ಸಂಬಂಧಿಕರ ಮದುವೆಗೆ ಬಂದಿದ್ದ ಮಹಿಳೆಯನ್ನು ದೂರದ ಸಂಬಂಧಿಯೊಬ್ಬ ಪುಸಲಾಯಿಸಿ ಕರೆದೊಯ್ದು ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಎಸಗಿ ಆಭರಣಗಳನ್ನು ಕಿತ್ತುಕೊಂಡಿದ್ದಾರೆ. ಮತ್ತೆ ಆಭರಣ ವಾಪಸ್ ಕೊಡುವ ನೆಪದಲ್ಲಿ ಕರೆಸಿ ಜೋಧ್‌ಪುರದಲ್ಲಿ ಡ್ರಗ್ಸ್ ನೀಡಿ ಪಾಳಿ ಸರದಿಯಲ್ಲಿ ಅತ್ಯಾಚಾರ ಮಾಡಿದ್ದಾರೆ.

ಸಂಬಂಧಿಕರ ಮದುವೆಗೆ ಆಡಂಬರದಿಂದ ಬಂದಿದ್ದ ಮಹಿಳೆಗೆ ಮದುವೆ ಮಂಟಪದಲ್ಲೆಲ್ಲಾ ಸಂಭ್ರಮದಿಂದ ಓಡಾಡಿಕೊಂಡು ಪಾಲ್ಗೊಂಡಿದ್ದಳು. ಆದರೆ, ಮಹಿಳೆಯೊಂದಿಗೆ ಮನೆಯ ಯಾವುದೇ ಪುರುಷರು ಬಾರದ ಹಿನ್ನೆಲೆಯಲ್ಲಿ ದೂರದ ಸಂಬಂಧಿಯೊಬ್ಬ ತಮ್ಮ ಊರಿಗೆ ಹೋಗಿ ಬರೋಣವೆಂದು ಪುಸಲಾಯಿಸಿ ಕರೆದೊಯ್ದಿದ್ದಾನೆ. ಅಲ್ಲಿ ಮಹಿಳೆಯನ್ನು ಕೂಡಿಹಾಕಿ ತನ್ನ ಸ್ನೇಹಿತರೊಂದಿಗೆ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯ ಆಭರಣಗಳನ್ನು ಕಿತ್ತುಕೊಂಡಿದ್ದಾರೆ. ಪುನಃ ಮಹಿಳೆಗೆ ನಿನ್ನ ಆಭರಣಗಳನ್ನು ಕೊಡುವುದಾಗಿ ವಾಪಸ್ ಕರೆಸಿಕೊಂಡು ಜೋಧ್‌ಪುರದಲ್ಲಿ ಕೂಡಿಹಾಕಿ ಪಾಳಿ ಆಧಾರದಲ್ಲಿ ಅತ್ಯಾಚಾರ ಮಾಡಿ ನರಕವನ್ನೇ ತೋರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಸಂತ್ರಸ್ತೆ ಕೆಲವು ದಿನಗಳ ಹಿಂದೆ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಬಿಕಾನೇರ್‌ಗೆ ಬಂದಿದ್ದರು ಎಂದು ಎಸ್‌ಎಚ್‌ಒ ಧೀರೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ. ಅಲ್ಲಿ ಮಹಿಳೆ ಪಾಂಚು ಗ್ರಾಮದ ಒಬ್ಬ ವ್ಯಕ್ತಿಯನ್ನು ಭೇಟಿಯಾದಳು. ಆಗ ಮಹಿಳೆಯನ್ನು ಸಂಬಂಧದ ಬಗ್ಗೆ ತಿಳಿಸಿ ನೀವು ತಮ್ಮೂರಿಗೆ ಬರಬೇಕು ಎಂದು ಅಲ್ಲಿದ್ದ ಕೆಲ ಮಹಿಳೆಯರನ್ನು ತೋರಿಸಿ ಅವರೊಂದಿಗೆ ಮಹಿಳೆಯನ್ನು ವಂಚಿಸಿ ಪಾಂಚು ಗ್ರಾಮಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿ ಮಹಿಳೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಸಮಯದಲ್ಲಿ ಯಾರಿಗಾದರೂ ಏನಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಇದಾದ ನಂತರ ಮಹಿಳೆಯನ್ನು ಬಿಟ್ಟು ಕಳುಹಿಸುವಾಗ ಆರೋಪಿಗಳು ಮಹಿಳೆಯ ಆಭರಣಗಳನ್ನು ಕಿತ್ತುಕೊಂಡು ಬಿಕಾನೇರ್‌ಗೆ ಕಳುಹಿಸಿದ್ದಾರೆ.

ಡ್ರಗ್ಸ್ ನೀಡಿ ಹಲವು ದಿನಗಳ ಕಾಲ ಅತ್ಯಾಚಾರ:

ಇದಾದ ಕೆಲವು ದಿನಗಳ ನಂತರ ಆರೋಪಿ ಹಾಗೂ ಆತನ ಸಹಚರ ಮಹಿಳೆಯರು ಸಂತ್ರಸ್ತ ಮಹಿಳೆಗೆ ನಿಮ್ಮ ಆಭರಣಗಳನ್ನು ಹಿಂದಿರುಗಿಸುವುದಾಗಿ ತಿಳಿಸಿ ಆಕೆಯನ್ನು ಪುನಃ ಪಾಂಚು ಗ್ರಾಮಕ್ಕೆ ಕರೆಸಿಕೊಳ್ಳಲಾಗಿದೆ. ಅಲ್ಲಿಂದ ಸಂತ್ರಸ್ತ ಮಹಿಳೆಯನ್ನು ಬಲವಂತವಾಗಿ ಜೋಧ್‌ಪುರಕ್ಕೆ ಕರೆದೊಯ್ಯಲಾಯಿತು. ಅಲ್ಲಿಯೂ ಆರೋಪಿ ಮತ್ತು ಅವನ ಸಹಚರರು ಮಹಿಳೆಯ ಮೇಲೆ ಅತ್ಯಾಚಾರ ಮುಂದುವರಿಸಿದರು. ಇದಕ್ಕೆ ಮಹಿಳೆ ತೀವ್ರವಾಗಿ ವಿರೋಧಿಸಿದ್ದಾಳೆ. ಆಗ ಮಹಿಳೆಗೆ ವಿರೋಧಿಸಲು ಸಾಧ್ಯವಾಗದಂತೆ ಮಾದಕ ದ್ರವ್ಯದ (ಡ್ರಗ್ಸ್) ಮಾತ್ರೆಗಳು ಮತ್ತು ಇಂಜೆಕ್ಷನ್‌ಗಳನ್ನು ಬಲವಂತವಾಗಿ ನೀಡಿ ಅರೆಪ್ರಜ್ಞಾವಸ್ಥೆಯಲ್ಲಿರುವಂತೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಜೋಧ್‌ಪುರದಲ್ಲಿ ಹಲವು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿ ಬಲಾತ್ಕಾರ:

ಸಂತ್ರಸ್ತ ಮಹಿಳೆ ಹೇಳುವ ಪ್ರಕಾರ, ತನ್ನನ್ನು ಜೋಧ್‌ಪುರದಲ್ಲಿ ಹಲವಾರು ದಿನಗಳ ಕಾಲ ತನ್ನನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಆ ಸಮಯದಲ್ಲಿ ತನಗೆ ಪ್ರಜ್ಞೆಯೇ ಬಾರದಷ್ಟು ಮಟ್ಟಕ್ಕೆ ಡ್ರಗ್ಸ್ ಸೇರಿ ಇತರೆ ಮಾದಕ ವಸ್ತುಗಳನ್ನು ಇಂಜೆಕ್ಟ್ ಮಾಡಿದ್ದಾರೆ. ನಂತರ ಸರದಿಯಲ್ಲಿ ಹಲವಾರು ಬಾರಿ ಅತ್ಯಾಚಾರ ಮಾಡಲಾಯಿತು. ಹೇಗೋ, ದುಷ್ಕರ್ಮಿಗಳ ಆ ಹಿಡಿತದಿಂದ ತಪ್ಪಿಸಿಕೊಂಡು ತನ್ನ ಮನೆಗೆ ತಲುಪಿ ತನ್ನ ಮನೆಯವರಿಗೆ ತನ್ನ ಕಷ್ಟವನ್ನು ಹೇಳಿಕೊಳ್ಳಲಾಯಿತು ಎಂದು ಮಹಿಳೆ ತಿಳಿಸಿದ್ದಾರೆ.

ಇದಾದ ನಂತರ, ಸಂತ್ರಸ್ತ ಮಹಿಳೆ ಕುಟುಂಬದವರು ಆಕೆಯನ್ನು ಸ್ಥಳೀಯ ಮುಕ್ತ ಪ್ರಸಾದ್ ಪೊಲೀಸ್ ಠಾಣೆಗೆ ಕರೆದೊಯ್ದು, ವಿವರವಾದ ಮಾಹಿತಿ ನೀಡಿ ದೂರು ನೀಡಲಾಗಿದೆ. ಪೊಲೀಸರು 5 ಪುರುಷರು ಮತ್ತು 3 ಮಹಿಳೆಯರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆ ಮಾನವ ಸಮಾಜವೇ ತಲೆ ತಗ್ಗಿಸುವಂತಹದ್ದಾಗಿದೆ. ಸಂಬಂಧಿಕರ ಮದುವೆ ಸಂಭ್ರಮಕ್ಕೆ ಬಂದ ಮಹಿಳೆಯನ್ನು ವಂಚಿಸಿ ಇಂತಹ ಕ್ರೂರ ಘಟನೆಯನ್ನು ಎಸಗಿರುವುದಕ್ಕೆ ಸ್ಥಳೀಯ ಜನರು ಪೊಲೀಸ್ ಠಾಣೆ ಮುಂದೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.