Asianet Suvarna News Asianet Suvarna News

ಗುಂಪು ಗುಂಪಾಗಿ ಒಳ ನುಸುಳುವಿಕೆ: ಉರಿಯಲ್ಲಿ ಹೆಚ್ಚುವರಿ ಸೇನೆ ನಿಯೋಜನೆ

  • ಉರಿಯಲ್ಲಿ ಬೃಹತ್ ಪ್ರಮಾಣದ ಒಳನುಸುಳುವಿಕೆ
  • ಹೆಚ್ಚುವರಿ ಸೇನೆಯ ನಿಯೋಜನೆ,ಇಂಟರ್‌ನೆಟ್ ಕಡಿತ
massive infiltration in Jammu and Kashmir forces deployed dpl
Author
Bangalore, First Published Sep 21, 2021, 1:59 PM IST

ಶ್ರೀನಗರ(ಸೆ.21): ಜಮ್ಮು ಕಾಶ್ಮೀರದಲ್ಲಿ ಬೃಹತ್ ಪ್ರಮಾಣದಲ್ಲಿ ಒಳ ನುಸುಳುವಿಕೆ ಕಂಡು ಬಂದ ಹಿನ್ನೆಲೆಯ ಭಾರತೀಯ ಸೇನೆ ಹೆಚ್ಚುವರಿ ಫೋರ್ಸ್‌ ಅನ್ನು ಸ್ಥಳದಲ್ಲಿ ನಿಯೋಜಿಸಿದೆ. ಭಾನುವಾರ - ಸೋಮವಾರ ರಾತ್ರಿಯ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಒಳನುಸುಳವಿಕೆ ಕಂಡು ಬಂದಿದೆ. ಉರಿ ವಿಭಾಗದಲ್ಲಿ ಕಾಶ್ಮೀರ ಕಣಿವೆಯಲ್ಲಿ6 ಜನ ಸಶಸ್ತ್ರ ಉಗ್ರರು ಒಳನುಗ್ಗಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದ್ದು ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.

ಬರಮುಲ್ಲಾ ಜಿಲ್ಲೆಯ ಉರಿ ವಿಭಾಗದಲ್ಲಿ ನೆಟ್‌ವರ್ಕ್ ಕಟ್ ಮಾಡಲಾಗಿದೆ. ವರದಿಗಳ ಪ್ರಕಾರ, ಸೇನೆಯು ಹೆಚ್ಚುವರಿ ಫೋರ್ಸ್  ತಂದಿದ್ದು ಸಂಪೂರ್ಣ ಪ್ರದೇಶದ ಮೇಲೆ ನಿಗಾ ಇರಿಸಿದೆ.

ಉಧಂಪುರ ಬಳಿ ಸೇನಾ ಹೆಲಿಕಾಪ್ಟರ್‌ ಪತನ, ಮುಂದುವರಿದ ರಕ್ಷಣಾ ಕಾರ್ಯ!

ಸೈನ್ಯವು ಈ ವಿಷಯದ ಬಗ್ಗೆ ಇದುವರೆಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ, ಆದರೆ ಬಹು ವರದಿಗಳ ಪ್ರಕಾರ, ಮಂಗಳವಾರ ಬೆಳಗಿನ ವೇಳೆಗೆ, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.

ಒಳನುಸುಳಲು ಪ್ರಯತ್ನ ಮಾಡಲಾಗಿದೆ. ನಾವು ಅವರನ್ನು ಹುಡುಕುತ್ತಿದ್ದೇವೆ. ಅವರು ಇನ್ನೂ ಈ ಕಡೆ ಇದ್ದಾರೆಯೇ ಅಥವಾ ಅವರು ಒಳನುಸುಳುವಿಕೆ ಪ್ರಯತ್ನ ಮಾಡಿ ನಂತರ ವಾಪಸ್ ಹೋಗಿದ್ದಾರೆಯೇ ಎಂಬುದು ಸ್ಪಷ್ಟವಿಲ್ಲ. ಆ ಸಮಸ್ಯೆಯನ್ನು ಸ್ಪಷ್ಟಪಡಿಸಲಾಗಿಲ್ಲ ಆದರೆ ನಾವು ಸಾಕಷ್ಟು ಎಚ್ಚರಿಕೆಯಿಂದ ಇದ್ದು ಒಳನುಸುಳುವಿಕೆ ನಡೆಯುವುದನ್ನು ನಾವು ನೋಡಿಕೊಳ್ಳುತ್ತಿದ್ದೇವೆ ಎಂದು ಶ್ರೀನಗರ ಮೂಲದ ಹೆಚ್‌ಕ್ಯೂ 15 ಕಾರ್ಪ್ಸ್‌ನ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಎರಡನೇ ಘಟನೆ

ಒಂದು ಗುಂಪನ್ನು ಇತ್ತೀಚೆಗೆ ಭಾರತೀಯ ಸೇನೆಯು ಬಂಡಿಪೋರಾ ಜಿಲ್ಲೆಯಲ್ಲಿ ತಡೆದಿದೆ. ಆದರೆ ಸೇನಾ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಒಳನುಸುಳುವ ಇನ್ನೊಂದು ಗುಂಪಿನ ಸಮಸ್ಯೆ ಎದುರಿಸುತ್ತಿದ್ದಾರೆ.

Follow Us:
Download App:
  • android
  • ios