Bengaluru: ಸೂಪರ್‌ ಮಾರ್ಕೆಟ್‌ಗೆ ಆಕಸ್ಮಿಕ ಬೆಂಕಿ: ಕೋಟ್ಯಾಂತರ ಮೌಲ್ಯದ ವಸ್ತು ನಾಶ

ನಗರದ ರಿಚ್ಮಂಡ್‌ ರಸ್ತೆ ಸಮೀಪ ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸುಮಾರು ನಾಲ್ಕು ಕೋಟಿ ರುಪಾಯಿ ಮೌಲ್ಯದ ವಸ್ತುಗಳು ಆಹುತಿಯಾಗಿದ್ದು, ಅದೃಷ್ಟವಶಾತ್‌ ಕಟ್ಟಡದ ಮಾಲೀಕನ ಕುಟುಂಬ ಸೇರಿದಂತೆ ಒಂಭತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Accidental fire to supermarket at bengaluru gvd

ಬೆಂಗಳೂರು (ಸೆ.08): ನಗರದ ರಿಚ್ಮಂಡ್‌ ರಸ್ತೆ ಸಮೀಪ ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಸುಮಾರು ನಾಲ್ಕು ಕೋಟಿ ರುಪಾಯಿ ಮೌಲ್ಯದ ವಸ್ತುಗಳು ಆಹುತಿಯಾಗಿದ್ದು, ಅದೃಷ್ಟವಶಾತ್‌ ಕಟ್ಟಡದ ಮಾಲೀಕನ ಕುಟುಂಬ ಸೇರಿದಂತೆ ಒಂಭತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ರಿಚ್ಮಂಡ್‌ ರಸ್ತೆಯ ನಂಜಪ್ಪ ಸರ್ಕಲ್‌ ಸಮೀಪದ ಲಾಂಗ್‌ಫೋರ್ಚ್‌ ರಸ್ತೆಯ ‘ಫ್ಯಾಮಿಲಿ ಶಾಪಿಂಗ್‌ ಮಾರ್ಚ್‌’ನಲ್ಲಿ ಈ ಅವಘಡ ಸಂಭವಿಸಿದ್ದು, ಸೂಪರ್‌ ಮಾರ್ಚ್‌ನ ಮೇಲಿನ ಮಹಡಿಯಲ್ಲಿ ನೆಲೆಸಿದ್ದ ಕಟ್ಟಡದ ಮಾಲಿಕ ಶ್ರೀಧರ್‌ ಸೋದರನ ಕುಟುಂಬವನ್ನು ಸುರಕ್ಷಿತವಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಈ ಅವಘಡದಲ್ಲಿ ಮಾರ್ಚ್‌ನಲ್ಲಿದ್ದ .4 ಲಕ್ಷ ನಗದು, .3 ಕೋಟಿ ಮೌಲ್ಯದ ದಿನಸಿ ಸೇರಿದಂತೆ ಗೃಹ ಬಳಕೆ ವಸ್ತುಗಳು ಹಾಗೂ .1 ಕೋಟಿ ಮೊತ್ತದ ಪೀಠೋಪಕರಣ ಸುಟ್ಟು ಹೋಗಿದೆ.

Shivamogga: ಗಂಡ-ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

ಅಗ್ನಿ ಹೊತ್ತಿದ್ದು ಹೇಗೆ?: ರಿಚ್ಮಂಡ್‌ ರಸ್ತೆಯ ನಂಜಪ್ಪ ಸರ್ಕಲ್‌ ಬಳಿ ಶ್ರೀಧರ ಅವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವಿದ್ದು ಹಾಗೂ ಮೊದಲ ಮಹಡಿಯಲ್ಲಿ ಅನ್ವರ್‌ ಮಾಲಿಕತ್ವದ ಫ್ಯಾಮಿಲಿ ಶಾಂಪಿಂಗ್‌ ಹೆಸರಿನ ಸೂಪರ್‌ ಮಾರ್ಕೆಟ್‌ ಇದೆ. ಇನ್ನುಳಿದ ಮೇಲಿನ ಎರಡು ಮಹಡಿಗಳಲ್ಲಿ ಶ್ರೀಧರ್‌ ಅವರ ಸೋದರನ ಕುಟುಂಬ ನೆಲೆಸಿದೆ. ಕೆಳಹಂತದಲ್ಲಿ ವಾಹನ ನಿಲುಗಡೆ ಪ್ರದೇಶವಿದೆ. ಆ ಮಾರ್ಚ್‌ನಲ್ಲಿ ರಾತ್ರಿ 1.30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ದಟ್ಟಹೊಗೆ ಆವರಿಸಿದೆ. 

ಅದೇ ರಸ್ತೆಯಲ್ಲಿ ಬಂದ ದಾರಿಹೋಕರೊಬ್ಬರು, ಬೃಹತ್‌ ಮಳಿಗೆಯಲ್ಲಿ ಬೆಂಕಿ ಕಂಡು ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಮಾಹಿತಿ ಪಡೆದ ಅಶೋಕ ನಗರ ಠಾಣೆ ಪೊಲೀಸರು, ಕೂಡಲೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟರಲ್ಲಿ ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸೂಪರ್‌ ಮಾರ್ಕೆಟ್‌ನ ಮೇಲಿನ ಮಹಡಿಯಲ್ಲಿ ನೆಲೆಸಿದ್ದ 9 ಮಂದಿಯನ್ನು ರಕ್ಷಿಸಿದ್ದಾರೆ. ಬಳಿಕ ಸತತ 9 ಗಂಟೆಗಳ ಕಾರ್ಯಾಚರಣೆ ಬಳಿ 9 ಅಗ್ನಿಶಾಮಕ ದಳ ವಾಹನಗಳು ಕೊನೆಗೆ ಬೆಂಕಿ ನಂದಿಸಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Yadgir: ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

ಪಾರಿವಾಳದ ಜೀವ ಉಳಿಸಿದ ಪಿಎಸ್‌ಐ: ಸೂಪರ್‌ ಮಾರ್ಕೆಟ್‌ನಲ್ಲಿ ಬೆಂಕಿ ಕೆನ್ನಾಲೆಗೆ ಸುಟ್ಟು ಹೋಗುತ್ತಿದ್ದ ಒಂದು ಪಾರಿವಾಳಗಳನ್ನು ಅಶೋಕ ನಗರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಜಿ.ಎ.ಅಶ್ವಿನಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಮಾರ್ಕೆಟ್‌ಗೆ ಬೆಂಕಿ ಬಿದ್ದ ವಿಷಯ ತಿಳಿದು ರಾತ್ರಿ ಪಾಳೆಯ ಕರ್ತವ್ಯದಲ್ಲಿದ್ದ ಪಿಎಸ್‌ಐ ಅಶ್ವಿನಿ, ಕೂಡಲೇ ಘಟನಾ ಸ್ಥಳ ತಲುಪಿದ್ದಾರೆ. ಆ ವೇಳೆ ಸೂಪರ್‌ ಮಾರ್ಕೆಟ್‌ನ ಮಹಡಿಯಲ್ಲಿದ್ದ ವೃದ್ಧರು ಸೇರಿದಂತೆ 9 ಜನರ ರಕ್ಷಣಾ ಕಾರ್ಯ ಮುಗಿದ ಬಳಿಕ ಅವರಿಗೆ ಮಾರ್ಚ್‌ನ ಗ್ರೀಲ್‌ನಲ್ಲಿ ಸಿಲುಕಿದ್ದ ಪಾರಿವಾಳ ಕಣ್ಣಿಗೆ ಬಿದ್ದಿದೆ. ಕೂಡಲೇ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ಪಾರಿವಾಳದ ಜೀವವನ್ನು ಪಿಎಸ್‌ಐ ಕಾಪಾಡಿದ್ದಾರೆ.

Latest Videos
Follow Us:
Download App:
  • android
  • ios