ಚಂಡಮಾರುತ ಬಳಿಕ ಕಡಲ ತೀರದಲ್ಲಿ ಚಿನ್ನ ಹೆಕ್ಕಲು ಜನರ ದೌಡು!

ಚಂಡಮಾರುತದ ಬಳಿಕ ಸಮುದ್ರದಲ್ಲಿ ಮುಳುಗಿದ ಚಿನ್ನಾಭರಣಗಳು ದಡದಲ್ಲಿ ಬಂದು ಬಿದ್ದಿವೆ ಎಂದು ಜನರು ಕಡಲ ತೀರಗಳಿಗೆ ದೌಡಾಯಿಸಿದ್ದಾರೆ.

People rush at beach to find gold in Hyderabad snr

ಹೈದರಾಬಾದ್‌ (ನ.29): ಎರಡು ದಿನಗಳ ಹಿಂದೆ ದಕ್ಷಿಣದ ರಾಜ್ಯಗಳಲ್ಲಿ ಅವಾಂತರ ಸೃಷ್ಟಿಸಿದ್ದ ನಿವಾರ್‌ ಚಂಡ ಮಾರುತ ಚಿನ್ನವನ್ನು ಹೊತ್ತು ತಂದಿದೆ ಎನ್ನುವ ಗಾಳಿ ಸುದ್ದಿಯಿಂದಾಗಿ, ಆಂಧ್ರಪ್ರದೇಶದ ಸಮುದ್ರ ತೀರದಲ್ಲಿ ಜನ ಗುಂಪುಗೂಡಿದ್ದಾರೆ.

 ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಎರಡು ಸಮುದ್ರ ತೀರಕ್ಕೆ ಜನ ಮುಂಜಾನೆಯಿಂದಲೇ ಬಂದು ಚಿನ್ನ ಹುಡುಕಾಟಲ್ಲಿ ತೊಡಗಿಕೊಂಡಿದ್ದಾರೆ.

ನಿವಾರ್‌ ಚಂಡ ಮಾರುತದ ರಭಸಕ್ಕೆ, ಈ ಹಿಂದೆ ಸಮುದ್ರದಲ್ಲಿ ಲೀನವಾಗಿದ್ದ ಹಳೇ ದೇಗುಲಗಳ ಚಿನ್ನ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದಡಕ್ಕೆ ಬಂದಿದೆ ಎನ್ನುವ ಗಾಳಿ ಸುದ್ದಿ ನಂಬಿ ಜನ ತಂಡೋಪ ತಂಡವಾಗಿ ಸಮುದ್ರ ತೀರಕ್ಕೆ ಆಗಮಿಸಿ ಚಿನ್ನಕ್ಕಾಗಿ ಶೋಧ ನಡೆಸಿದ್ದಾರೆ. 

ಚಿನ್ನ ನೀನು ಬಲು ಚೆನ್ನ, ಮತ್ತೆ ಕುಸಿದ ಚಿನ್ನದ ದರ: ಹೀಗಿದೆ ಇಂದಿನ ದರ! ..

ಚಿನ್ನಕ್ಕಾಗಿ ಸ್ಥಳೀಯ ಮೀನುಗಾರರ ನಡುವೆ ಹೋಯ್‌ ಕೈ ಕೂಡ ನಡೆದಿದೆ. ಕೆಲವರು ತಮಗೆ ಚಿನ್ನ ಸಿಕ್ಕಿದೆ ಎಂದು ಹೇಳಿಕೊಂಡಿದ್ದು, ಯಾವುದೂ ಅಧಿಕೃತಗೊಂಡಿಲ್ಲ. ಪ್ರತೀ ಚಂಡಮಾರುತದ ಬಳಿಕ ಸಮುದ್ರ ತೀರಕ್ಕೆ ಚಿನ್ನ ಸಹಿತ ಅಮೂಲ್ಯ ವಸ್ತುಗಳು ದಡಕ್ಕೆ ಬರುತ್ತದೆ ಎನ್ನುವುದು ಸ್ಥಳೀಯ ಮೀನುಗಾರರ ನಂಬಿಕೆ.

Latest Videos
Follow Us:
Download App:
  • android
  • ios