ಪ್ರಯಾಗ್‌ರಾಜ್‌ನಲ್ಲಿ ನವವಿವಾಹಿತೆ ಮೂರೇ ದಿನದಲ್ಲಿ ಗಂಡನ ಮನೆ ಬಿಟ್ಟು ಬಾಯ್‌ಫ್ರೆಂಡ್ ಜೊತೆ ಹೋದ ಘಟನೆ ನಡೆದಿದೆ. ಮದುವೆಯಾದ ದಿನದಿಂದಲೂ ಪತ್ನಿ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದರಿಂದ ಗಂಡ ಬೇಸತ್ತು ತವರಿಗೆ ಕಳುಹಿಸಿದ್ದ. ಆದರೆ ಹುಡುಗಿ ತವರಿಗೆ ಹೋಗದೆ ಬಾಯ್‌ಫ್ರೆಂಡ್ ಮನೆ ಸೇರಿದ್ದಾಳೆ. ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದು, ಹುಡುಗಿಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.
ಮದುವೆ (marriage) ಆಗೋಕೆ ಹುಡುಗಿ ಸಿಗೋದೇ ಕಷ್ಟ ಎನ್ನುವ ಸ್ಥಿತಿ ಇದೆ. ಹಾಗಿರುವಾಗ ಸಿಕ್ಕಿರೋ ಹುಡುಗಿಯನ್ನು ಜನರು ಅದ್ಧೂರಿಯಾಗಿ ಮನೆ ತುಂಬಿಸಿಕೊಳ್ತಾರೆ. ನವ ದಂಪತಿ ಸುಖವಾಗಿ ಜೀವನ ನಡೆಸ್ಲಿ ಅಂತ ಹರಸ್ತಾರೆ. ಇತ್ತೀಚಿನ ದಿನಗಳಲ್ಲಿ ಆದ ಮದುವೆ ಜೀವನ ಪರ್ಯಂತ ಮುಂದುವರೆಯೋದೇ ಅನುಮಾನ. ಮದುವೆಯಾದ ಎರಡು – ಮೂರು ತಿಂಗಳಲ್ಲ ಎರಡೇ ದಿನದಲ್ಲಿ ಮುರಿದು ಬೀಳ್ತಿದೆ. ಈಗ ಅಂತಹದ್ದೇ ಘಟನೆಯೊಂದು ನಡೆದಿದೆ. ಮದುವೆಯಾದ ಮೂರೇ ದಿನಕ್ಕೆ ವಧು ತವರಲ್ಲ, ಬಾಯ್ ಫ್ರೆಂಡ್ (Boy friend) ಮನೆ ಸೇರಿದ್ದಾಳೆ.
ಎಲ್ಲರಂತೆ ಆತ ಕೂಡ ಮದುವೆ ಕನಸು ಕಂಡಿದ್ದ. ಆತನಿಗೆ ತಕ್ಕ ವಧು ಕೂಡ ಸಿಕ್ಕಿದ್ಲು. ಅದ್ಧೂರಿಯಾಗಿ ಮದುವೆ ನೆರವೇರಿತ್ತು. ಆದ್ರೆ ಫಸ್ಟ್ ನೈಟ್ ನಲ್ಲಿ ಎಲ್ಲ ಕನಸು ಭಗ್ನವಾಯ್ತು. ವಧುವಿನ ಅಸಲಿ ಮುಖ ಬಹಿರಂಗವಾಯ್ತು. ಫಸ್ಟ್ ನೈಟ್ ನಲ್ಲಿ ಗಂಡನ ಜೊತೆ ಸಮಯ ಕಳೆಯೋ ಬದಲು ಹುಡುಗಿ ಬೇರೆ ಕೆಲ್ಸ ಶುರು ಮಾಡಿದ್ಲು. ಬರೀ ಮೊದಲ ರಾತ್ರಿ ಮಾತ್ರವಲ್ಲ ಪ್ರತಿ ಹಗಲು - ರಾತ್ರಿ ಇದೇ ಹಾಡಾಯ್ತು. ಇದ್ರಿಂದ ಬೇಸತ್ತ ಗಂಡ ಈಗ ಪತ್ನಿಯನ್ನು ತವರಿಗೆ ಕಳ್ಸಿದ್ದಾನೆ. ಅಷ್ಟಕ್ಕೂ ರಾತ್ರಿ ಏನಾಗ್ತಿತ್ತು ಗೊತ್ತಾ?
ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ (Prayagraj)ನಲ್ಲಿ ನಡೆದಿದೆ. ಮೇ 7 ರಂದು ಝಾನ್ಸಿಯ ಹುಡುಗನೊಂದಿಗೆ ಮದುವೆ ಆಗಿದ್ಲು. ಮೇ 8 ರಂದು, ಗಂಡನ ಮನೆಗೆ ಬಂದಿದ್ಲು. ಮದುವೆಯಾದ ಮೂರೇ ದಿನಕ್ಕೆ ಹುಡುಗನ ಮನೆಯಿಂದ ಕರೆ ಬಂದಿದೆ. ಹುಡುಗಿ ಸಹವಾಸ ಬೇಡ, ಅವಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತ ಹುಡುಗನ ಪಾಲಕರು ಫೋನ್ ಮಾಡಿದ್ದಾರೆ. ಭಾರದ ಹೃದಯ ಹೊತ್ತು ಮಗಳ ಮನೆಗೆ ಬಂದ ಪಾಲಕರು, ಆಕೆಯನ್ನು ತವರಿಗೆ ವಾಪಸ್ ಕರೆತಂದಿದ್ದಾರೆ.
ಹುಡುಗಿ ಮಾಡ್ತಿದ್ದ ಕೆಲ್ಸ ಏನು? : ಮದುವೆಯ ದಿನವೇ ಹುಡುಗಿ ತನ್ನ ಗಂಡನನ್ನು ನಿರ್ಲಕ್ಷ್ಯ ಮಾಡಿದ್ಲು. ರಾತ್ರಿ ಇಡೀ ಫೋನ್ ಹಿಡಿದು ಕುಳಿತಿದ್ಲು. ಬರೀ ರಾತ್ರಿ ಕಳೆದು ಹಗಲಾದ್ರೂ ಹುಡುಗಿ ಫೋನ್ ಬಿಡ್ತಿರಲಿಲ್ಲ. ಪದೇ ಪದೇ ಬಾಯ್ ಫ್ರೆಂಡ್ ಗೆ ಫೋನ್ ಮಾಡಿ ಮಾತನಾಡ್ತಿದ್ದಳು. ಮೂರ್ನಾಲ್ಕು ದಿನ ಹುಡುಗಿ ಇದೇ ಕೆಲ್ಸ ಮಾಡಿದ್ದಾಳೆ. ಮನೆಗೆ ಹೆಂಡ್ತಿ ಬರ್ತಾಳೆ, ಹೊಸ ಜೀವನ ಶುರುವಾಗುತ್ತೆ ಅಂದ್ಕೊಂಡಿದ್ದ ಹುಡುಗನ ಆಸೆ ಕಮರಿಹೋಯ್ತು. ಕೋಪಗೊಂಡ ಆತ, ಪತ್ನಿ ತವರಿಗೆ ಫೋನ್ ಮಾಡಿದ್ದಾನೆ.
ತವರಿಗೆ ಬರ್ತಿದ್ದಂತೆ ಇಂಥ ಕೆಲ್ಸ ಮಾಡಿದ ಹುಡುಗಿ : ಮದುವೆಯಾಗಿ ಗಂಡನ ಮನೆ ಸೇರಿ ಮೂರೇ ದಿನದಲ್ಲಿ ವಾಪಸ್ ತವರಿಗೆ ಬಂದ ಹುಡುಗಿ ತನ್ನ ವಾಸ ಬದಲಿಸಿದ್ದಾಳೆ. ಅಪ್ಪನ ಮನೆ ಬದಲು ಊರಿನಲ್ಲಿದ್ದ ತನ್ನ ಬಾಯ್ ಫ್ರೆಂಡ್ ಮನೆ ಸೇರಿದ್ದಾಳೆ. ಆತನ ಜೊತೆಯೇ ಸಂಸಾರ ನಡೆಸುವ ಹಠ ಹಿಡಿದಿದ್ದಾಳೆ.
ಎಷ್ಟೇ ಪ್ರಯತ್ನಿಸಿದ್ರೂ ಹುಡುಗಿ ಮಾತು ಕೇಳಲಿಲ್ಲ. ಇದ್ರಿಂದ ಬೇಸತ್ತ ಪಾಲಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಹುಡುಗಿ ಮನೆಯವರು ಪೊಲೀಸ್ ಠಾಣೆಯಲ್ಲಿ ದಿನವಿಡೀ ಅವಳನ್ನು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಹುಡುಗಿ ಒಪ್ಪಲಿಲ್ಲ. ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಸಹ ನಿರಾಕರಿಸಿದ್ದಳು. ಅಂತಿಮವಾಗಿ ಹುಡುಗಿಯನ್ನು ಅವಳ ಕುಟುಂಬದೊಂದಿಗೆ ಮನೆಗೆ ಕಳುಹಿಸಲಾಗಿದೆ.


