ತಮಿಳುನಾಡಿನ ಹಲವು ನಾಯಕರು ಬಿಜೆಪಿಗೆ: ಎನ್‌ಡಿಎ ಜೊತೆ ಮತ್ತೆ ಮೈತ್ರಿಗೆ ಚಂದ್ರಬಾಬು ನಾಯ್ಡು ಒಲವು
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳ 15 ಮಾಜಿ ಶಾಸಕರು ಮತ್ತು ಓರ್ವ ಮಾಜಿ ಸಂಸದ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಮುರುಗನ್, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳ 15 ಮಾಜಿ ಶಾಸಕರು ಮತ್ತು ಓರ್ವ ಮಾಜಿ ಸಂಸದ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ಮುರುಗನ್, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, 'ಮಾಜಿ ಶಾಸಕರು ಹಾಗೂ ಸಂಸದರ ಸೇರ್ಪಡೆಯಿಂದ ಬಿಜೆಪಿಗೆ ಅನುಭವಿಗಳ ಗಜಪಡೆಯೇ ಸಿಕ್ಕಂತಾಗಿದೆ. ಈ ಮೂಲಕ ನಾವು ತಮಿಳುನಾಡಿನಲ್ಲಿ ಮೊದಲ ಬಾರಿಗೆ ಖಾತೆ ತೆರೆಯುವ ಮೂಲಕ ಪ್ರಧಾನ ಮಂತ್ರಿಮೋದಿ ಬಲ ಹೆಚ್ಚಿಸಲಿದ್ದೇವೆ' ಎಂದರು. ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, 'ಇಷ್ಟು ಬೃಹತ್ ಸಂಖ್ಯೆಯಲ್ಲಿ ಹಿರಿಯ ನಾಯಕರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ತಮಿಳುನಾಡಿನಲ್ಲೂ ಸಹ ಮೋದಿಯ ಅಲೆಯನ್ನು ಬಿಂಬಿಸುತ್ತದೆ ಎಂದರು.
6 ವರ್ಷದ ಬಳಿಕ ಚಂದ್ರಬಾಬು ಮತ್ತೆ ಎನ್‌ಡಿಎ ತೆಕ್ಕೆಗೆ ಸಂಭವ
ನವದೆಹಲಿ: ನಾರಾ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತೆ ಎನ್‌ಡಿಎಗೆ ಸೇರ್ಪಡೆಯಾಗುವ ಸಾಧ್ಯತೆ ಕಂಡು ಬಂದಿದೆ. ನಾಯ್ಡು ಅವರು ಬುಧವಾರ ಸಂಜೆ ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಅಣ್ಣಾಮಲೈ ತಮಿಳುನಾಡಿನ ಮುಖ್ಯಮಂತ್ರಿಯಾಗ್ತಾರೆ: ವಿನಯ್ ಗುರೂಜಿ
ಆಂಧ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಪಟ್ಟು ಹಿಡಿದಿದ್ದ ಚಂದ್ರಬಾಬು ನಾಯ್ಡು, ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ 2018ರಲ್ಲಿ ಎನ್‌ಡಿಎ ಕೂಟದಿಂದ ಹೊರ ನಡೆದಿದ್ದರು. ಮರುವರ್ಷವೇ ಲೋಕಸಭೆ ಚುನಾವಣೆ ಜತೆಗೆ ನಡೆದ ಆಂಧ್ರ ವಿಧಾನಸಭೆ ಚನಾವಣೆಯಲ್ಲಿ ಪರಾಜಿತರಾಗಿ ಅಧಿಕಾರ ಕಳೆದು ಕೊಂಡಿದ್ದರು. ಇದೀಗ ಆರು ವರ್ಷಗಳ ಬಳಿಕ ಅವರು ಮತ್ತೆ ಎನ್‌ಡಿಎಯತ್ತ ಆಕರ್ಷಿತರಾಗುತ್ತಿರುವುದು ಗಮನಾರ್ಹ.
ಆಂಧ್ರಪ್ರದೇಶದಲ್ಲಿ ಈಗಾಗಲೇ ಟಿಡಿಪಿ ಹಾಗೂ ನಟ ಪವನ್ ಕಲ್ಯಾಣ್ ಜನಸೇನಾ ಪಕ್ಷ ಮೈತ್ರಿ ಮಾಡಿಕೊಂಡಿವೆ. ಆದರೆ ಎನ್ ಡಿಎ ಕುರಿತು ಚಂದ್ರಬಾಬು ನಾಯ್ಡು ಅನಿಶ್ಚಿತತೆಯಲ್ಲಿರುವ ಕಾರಣ ಆ ಎರಡೂ ಪಕ್ಷಗಳ ನಡುವೆ ಲೋಕಸಭೆ ಸ್ಥಾನ ಹೊಂದಾಣಿಕೆ ತಡವಾಗುತ್ತಿದೆ. ಇದೀಗ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸಂದಿಗ್ಧ ಪರಿಸ್ಥಿತಿ ಯಿಂದ ನಾಯ್ಡು ಹೊರಬರಬಹುದು ಎನ್ನಲಾಗುತ್ತಿದೆ.
ಶಾಲೆಯಲ್ಲಿ ಪ್ರಾಣಪ್ರತಿಷ್ಠೆ ಸಂಭ್ರಮಕ್ಕೆ ಬ್ರೇಕ್, ತಮಿಳುನಾಡು ಸರ್ಕಾರದ ವಿರುದ್ಧ ಅಣ್ಣಾಮಲೈ ಗರಂ!
ಇನ್ನೆಂದೂ ಎನ್‌ಡಿಎ ಬಿಡಲ್ಲ: ಮೋದಿಗೆ ನಿತೀಶ್ ಅಭಯ
ನವದೆಹಲಿ: ಇತ್ತೀಚೆಗೆ ಇಂಡಿಯಾ ಕೂಟ ತೊರೆದು ಬಿಜೆಪಿ ಜೊತೆ ಎನ್‌ಡಿಎ ಸೇರಿ ಮುಖ್ಯಮಂತ್ರಿಯಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನಾನು ಇನ್ನೆಂದಿಗೂ ಎನ್‌ಡಿಎ ಬಿಡುವುದಿಲ್ಲ. ಇಲ್ಲೇ ಇರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಯ ನೀಡಿದ್ದಾರೆ. ದೆಹಲಿಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತನಾಡಿದ ನಿತೀಶ್,ನಾನು ಬಿಜೆಪಿ ಜೊತೆ 1995ರಿಂದಲೂ ಇದ್ದೇನೆ. ಇಲ್ಲಿವರೆಗೂ ಮೂರು ಬಾರಿ ಎನ್‌ಡಿಎ ಕೂಟ ಬಿಟ್ಟಿದ್ದರೂ ಇನ್ನು ಮುಂದೆ ಆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ.