ಅಯೋಧ್ಯೆ ಗರ್ಭಗುಡಿ ಪ್ರವೇಶಿಸಿ ರಾಮಲಲ್ಲಾನ ದರ್ಶನ ಪಡೆದು ತೆರಳಿದ ವಾನರ
ರಾಮ ಮಂದಿರದ ಗರ್ಭಗುಡಿಗೆ ಮಂಗಳವಾರ ಸಂಜೆ 5:50ರ ವೇಳೆಗೆ ಕೋತಿಯೊಂದು ಪ್ರವೇಶಿಸಿದ ಪ್ರಸಂಗ ನಡೆದಿದೆ. ಇದನ್ನು ಕಂಡ ಜನರು 'ರಾಮನನ್ನು ಭೇಟಿ ಮಾಡಲು ಹನುಮ ಬಂದಿದ್ದಾನೆ' ಎಂದು ವರ್ಣಿಸಿದ್ದಾರೆ.
ಅಯೋಧ್ಯೆ: ರಾಮ ಮಂದಿರದ ಗರ್ಭಗುಡಿಗೆ ಮಂಗಳವಾರ ಸಂಜೆ 5:50ರ ವೇಳೆಗೆ ಕೋತಿಯೊಂದು ಪ್ರವೇಶಿಸಿದ ಪ್ರಸಂಗ ನಡೆದಿದೆ. ಇದನ್ನು ಕಂಡ ಜನರು 'ರಾಮನನ್ನು ಭೇಟಿ ಮಾಡಲು ಹನುಮ ಬಂದಿದ್ದಾನೆ' ಎಂದು ವರ್ಣಿಸಿದ್ದಾರೆ. ದೇಗುಲದ ದಕ್ಷಿಣ ದ್ವಾರದಿಂದ ಪ್ರವೇಶಿಸಿದ ಕೋತಿ, ನೇರವಾಗಿ ಗರ್ಭ ಗುಡಿಗೆ ಲಗ್ಗೆ ಇಟ್ಟಿತು. ಇದನ್ನು ಕಂಡ ಸಿಬ್ಬಂದಿ, ಉತ್ಸವ ಮೂರ್ತಿಯನ್ನು ಬೀಳಿಸಿದರೆ ಎಂಬ ಆತಂಕದಿಂದ ಗರ್ಭಗುಡಿ ಕಡೆಗೆ ಬಂದರು. ಇದನ್ನು ಕಂಡ ವಾನರ, ನಿಧಾನವಾಗಿ ಪೂರ್ವ ದ್ವಾರದ ಕಡೆಗೆ ತೆರಳಿ ಯಾವುದಕ್ಕೂ, ಯಾರಿಗೂ ಹಾನಿ ಮಾಡದೆ ಹೊರ ಹೋಗಿದೆ ಎಂದು ಸ್ವತಃ ಮಂದಿರ ಟ್ರಸ್ಟ್ ಮಾಹಿತಿ ನೀಡಿದೆ.
ಪ್ರತಿಮೆ ನಿರ್ಮಾಣಕ್ಕೆ ರಾಮನೇ ನನ್ನನ್ನು ಆಯ್ಕೆ ಮಾಡಿದ
ಅಯೋಧ್ಯೆ: 'ರಾಮನೇ ನನ್ನ ರಕ್ಷಕ. ತನ್ನ ಮೂರ್ತಿಯನ್ನು ರೂಪಿಸಿಕೊಳ್ಳಲು ಆತನೇ ನನ್ನನ್ನು ಆಯ್ಕೆ ಮಾಡಿದ' ಎಂದು ಅಯೋಧ್ಯೆ ರಾಮ ಪ್ರತಿಮೆ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಹರ್ಷಿಸಿದ್ದಾರೆ. ಮಂಗಳವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, 'ರಾಮನು ನನ್ನನ್ನು ಮತ್ತು ನನ್ನ ಕುಟುಂಬ ವನ್ನು ಎಲ್ಲಾ ಕೆಟ್ಟ ಸಮಯಗಳಿಂದ ರಕ್ಷಿಸುತ್ತಿದ್ದಾನೆ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಆತನೇ ನನ್ನನ್ನು ಈ ಶುಭ ಕಾರ್ಯಕ್ಕೆ ಆಯ್ಕೆ ಮಾಡಿದ್ದಾರೆ ಎಂದು ನಾನು ಬಲವಾಗಿ ನಂಬುತ್ತೇನೆ' ಎಂದರು.
ವಿಜಯಪುರ ರಾಮೋತ್ಸವ, ಆರಿದ್ದ ದೀಪ ಮತ್ತೆ ಉರಿದು ಅಚ್ಚರಿ, ರಾಮನ ಪೂಜೆ ವೇಳೆ ಕೋತಿ ಪ್ರತ್ಯಕ್ಷ!
'ವಿಗ್ರಹವನ್ನು ಕೆತ್ತಲು ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೆ. ಆದರೆ ಇದು ವ್ಯರ್ಥವಲ್ಲ. ಅವು ಅತ್ಯಂತ ಮೌಲ್ಯಯು ತಕ್ಷಣಗಳು. ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಮತ್ತು ಇದು ನನ್ನ ಜೀವನದ ಅತ್ಯುತ್ತಮ ದಿನ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. 'ನಾನು ನನ್ನ ತಂದೆಯಿಂದ ಶಿಲ್ಪಕಲೆಯನ್ನು ಕಲಿತಿದ್ದೇನೆ. ಅವರು ಇಂದು ಇಲ್ಲಿ ಇದ್ದಿದ್ದರೆ ನನ್ನ ವಿಗ್ರಹವನ್ನು ನೋಡಿ ತುಂಬಾ ಹೆಮ್ಮೆ ಪಡುತ್ತಿದ್ದರು' ಎಂದು ಅವರು ಹೇಳಿದರು.
ರಾಜಸ್ಥಾನ ಶಿಲ್ಪಿ ಕೆತ್ತಿದ ರಾಮನ ಫೋಟೋ ಲೀಕ್
ಅಯೋಧ್ಯೆ: ರಾಮಮಂದಿರದಲ್ಲಿ ಪ್ರತಿಷ್ಠಾಪಿಸುವುದಕ್ಕಾಗಿ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಕೆತ್ತಿದ್ದ ಬಿಳಿಯ ಶಿಲೆ ರಾಮಲಲ್ಲಾ ಮೂರ್ತಿಯ ಫೋಟೋ ಸೋರಿಕೆಯಾಗಿದೆ. ಬಿಳಿಯ ಶಿಲೆಯಲ್ಲಿ ಕೆತ್ತಲಾಗಿರುವ ಬಾಲಕ ರಾಮ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣಗಳನ್ನು ಹಿಡಿದುಕೊಂಡಿದ್ದು, ರಾಮ ಮೂರ್ತಿಯ ಸುತ್ತಲೂ ಇರುವ ಕಮಾನಿನಲ್ಲಿ ವಿಷ್ಣುವಿನ ದಶಾವತಾರಗಳನ್ನು ಕೆತ್ತಲಾಗಿದೆ. ಮೇಲ್ಬಾಗದಲ್ಲಿ ಸೂರ್ಯ, ಗದೆ ಮತ್ತು ಕಮಲಗಳನ್ನು ಕೆತ್ತಲಾಗಿದೆ. ಇದರಲ್ಲೂ ಸಹ ಬಾಲರಾಮ ಕಮಲದ ಮೇಲೆ ನಿಂತಿದ್ದು, ಎರಡು ಬದಿಗಳಲ್ಲಿ ಆಂಜನೇಯ ಮತ್ತು ಗರುಡನ ವಿಗ್ರಹಗಳನ್ನು ಕೆತ್ತಲಾಗಿದೆ.
ಎಂದೂ ಕಾಣದ ಕೋತಿರಾಯ ಆಂಜಯೇಯ ವಿಗ್ರಹ ಪ್ರತಿಷ್ಠಾಪನೆ ವೇಳೆ ಪ್ರತ್ಯಕ್ಷ! ತಣಿಗೆರೆ ಗ್ರಾಮದಲ್ಲಿ ಅಚ್ಚರಿ!