ಮಾವೋಯಿಸ್ಟ್ ದಾಳಿ: ಕೋಬ್ರಾ ಅಧಿಕಾರಿ ಹುತಾತ್ಮ, 7 ಜನ ಕಮಾಂಡೋಗಳಿಗೆ ಗಾಯ
CRPFನ ಅರಣ್ಯ ಸೇನೆ ವಿಭಾಗದ ಅಧಿಕಾರಿ ಮಾವೋಯಿಸ್ಟ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ
ದೆಹಲಿ(ನ.29): ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಮಾವೋಯಿಸ್ಟ್ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಕೋಬ್ರಾ ಅಧಿಕಾರಿ ಹುತಾತ್ಮರಾಗಿದ್ದು, 7 ಜನ ಕಮಾಂಡೋಗಳು ಗಾಯಗೊಂಡಿದ್ದಾರೆ.
CRPF ಜಂಗಲ್ ವಾರ್‌ಫೇರ್ ಯುನಿಟ್ CoBRA ಅಧಿಕಾರಿ ಮಾವೋಯಿಸ್ಟ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ತಂಡದ 7 ಜನ ಕಮಾಂಡೋಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!
ಮಾವೋಯಿಸ್ಟ್ ಐಇಡಿ ಸ್ಫೋಟ ನಡೆಸಿದ್ದಾರೆ. ಜಿಲ್ಲೆಯ ಚಿಂತಲ್ನಾರ್ ಅರಣ್ಯ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಶನಿವಾರ ರಾತ್ರಿ 9 ಗಂಟೆಯ ಸುಮಾರಿ ಘಟನೆ ನಡೆದಿದೆ. ಅಸಿಸ್ಟೆಂಟ್ ಕಮಾಂಡೆಂಟ್ ನಿತಿನ್ ಭಲೇರಾವ್ ತೀವ್ರವಾಗಿ ಗಾಯಗೊಂಡ ಕಾರಣ ಮೃತಪಟ್ಟಿದ್ದಾರೆ.
ಅಸಿಸ್ಟೆಂಟ್ ಕಮಾಂಡೆಂಟ್ ನಿತಿನ್ ಭಲೆರಾವ್ ರಾಯ್‌ಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಮಹಾರಾಷ್ಟ್ರದ ನಾಸಿಕ್‌ನವರು ಎಂದು ಪೊಲೀಸ್ ಅಧಿಕಾರಿ ಪಿ ಸುಂದರ್ ರಾಜ್ ಹೇಳಿದ್ದಾರೆ.