Asianet Suvarna News Asianet Suvarna News

ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಹೊಸ ನೀತಿ: ಗರ್ಭಪಾತಕ್ಕೆ ಸುರಕ್ಷಿತ ವ್ಯವಸ್ಥೆ!

* ವಿಶ್ವ ಜನಸಂಖ್ಯಾ ದಿನದಂದು 10 ವರ್ಷದ ನೀತಿ ಬಿಡುಗಡೆ

* ಜನಸಂಖ್ಯಾ ನಿಯಂತ್ರಣಕ್ಕೆ ಯೋಗಿ ಹೊಸ ನೀತಿ

* ಸಮುದಾಯಗಳ ನಡುವಿನ ಜನಸಂಖ್ಯಾ ಅಸಮತೋಲನ ತಡೆಗೆ ಕ್ರಮ

* ದೇಶದಲ್ಲೇ ಅತಿ ಹೆಚ್ಚು 20 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯ

UP unveils draft of population policy bill seeks public view pod
Author
Bangalore, First Published Jul 10, 2021, 12:50 PM IST

ಲಖನೌ(ಜು.10): ಉತ್ತರ ಪ್ರದೇಶ ಸರ್ಕಾರವು ವಿಶ್ವ ಜನಸಂಖ್ಯಾ ದಿನವಾದ ಜುಲೈ 11ರಂದು ಜನಸಂಖ್ಯಾ ನಿಯಂತ್ರಣ ನೀತಿ ಬಿಡುಗಡೆ ಮಾಡಲಿದೆ. ಮುಂದಿನ 10 ವರ್ಷದವರೆಗೆ- ಅಂದರೆ 2030ರವರೆಗೆ ರಾಜ್ಯದ ಜನಸಂಖ್ಯೆ ನಿಯಂತ್ರಣ ಮಾಡುವುದೇ ಇದರ ಉದ್ದೇಶವಾಗಿದೆ.

‘ರಾಜ್ಯದಲ್ಲಿ ಕೆಲವು ಸಮುದಾಯಗಳಲ್ಲಿ ಜನಸಂಖ್ಯೆ ಬಗ್ಗೆ ಜಾಗೃತಿ ಇಲ್ಲ. ಇಂಥ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಸಾಮುದಾಯಿಕ ಜಾಗೃತಿ ಮೂಡಿಸುವ ಯತ್ನಗಳನ್ನು ಸರ್ಕಾರ ಮಾಡಲಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಫರ್ಟಿಲಿಟಿ ದರವು (ಮಹಿಳೆಯೊಬ್ಬರಿಗೆ ಮಕ್ಕಳ ಜನನದ ಸರಾಸರಿ ಪ್ರಮಾಣ) ಶೇ.2.1ರಷ್ಟುಇದ್ದರೆ ಉತ್ತಮ. ಆದರೆ ಉತ್ತರ ಪ್ರದೇಶದಲ್ಲಿ ಶೇ.2.7 ಇದೆ. ಬಿಹಾರ ಹಾಗೂ ಉತ್ತರ ಪ್ರದೇಶ ಹೊರತುಪಡಿಸಿ ಮಿಕ್ಕ ರಾಜ್ಯಗಳು ಶೇ.2.1ರ ಮಿತಿಯಲ್ಲಿವೆ. ಹೀಗಾಗಿ 20 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶ, ಈಗ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಿದೆ.

ನೀತಿಯಲ್ಲಿ ಏನಿರಲಿದೆ?:

- ಗರ್ಭನಿರೋಧಕ ಔಷಧ ಸಾಕಷ್ಟುಲಭ್ಯ ಆಗುವಂತೆ ನೋಡಿಕೊಳ್ಳುವುದು.

- ಕುಟುಂಬ ಕಲ್ಯಾಣ ಯೋಜನೆಯ ಸಮರ್ಪಕ ಅನುಷ್ಠಾನ

- ಗರ್ಭಪಾತಕ್ಕೆ ಸುರಕ್ಷಿತ ವ್ಯವಸ್ಥೆ

- ಸಮುದಾಯಗಳ ನಡುವೆ ಜನಸಂಖ್ಯಾ ಸಮತೋಲನಕ್ಕೆ ಕ್ರಮ

- ಪೌಷ್ಟಿಕ ಆಹಾರ ನೀಡಿ ಶಿಶು ಹಾಗೂ ಗರ್ಭಾವಸ್ಥೆಯಲ್ಲೇ ಮಗು ಸಾವಿನ ಪ್ರಮಾಣ ಕಡಿಮೆ ಮಾಡುವುದು

Follow Us:
Download App:
  • android
  • ios