ವಿಜಯಪುರ ರಾಮೋತ್ಸವ, ಆರಿದ್ದ ದೀಪ ಮತ್ತೆ ಉರಿದು ಅಚ್ಚರಿ, ರಾಮನ ಪೂಜೆ ವೇಳೆ ಕೋತಿ ಪ್ರತ್ಯಕ್ಷ!
ವಿಜಯಪುರದಲ್ಲಿ ರಾಮಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ನಡುವೆ ಅಲ್ಲಲ್ಲಿ ರಾಮನ ಪವಾಡಗಳಿಗೆ ಜನರು ಆಶ್ಚರ್ಯಗೊಂಡಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.23) : ಅಯೋಧ್ಯೆಯಲ್ಲಿ ನೂರಾರು ವರ್ಷಗಳ ಕನಸು ನನಸಾಗಿದೆ. ರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಇತ್ತ ಗುಮ್ಮಟನಗರಿ ವಿಜಯಪುರದಲ್ಲಿ ರಾಮಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಈ ನಡುವೆ ಅಲ್ಲಲ್ಲಿ ರಾಮನ ಪವಾಡಗಳಿಗೆ ಜನರು ಆಶ್ಚರ್ಯಗೊಂಡಿದ್ದಾರೆ.
ಅಚ್ಚರಿಯ ರೀತಿಯಲ್ಲಿ ತಾನಾಗಿಯೇ ಉರಿದ ದೀಪ..!
ಹೌದು, ರಾಮ ಮಂದಿರ ಉದ್ಘಾಟನೆ ಬಳಿಕ ನಡೆದ ದೀಪೋತ್ಸವ ವೇಳೆ ಇಂಥದ್ದೊಂದು ಅಚ್ಚರಿ ನಡೆದಿದೆ. ಆರಿ ಹೋಗಿದ್ದ ದೀಪ ಮತ್ತೆ ತಾನಾಗಿಯೇ ಪ್ರಜ್ವಲಿಸಿ ರಾಮ ಭಕ್ತರಲ್ಲಿ ಅಚ್ಚರಿಯನ್ನ ಮೂಡಿಸಿದೆ. ಇಂಥ ಘಟನೆ ನಡೆದಿರೋದು ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ನಾಗರಾಜ್ ಬಿರಾದಾರ್ ಎಂಬುವ ಮನೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ರಾಮ ದೀಪೋತ್ಸವ ಹಿನ್ನೆಲೆ ನಾಗರಾಜ್ ಮನೆಯ ಗೇಟಿನ ಎಡ ಹಾಗೂ ಬಲಭಾಗದಲ್ಲಿ ದೀಪಗಳನ್ನ ಹಚ್ಚಲಾಗಿದೆ. ಈ ವೇಳೆ ಗೋಮಾತೆಯೊಂದು ಮನೆ ಎದುರು ಹಸಿದು ಬಂದಿದೆ. ಇದನ್ನ ಗಮನಿಸಿದ ನಾಗರಾಜ್ ತಾಯಿ ಗೋವಿಗೆ ಆಹಾರ ತಂದು ತಿನ್ನಿಸುತ್ತಿದ್ದಾರೆ. ಇದನ್ನ ಸ್ವತಃ ನಾಗರಾಜ್ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ಮಾಡ್ತಾ ಇದ್ರು. ಆದ್ರೆ ಗೇಟ್ ನ ಬಲಭಾಗದಲ್ಲಿದ್ದ ದೀಪ ಆರಿ ಹೋಗಿದೆ. ಆದ್ರೆ ವಿಡಿಯೋ ಚಿತ್ರಿಕರಣ ಮುಂದುವರೆದಿರುವಾಗಲೇ ಕ್ಷಣಾರ್ಧದಲ್ಲಿ ಆರಿದ್ದ ದೀಪ ಮತ್ತೆ ಪ್ರಜ್ವಲಿಸಿದೆ.
ಅಯೋಧ್ಯೆಗೆ ಗೈರಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಪತ್ರಕ್ಕೆ ಪ್ರತಿಕ್ರಿಯಿಸಿ ಲೆಟರ್ ಬರೆದ ಪ್ರಧಾನಿ ಮೋದಿ
ಮೊಬೈಲ್ ದೃಶ್ಯ ನೋಡುವಾಗ ಅಚ್ಚರಿ ಗಮನಕ್ಕೆ..!
ಇದು ಆರಂಭದಲ್ಲಿ ಈ ಅಚ್ಚರಿ ಗಮನಕ್ಕೆ ಬಂದಿಲ್ಲ. ಬದಲಿಗೆ ಆಕಳಿಗೆ ಆಹಾರ ನೀಡುವ ವಿಡಿಯೋ ದೃಶ್ಯಾವಳಿ ನೋಡುವಾಗ ಈ ಅಚ್ಚರಿ ಗಮನಕ್ಕೆ ಬಂದಿದೆ. ಬಳಿಕ ಎಲ್ಲೆಡೆ ಈ ವಿಡಿಯೋ ವೈರಲ್ ಆಗಿದೆ. ಇದನ್ನ ರಾಮನ ಪವಾಡವೇ ಎಂದು ಹೇಳಲಾಗ್ತಿದೆ.
ರಾಮನ ಪಾದದ ಗುರುತು ಪತ್ತೆ..!
ಶ್ರೀರಾಮ ಮಂದಿರ ಉದ್ಘಾಟನೆಯ ದಿನವೇ ರಾಮ ದೇವರ 500 ವರ್ಷಗಳ ಹಳೆಯದು ಎನ್ನಲಾದ ಕಲ್ಲಿನಲ್ಲಿಯ ಪಾದದ ಗುರು ಪತ್ತೆಯಾಗಿವೆ. ನಾಲ್ವತವಾಡ ಪಟ್ಟಣದ ನಾರಾಯಣಪುರ ರಸ್ತೆ ಪಕ್ಕದಲ್ಲಿರುವ ಜಮೀನೊಂದರ ಬಂಡೆ ಕಲ್ಲಿನ ಮೇಲೆ ರಾಮ ದೇವರ ಪಾದುಕೆ ಕೆತ್ತನೆ ಪತ್ತೆಯಾಗಿವೆ. ರಾಮ ದೇವರ ಪಾದಗಳನ್ನ 500 ವರ್ಷಗಳ ಹಿಂದೆಯೆ ಮೇಲಿನ ಬಂಡೆಯ ಕಲ್ಲಿನ ಮೇಲೆ ಕೆತ್ತಿದ್ದಾರೆ ಎನ್ನಲಾಗಿದ್ದು, ರಾಮ ಮಂದಿರ ಉದ್ಘಾಟನೆಯ ದಿನವೇ ಪತ್ತೆಯಾಗಿರೋದು ವಿಶೇಷವಾಗಿದೆ. ಇನ್ನು ವಿಷಯ ತಿಳಿದ ಸ್ಥಳೀಯರು ಪಾದುಕೆ ತೊಳೆದು ಪೂಜೆ ಮಾಡಿದ್ದಾರೆ..
ಇಂಚಗೇರಿ ಮಠದಲ್ಲಿ ರಾಮ ದೇವರ ಪೂಜೆ ವೇಳೆ ಕೋತಿ ಪ್ರತ್ಯೇಕ್ಷ..!
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿದ ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಶ್ರೀರಾಮ ದೇವರ ಪೋಟೊಗೆ ವಿಶೇಷ ಪೂಜೆ ನಡೆಸಲಾಯಿತು. ಶ್ರೀಮಠದಲ್ಲಿ ಶ್ರೀರಾಮನ ಪೋಟೊ ಪೂಜೆ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ರಾಮನ ಪೋಟೊಗೆ ಪೂಜೆ ನಡೆಯುತ್ತಿದ್ದ ವೇಳೆಯೇ ಕೋತಿಯೊಂದು ಪ್ರತ್ಯಕ್ಷವಾಗಿದೆ. ರಾಮ ಪೋಟೊ ಬಳಿ ಬಂದು ಕುಳಿತು, ಪೂಜೆಯುದ್ದಕ್ಕು ಕೋತಿ ಸುಳಿದಾಡಿದೆ.
ರಾಮ ಮಂದಿರದಲ್ಲಿ 3 ಲಕ್ಷ ಭಕ್ತರಿಂದ ಬಾಲರಾಮನ ದರ್ಶನ, ದಾಖಲೆ ಬರೆದ ಅಯೋಧ್ಯೆ!
ಎಲ್ಲಿ ರಾಮನೋ ಅಲ್ಲಿ ಹನುಮ ಇದ್ದೆ ಇರುವನು ಎನ್ನುವಂತೆ ರಾಮನ ಪೋಟೊ ಪೂಜೆ ವೇಳೆಯೇ ಕೋತಿ ಪ್ರತ್ಯಕ್ಷವಾಗಿರೋದು, ಸಾಕ್ಷಾತ್ ಆಂಜನೇಯ ದೇವರೇ ದರ್ಶನ ನೀಡಿದ್ದಾನೆ ಎಂದು ಸ್ಥಳೀಯರು ಮಾತನಾಡಿಕೊಳ್ತಿದ್ದಾರೆ. ಅದ್ರಲ್ಲು ಪವಾಡ ಪುರುಷರಾಗಿದ್ದುಕೊಂಡು ಬ್ರೀಟಿಷರ ವಿರುದ್ಧ ಹೋರಾಡಿದ್ದ ಮಾಧವಾನಂದ ಶ್ರೀಗಳೇ ಗದ್ದುಗೆ ಎದುರಲ್ಲೆ ರಾಮನ ಪೋಟೋ ಪೂಜೆ ನಡೆಯುತ್ತಿದ್ದು, ಇದೆ ವೇಳೆ ಘಟನೆ ನಡೆದಿದ್ದು ಅಚ್ಚರಿಗೆ ಕಾರಣವಾಗಿದೆ