vaccination at doorstep: ಮನೆ ಬಾಗಿಲಿಗೇ ಲಸಿಕೆ: ರಾಜ್ಯಗಳ ಜೊತೆ ಕೇಂದ್ರ ಆರೋಗ್ಯ ಸಚಿವರ ಸಭೆ

  • ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಸಭೆ
  • ಲಸಿಕಾಕರಣದ ಹೊಸ ಕಾರ್ಯತಂತ್ರದ ಚರ್ಚೆ
  • ರಾಜ್ಯ ಹಾಗೂ ಕೇಂದ್ರಾಡಳಿತ ಆರೋಗ್ಯ ಸಚಿವರ ಜೊತೆ ಸಭೆ
  • ಮನೆ ಬಾಗಿಲಿಗೆ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ
     
Mansukh Mandaviya hold a meeting  state UT health ministers for Vaccination jab at doorstep at every house ckm

ನವದೆಹಲಿ(ನ.11): ದೇಶಾದ್ಯಂತ ಲಸಿಕಾಕರಣವು(Covid Vaccination) ಕುಂಠಿತವಾದ ಬೆನ್ನಲ್ಲೇ ಲಸಿಕಾರಣದ ವೇಗ ಹೆಚ್ಚಿಸಲು ಹಾಗೂ ಮನೆ ಬಾಗಿಲಿಗೆ ಲಸಿಕಾ ಆಂದೋಲನವನ್ನು(vaccination at doorstep) ತೆಗೆದುಕೊಂಡು ಹೋಗಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಗುರುವಾರ ಎಲ್ಲಾ ರಾಜ್ಯದ ಹಾಗೂ ಕೇಂದ್ರಾಡಳಿತ ಆರೋಗ್ಯ ಸಚಿವರೊಂದಿಗೆ ಕೇಂದ್ರ ಆರೋಗ್ಯ ಮಂತ್ರಿ ಮನ್ಸುಖ್‌ ಮಾಂಡವೀಯ ಸಭೆ ನಡೆಸಲಿದ್ದಾರೆ. ಗುರುವಾರ ಮುಂಜಾನೆ ಈ ಸಭೆ ವರ್ಚುವಲ್‌ ಆಗಿ ನಡೆಯಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಶೇ.50ಕ್ಕಿಂತ ಕಡಿಮೆ ಲಸಿಕೆ ನೀಡಿರುವ ದೇಶದ(India) 12 ರಾಜ್ಯಗಳ 45 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನ.3ರಂದು ಪ್ರಧಾನಿ ಮೋದಿ(PM Narendra Modi) ಸಭೆ ನಡೆಸಿ ಚರ್ಚಿಸಿದ್ದರು. ಈ ಸಭೆ, ಅದರ ಮುಂದುವರೆದ ಭಾಗವಾಗಿರಲಿದೆ ಎನ್ನಲಾಗಿದೆ. ಈವರೆಗೆ ದೇಶದಲ್ಲಿ 74.64 ಕೋಟಿ ಜನರು ಮೊದಲ ಡೋಸ್‌, 35.48 ಕೋಟಿ ಜನರು ಎರಡೂ ಡೋಸ್‌(Dose) ಪಡೆದುಕೊಂಡಿದ್ದಾರೆ. ಲಸಿಕೆ ಲಭ್ಯತೆ ಹೆಚ್ಚಾಗಿದ್ದರೂ, ದೇಶಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಲಸಿಕೆ ಪಡೆಯುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಜೊತೆಗೆ ಎರಡನೇ ಡೋಸ್‌ ಪಡೆಯುವ ಗಡುವು ಮೀರಿದರೂ ಇನ್ನೂ 13 ಕೋಟಿ ಜನರು ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ಇದುವರೆಗೆ ಲಸಿಕೆ ಪಡೆಯದವರಿಗೆ ಮತ್ತು 2ನೇ ಡೋಸ್‌ ಪಡೆಯದವರನ್ನು ಹುಡುಕಿ ಲಸಿಕೆ ನೀಡಲು ಮನೆ ಮನೆಗೆ ಲಸಿಕೆ ಅಭಿಯಾನ(Har Ghar Dastak) ಹಮ್ಮಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ(Health Ministy) ಪ್ರಕಾರ ದೇಶದ ವಯಸ್ಕರ ಪೈಕಿ ಶೇಕಡಾ 79.2 ಮಂದಿ ಮೊದಲ ಡೋಸ್ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನು ಶಕೇಡಾ 37 ರಷ್ಟು ಮಂದಿ ಎರಡೂ ಡೋಸ್ ಪಡೆದುಕೊಂಡಿದ್ದಾರೆ. ಎರಡನೇ ಡೋಸ್ ಪಡೆಯಲು ಬಾಕಿ ಇರುವ ಮಂದಿ ಶೀಘ್ರದಲ್ಲೇ ಲಸಿಕೆ ಪಡೆಯಲು ಮನವಿ ಮಾಡಲಾಗಿದೆ. ಸೆಕೆಂಡ್ ಡೋಸ್ ಪಡೆಯುವವರ ಸಂಖ್ಯೆ ಕುಂಠಿತವಾಗುತ್ತಿದೆ. ಇದಕ್ಕಾಗಿ ಮನೆ ಬಾಗಿಲಿಗೆ ಲಸಿಕೆ ಮೂಲಕ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದೆ.

Covid19 Vaccine| ಮುಂದಿನ ವಾರದಿಂದ ಮಕ್ಕಳಿಗೂ ಕೋವಿಡ್‌ ಲಸಿಕೆ?

ಇದುವರೆಗೆ 109 ಕೋಟಿ ಡೋಸ್ ವಿತರಿಸಲಾಗಿದೆ. ಕಳೆದ 24 ಗಂಟೆಯಲ್ಲಿ 52,69,137 ಡೋಸ್ ಹಾಕಲಾಗಿದೆ. 100 ಕೋಟಿ ಲಸಿಕೆ ಗಡಿ ದಾಟಿದ ಬಳಿಕ ಲಸಿಕೆ ನೀಡುವಿಕೆ ವೇಗ ಕುಂಠಿತವಾಗಿದೆ.  ಕೇಂದ್ರ ಸಚಿವಾಲಯ ಈಗಾಗಲೇ ರಾಜ್ಯಕ್ಕೆ ಪತ್ರ ಬರೆದಿದೆ. ಎರಡನೇ ಡೋಸ್ ಪಡೆಯಲು ಅರ್ಹರಾದವರಿಗೆ ಶೀಘ್ರದಲ್ಲೇ ಲಸಿಕೆ ನೀಡಲು ಆಗ್ರಹಿಸಿದೆ. ಆದರೆ ಐದು ರಾಜ್ಯಗಳು ಗರಿಷ್ಠ ಲಸಿಕೆ ನೀಡುವ ಮೂಲಕ ದಾಖಲೆ ಬರೆದಿದೆ.

ಗರಿಷ್ಠ ಲಸಿಕೆ ನೀಡಿದ ಐದು ರಾಜ್ಯಗಳು
ಉತ್ತರ ಪ್ರದೇಶ
ಮಹಾರಾಷ್ಟ್ರ
ಪಶ್ಚಿಮ ಬಂಗಾಳ
ಗುಜರಾತ್
ಮಧ್ಯ ಪ್ರದೇಶ

ಮೋದಿ ನಾಯಕತ್ವಕ್ಕೆ ಬಿಜೆಪಿ ಉಘೇ: 100 ಕೋಟಿ ಲಸಿಕೆ, 80 ಕೋಟಿ ಜನರಿಗೆ ಉಚಿತ ಆಹಾರ!

ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ಇದೀಗ ಮನೆ ಬಾಗಿಲಿಗೆ ಲಸಿಕೆ ಅಭಿಯಾನ ಮತ್ತಷ್ಟು ಚುರುಕಿನಿಂದ ನಡೆಯಲಿದೆ. ಇಂದಿನ ಸಭೆಯಲ್ಲಿ ಈ ವಿಚಾರ ಪ್ರಮುಖ ಚರ್ಚೆಯಾಗಲಿದೆ. ಗ್ರಾಮದಲ್ಲಿರುವ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಕಾರ್ಯಕರ್ತರು ಪ್ರತಿ ವಾರ್ಡ್‌ಗೆ ತೆರಳಿ ಲಸಿಕೆ ನೀಡುವಿಕೆ ಕಾರ್ಯವನ್ನು ಚುರುಗೊಳಿಸಲಾಗುತ್ತಿದೆ. ಈ ಮೂಲಕ ಪ್ರತಿ ಹಳ್ಳಿ, ಗ್ರಾಮ, ಜಿಲ್ಲೆಗಳಲ್ಲಿ ಶೇಕಡಾ 100 ಲಸಿಕೆ ನೀಡಲು ಕೇಂದ್ರ ಪ್ಲಾನ್ ಹಾಕಿಕೊಂಡಿದೆ. ಈ ಮೂಲಕ 2021ರ ಅಂತ್ಯಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲಸಿಕಾ ಗುರಿ ಸಾಧಿಸಲು ಮುಂದಾಗಿದೆ.
 

Latest Videos
Follow Us:
Download App:
  • android
  • ios