ್ಲಿ 5ನೇ ಹಂತದ ಚುನಾವಣೆ ನಡೆಯಲಿದೆ.

ಯುಪಿ ಚುನಾವಣಾ ಮಾಹಿತಿ:

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, ಐದನೇ ಹಂತ ಫೆಬ್ರವರಿ 27 ರಂದು, ಆರನೇ ಮಾರ್ಚ್ 3 ರಂದು ಹಂತ ಮತ್ತು ಕೊನೆಯ ಹಂತ ಮಾರ್ಚ್ 7 ರಂದು ಮತದಾನ. ಯುಪಿಯಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios