Asianet Suvarna News Asianet Suvarna News

ಪರ್ವತದ ಸುತ್ತಲಿನ ಹುಲ್ಲಿಗೂ ಬಿಲ್ಲು, ಕೈಲಾಸ-ಮಾನಸ ಸರೋವರ ಯಾತ್ರೆಯ ಶುಲ್ಕ ಏರಿಸಿದ ಚೀನಾ!

ಕೈಲಾಸ-ಮಾನಸಸರೋವರ ಯಾತ್ರೆಗೆ ಚೀನಾ ತನ್ನ ಶುಲ್ಕವನ್ನು ಇನ್ನಷ್ಟು ಏರಿಸಿದೆ. ಈಗ ಪ್ರತಿ ಭಾರತೀಯರು ಈ ಯಾತ್ರೆಗಾಗಿ 1.85 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅದಲ್ಲದೆ, ಯಾತ್ರೆಯ ವೇಳೆ ಹುಲ್ಲಿಗೆ ಹಾನಿಯಾದರೂ 24 ಸಾವಿರ ರೂಪಾಯಿ ದಂಡ ಕಟ್ಟಬೇಕಿದೆ.
 

China hikes fees on Kailash Mansarovar Yatra Indians will have to spend Rs 1 85 lakh san
Author
First Published May 11, 2023, 1:36 PM IST

ನವದೆಹಲಿ (ಮೇ.11): ಅಂದಾಜು ಮೂರು ವರ್ಷಗಳ ಕಾಲ ಸ್ಥಗಿತವಾಗಿದ್ದ ಕೈಲಾಸ-ಮಾನಸಸರೋವರ ಯಾತ್ರೆಗೆ ವೀಸಾ ನೀಡಲು ಚೀನಾ ಆರಂಭ ಮಾಡಿದೆ. ಆದರೆ, ಈ ಬಾರಿ ವೀಸಾಗೆ ಇನ್ನಷ್ಟು ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ.  ಇದರೊಂದಿಗೆ, ಅನೇಕ ರೀತಿಯ ಪ್ರಯಾಣದ ಶುಲ್ಕಗಳು ಬಹುತೇಕ ದ್ವಿಗುಣಗೊಂಡಿದೆ. ಈಗ ಭಾರತೀಯ ನಾಗರಿಕರು ಪ್ರಯಾಣಕ್ಕಾಗಿ ಕನಿಷ್ಠ 1.85 ಲಕ್ಷ ರೂಪಾಯಿ ವೆಚ್ಚ ಮಾಡಬೇಕಿದೆ. ಹಾಗೇನಾದರೂ ಯಾತ್ರೆಯ ವೇಳೆ ಯಾತ್ರಿಕರು ಸಹಾಯಕ್ಕಾಗಿ ನೇಪಾಳದ ಕೆಲಸಗಾರ ಅಥವಾ ಸಹಾಯಕನನ್ನು ತನ್ನೊಂದಿಗೆ ಇರಿಸಿಕೊಂಡರೆ, 300 ಡಾಲರ್‌ ಅಂದರೆ 24 ಸಾವಿರ ರೂಪಾಯಿ ಹೆಚ್ಚುವರಿ ಹಣ ಪಾವತಿ ಮಾಡಬೇಕಿದೆ. ಈ ಶುಲ್ಕವನ್ನು 'ಗ್ರಾಸ್‌ ಡ್ಯಾಮೇಜಿಂಗ್‌ ಫೀ' ಎಂದು ಹೇಳಲಾಗಿದೆ. ಯಾತ್ರೆಯ ವೇಳೆ ಕೈಲಾಸ ಪರ್ವತದ ಸುತ್ತಮುತ್ತಲಿನ ಹುಲ್ಲುಗಳಿ ಹಾನಿಯಾಗುತ್ತದೆ ಎಂದು ಚೀನಾ ವಾದ ಮಾಡಿದ್ದು, ಅದಕ್ಕಾಗಿ ಪ್ರಯಾಣಿಕರಿಂದಲೇ ಇದರ ಮೊತ್ತವನ್ನು ಪರಿಹಾರವಾಗಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದೆ. ಇನ್ನು ಯಾತ್ರೆಯ ಪ್ರತಿ ಹಂತದ ಪ್ರಕ್ರಿಯೆಯನ್ನೂ ಕಷ್ಟವಾಗಿಸುವ ಹಲವು ನಿಯಮಗಳನ್ನು ಚೀನಾ ಸೇರಿಸಿದೆ. ಉದಾಹರಣೆಗೆ, ಈಗ ಪ್ರತಿಯೊಬ್ಬ ಪ್ರಯಾಣಿಕನು ತನ್ನ ವಿಶಿಷ್ಟ ಗುರುತನ್ನು ಕಠ್ಮಂಡು ನೆಲೆಯಲ್ಲಿಯೇ ಮಾಡಬೇಕಾಗಿದೆ. ಇದಕ್ಕಾಗಿ, ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನಿಂಗ್ ಇರುತ್ತದೆ. ವಿದೇಶಿ ಯಾತ್ರಾರ್ಥಿಗಳ, ವಿಶೇಷವಾಗಿ ಭಾರತೀಯರ ಪ್ರವೇಶವನ್ನು ಮಿತಿಗೊಳಿಸಲು ಕಠಿಣ ನಿಯಮಗಳನ್ನು ಮಾಡಲಾಗಿದೆ ಎಂದು ನೇಪಾಳಿ ಪ್ರವಾಸ ನಿರ್ವಾಹಕರು ಹೇಳಿದ್ದಾರೆ.

ಕೈಲಾಸ ಮಾನಸ ಸರೋವರ ಯಾತ್ರೆಯು ನೇಪಾಳದ ಪ್ರವಾಸ ನಿರ್ವಾಹಕರಿಗೆ ದೊಡ್ಡ ವ್ಯಾಪಾರವಾಗಿದೆ. ಹೊಸ ನಿಯಮಗಳು ಮತ್ತು ಹೆಚ್ಚಿದ ಶುಲ್ಕಗಳೊಂದಿಗೆ, ಟೂರ್ ಆಪರೇಟರ್‌ಗಳು ಈಗ ರೋಡ್ ಟ್ರಿಪ್‌ಗಳಿಗೆ ಪ್ರತಿ ಪ್ರಯಾಣಿಕರಿಗೆ ಕನಿಷ್ಠ 1.85 ಲಕ್ಷ ರೂ.ಗಳನ್ನ ವಿಧಿಸಲಾಗುತ್ತಿದೆ. ಇದೇ ಪ್ರಯಾಣಕ್ಕೆ 2019ರಲ್ಲಿ 90 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಮೇ 1 ರಿಂದ ಯಾತ್ರೆಯ ನೋಂದಣಿ ಪ್ರಾರಂಭವಾಗಿದೆ. ಅಕ್ಟೋಬರ್‌ವರೆಗಿನ ಪ್ರಯಾಣದ ಬಗ್ಗೆ ಮಾಹಿತಿ ನೀಡಲಾಗಿದೆ. ಹೊಸ ನಿಯಮಗಳಿಂದಾಗಿ ಈ ಬಾರಿ ಜನರ ಟ್ರೆಂಡ್ ಕೂಡ ಕಡಿಮೆಯಾಗಿದೆ ಎನ್ನುತ್ತಾರೆ ಪ್ರವಾಸ ನಿರ್ವಾಹಕರು.

ಕೈಲಾಸ ಮಾನಸ ಸರೋವರ ಯಾತ್ರೆಯ ಹೊಸ ನಿಯಮಗಳು
- ವೀಸಾವನ್ನು ಸಂಗ್ರಹಿಸಲು ಯಾತ್ರಾರ್ಥಿಗಳು ಖುದ್ದಾಗಿ ಹಾಜರಿರಬೇಕು. ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಅಂದರೆ, ಪ್ರಯಾಣಿಕರು ಮೊದಲು ಚೀನೀ ರಾಯಭಾರ ಕಚೇರಿಗೆ ತೆರಳಬೇಕಿದೆ. ಅದರ ನಂತರ ಕಠ್ಮಂಡು ಅಥವಾ ಇನ್ನೊಂದು ಬೇಸ್ ಕ್ಯಾಂಪ್‌ನಲ್ಲಿ ಬಯೋಮೆಟ್ರಿಕ್ ಗುರುತಿನ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ.

- ಈಗ ವೀಸಾ ಪಡೆಯಲು ಕನಿಷ್ಠ 5 ಜನರ ಗುಂಪನ್ನು ಹೊಂದಿರುವುದು ಅವಶ್ಯಕ. ಇದರಲ್ಲಿ ನಾಲ್ಕು ಜನರು ಕಡ್ಡಾಯವಾಗಿ ವೀಸಾಗಾಗಿ ಖುದ್ದಾಗಿ  ಹಾಜರಿರಬೇಕು.

- ಟಿಬೆಟ್‌ಗೆ ಪ್ರವೇಶಿಸುವ ನೇಪಾಳಿ ಕಾರ್ಮಿಕರು 'ಹುಲ್ಲು ಹಾನಿ ಮಾಡುವ ಶುಲ್ಕ' ಎಂದು 300 ಡಾಲರ್‌ ಪಾವತಿ ಮಾಡಬೇಕಾಗತ್ತದೆ. ಈ ವೆಚ್ಚವನ್ನು ಯಾತ್ರಿಕರೇ ಭರಿಸಬೇಕಾಗುತ್ತದೆ. ಏಕೆಂದರೆ, ಪ್ರಯಾಣಿಕರು ಮಾತ್ರ ಟಿಬೆಟ್‌ಗೆ ಕಾರ್ಮಿಕರನ್ನು ಮಾರ್ಗದರ್ಶಕರು, ಸಹಾಯಕರು, ಕೂಲಿಗಳು ಅಥವಾ ಅಡುಗೆಯವರಾಗಿ ಕರೆದುಕೊಂಡು ಹೋಗುತ್ತಾರೆ.

- ಒಬ್ಬ ಕೆಲಸಗಾರನನ್ನು ನಿಮ್ಮೊಂದಿಗೆ ಇರಿಸಿಕೊಳ್ಳಲು 15 ದಿನಗಳವರೆಗೆ 13,000 ರೂಪಾಯಿ ನೀಡಬೇಕು ಇದರೊಂದಿಗೆ ಪ್ರಯಾಣ ಶುಲ್ಕವನ್ನೂ ತೆಗೆದುಕೊಳ್ಳಲಾಗುವುದು. ಇದು ಮೊದಲು ಕೇವಲ 4200 ರೂಪಾಯಿ ಆಗಿತ್ತು.

- ಪ್ರವಾಸವನ್ನು ನಿರ್ವಹಿಸುವ ನೇಪಾಳಿ ಸಂಸ್ಥೆಗಳು ಚೀನಾ ಸರ್ಕಾರಕ್ಕೆ 60,000 ಡಾಲರ್‌ ಠೇವಣಿ ಮಾಡಬೇಕಾಗುತ್ತದೆ. ಇದರ ಸಮಸ್ಯೆ ಏನೆಂದರೆ ನೇಪಾಳಿ ಟ್ರಾವೆಲ್ ಏಜೆನ್ಸಿಗಳು ವಿದೇಶಿ ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಮಾಡಲು ಅನುಮತಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಶುಲ್ಕವನ್ನು ಹೇಗೆ ವರ್ಗಾಯಿಸಲಾಗುತ್ತದೆ ಎಂಬುದರ ಕುರಿತು ಪರಿಸ್ಥಿತಿಯನ್ನು ಸ್ಪಷ್ಟಪಡಿಸಲಾಗಿಲ್ಲ.

 

ಕೈಲಾಸ ಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ರಾಹುಲ್ ಗಾಂಧಿ ವಾಪಸ್ಸಾಗಿದ್ದೇಕೆ?

2-3 ವಾರಗಳ ಪ್ರಯಾಣ: ಕೈಲಾಸ ಯಾತ್ರೆಯನ್ನು 3 ವಿಭಿನ್ನ ಹೆದ್ದಾರಿಗಳಿಂದ ಮಾಡಲಾಗುತ್ತದೆ. ಮೊದಲ- ಲಿಪುಲೇಖ್ ಪಾಸ್ (ಉತ್ತರಾಖಂಡ), ಎರಡನೇ- ನಾಥು ಪಾಸ್ (ಸಿಕ್ಕಿಂ) ಮತ್ತು ಮೂರನೇಯದು ಕಠ್ಮಂಡು ಮಾರ್ಗ. ಈ ಮೂರು ಮಾರ್ಗಗಳು ಕನಿಷ್ಠ 14 ಮತ್ತು ಗರಿಷ್ಠ 21 ದಿನಗಳನ್ನು ತೆಗೆದುಕೊಳ್ಳುತ್ತವೆ. 2019 ರಲ್ಲಿ, 31,000 ಭಾರತೀಯರು ತೀರ್ಥಯಾತ್ರೆಗೆ ತೆರಳಿದ್ದರು. ಅಂದಿನಿಂದ ಪ್ರಯಾಣವನ್ನು ಬಂದ್ ಮಾಡಲಾಗಿದೆ. ಕೈಲಾಸ ಮಾನಸ ಸರೋವರ ಯಾತ್ರೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಆಯೋಜಿಸುತ್ತದೆ.

ಇಲ್ಲಿ ದ್ವೇಷಕ್ಕೆ ಜಾಗವಿಲ್ಲ: ಮಾನಸ ಸರೋವರ ಕಂಡು ರಾಹುಲ್ ಉದ್ಘಾರ!

Follow Us:
Download App:
  • android
  • ios