ಮಾಸ್ಕ್ ಕಡ್ಡಾಯ, ಶಾಲೆಗಳಿಗೆ ರಜೆ; ಕೆರಳ ನಿಫಾ ವೈರಸ್‌ನಿಂದ ಮಾರ್ಗಸೂಚಿ ಪ್ರಕಟ!

ಕೇರಳದಲ್ಲಿ ನಿಫಾ ವೈರಸ್‌ಗೆ ಯುವಕ ಬಲಿಯಾದ ಬೆನ್ನಲ್ಲೇ ಮಾರ್ಗಸೂಚಿ ಪ್ರಕಟಗೊಂಡಿದೆ. ಕೆಲ ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಜೊತೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 
 

Mask mandatory school shuts in Malappuram after Nipah virus death confirmed Kerala ckm

ತಿರುವನಂತಪುರಂ(ಸೆ.16) ಕೇರಳದಲ್ಲಿ ನಿಫಾ ವೈರಸ್ ಹರಡು ಭೀತಿ ಎದುರಾಗಿದೆ. ಎರಡನೇ ನಿಫಾ ವೈರಸ್ ಸಾವು ಪ್ರಕರಣ ವರದಿಯಾದ ಬೆನ್ನಲ್ಲೇ ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪ್ರಮುಖವಾಗಿ ಮಲಪ್ಪುರಂ ಜಿಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಈ ಜಿಲ್ಲೆಯ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ ಯುವಕನ ನಿಫಾ ವೈರಸ್‌ಗೆ ಬಲಿಯಾಗಿದ್ದಾನೆ. ನಿಫಾ ವೈರಸ್‌ನಿಂದ 2 ಸಾವು ಖಚಿತವಾಗುತ್ತಿದ್ದಂತೆ ಕೆರಳ ಸರ್ಕಾರ ಅಲರ್ಟ್ ಆಗಿದೆ.

ಮಲಪ್ಪುರಂನ ಹಲವು ಗ್ರಾಮಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ 7 ಗಂಟೆ ವರೆಗೆ ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಸಾರ್ವಜನಿಕ ಪ್ರದೇಶಗಳಲ್ಲಿ ಭೇಟಿ ಸೇರಿದಂತೆ ಜನದಟ್ಟಣೆ ನಿಷೇಧಿಸಿದೆ. ಕೆಲ ಅಗತ್ಯ ವಸ್ತುಗಳಾದ ಹಾಲು ಸೇರಿದಂತೆ ಇತರ ವಸ್ತುಗಳ ಸೇವೆ ಬೆಳಗ್ಗೆ 6 ಗಂಟೆಯಿಂದ ಆರಂಭಿಸಲು ಅವಕಾಶವಿದೆ. 

ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ 24 ವರ್ಷದ ಯುವಕ ನಿಫಾ ವೈರಸ್‌ಗೆ ಬಲಿ, ಎಲ್ಲೆಡೆ ಅಲರ್ಟ್!

ಜಿಲ್ಲೆಯ ಸಿನಿಮಾ ಥಿಯೇಟರ್‌ಗಳನ್ನು ಮುಚ್ಚಲು ಸೂಚಿಸಲಾಗಿದೆ. ನಿಫಾ ವೈರಸ್ ಪತ್ತೆಯಾದ ಸುತ್ತ ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಲ್ಲಿ ಶಾಲಾ ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಶಾಲಾ ಕಾಲೇಜಿನಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇನ್ನು ಸಾರ್ವಜನಿಕ ಪ್ರದೇಶದಲ್ಲೂ ಮಾಸ್ಕ ಕಡ್ಡಾಯ ಮಾಡಲಾಗಿದೆ. ಪ್ರಾಣಿ ಪಕ್ಷಿಗಳು ಕಚ್ಚಿರುವ ಯಾವುದೇ ಆಹಾರ ಸೇವಿಸದಂತೆ ಸೂಚಿಸಲಾಗಿದೆ. 

ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ವಾಂಡೂರ್‌ನವನಾದ 23 ವರ್ಷದ ವಿದ್ಯಾರ್ಥಿ ಜಾಂಡೀಸ್ ರೀತಿಯ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತವರಿಗೆ ಮರಳಿದ್ದ. ಒಂದು ವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಸೆ.9ರಂದು ಆತ ಕೊನೆಯುಸಿರೆಳೆದಿದ್ದ. ಕೋಳಿಕ್ಕೋಡ್‌ನಲ್ಲಿ ಈತನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ನಿಪಾ ವೈರಾಣು ಸೋಂಕಿನ ಲಕ್ಷಣ ಕಂಡುಬಂದಿತ್ತು. ಹೀಗಾಗಿ ಉನ್ನತ ಪರಿಶೀಲನೆಗಾಗಿ ಆ ಮಾದರಿಯನ್ನು ಪುಣೆಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ನಿಫಾ ವೈರಸ್ ದೃಢಪಟ್ಟಿತ್ತು. ಇದು ನಿಫಾ ವೈರಸ್‌ಗೆ ಈ ವರ್ಷ ಬಲಿಯಾದ 2ನೇ ಪ್ರಕರಣವಾಗಿದೆ.

ಪ್ರಾಣಿಗಳಿಂದ ಮಾನವರಿಗೆ ಹಬ್ಬುವ ವೈರಸ್‌ ಇದು. ಸೋಂಕು ಹೊಂದಿದ ಬಾವಲಿ, ಹಂದಿ ಅಥವಾ ಹಣ್ಣು ಹುಳಗಳಿಂದ ಈ ರೋಗ ಮಾನವರ ಸಂಪರ್ಕಕ್ಕೆ ಬರಬಹುದು. ಸೋಂಕಿತ ವ್ಯಕ್ತಿಯ ಸಂಪರ್ಕದಿಂದಲೂ ಕಾಣಿಸಿಕೊಳ್ಳುತ್ತದೆ. 1998ರಲ್ಲಿ ಮೊದಲ ಬಾರಿಗೆ ಮಲೇಷ್ಯಾದಲ್ಲಿ ಕಂಡುಬಂದಿತ್ತು.

ನಿಫಾ ವೈರಸ್ ಖಚಿತಗೊಂಡ ಬೆನ್ನಲ್ಲೇ ಕೇರಳದ 14ರ ಬಾಲಕ ಸಾವು, ಕರ್ನಾಟಕದಲ್ಲಿ ಅಲರ್ಟ್!
 

Latest Videos
Follow Us:
Download App:
  • android
  • ios