*  ಪ್ರಾಶಸ್ತ್ಯದ ಮೇಲೆ ಕೊಡುತ್ತೇವೆ: ಡಾ. ಸುಧಾಕರ್‌*  ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲು ಸಿದ್ಧತೆ ಆರಂಭಿಸಿ ಸರ್ಕಾರ*  ಒಂದು ಕೋಟಿ ಡೋಸ್‌ ಲಸಿಕೆಗೆ ಆದೇಶ ನೀಡಿದ ಕೇಂದ್ರ ಸರ್ಕಾರ  

ಬೆಂಗಳೂರು(ನ.10):  ಮಕ್ಕಳ(Children) ಕೋವಿಡ್‌-19(Covid19) ಲಸಿಕೆ ಅಭಿಯಾನ ಮುಂದಿನ ವಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಯಾರಿಗೆ ಅಗತ್ಯವಿದೆಯೋ ಅವರಿಗೆ ಪ್ರಾಶಸ್ತ್ಯದ ಮೇಲೆ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

"

ಮಿಂಟೋ ಆಸ್ಪತ್ರೆಯ 125ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಕ್ಕಳಿಗೆ ಕೋವಿಡ್‌ ಲಸಿಕೆ(Vaccine) ನೀಡಲು ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದೆ. ಕೇಂದ್ರ ಸರ್ಕಾರ(Central Government) ಒಂದು ಕೋಟಿ ಡೋಸ್‌ ಲಸಿಕೆಗೆ ಆದೇಶ ನೀಡಿದೆ. ರಾಜ್ಯಕ್ಕೆ ಎಷ್ಟು ಪ್ರಮಾಣದಲ್ಲಿ ಲಸಿಕೆ ಸಿಗುತ್ತದೆ ಎಂಬುದರ ಮೇಲೆ ಲಸಿಕೆ ನೀಡುವ ಬಗ್ಗೆ ತೀರ್ಮಾನಕ್ಕೆ ಬರುತ್ತೇವೆ. ಆರೋಗ್ಯ ನಂದನ ಕಾರ್ಯಕ್ರಮದಡಿ ಈಗಾಗಲೇ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿದ್ದೇವೆ ಎಂದು ಅವರು ತಿಳಿಸಿದರು.

ಮೋದಿ ನಾಯಕತ್ವಕ್ಕೆ ಬಿಜೆಪಿ ಉಘೇ: 100 ಕೋಟಿ ಲಸಿಕೆ, 80 ಕೋಟಿ ಜನರಿಗೆ ಉಚಿತ ಆಹಾರ!

ರಾಜ್ಯದಲ್ಲಿ(Karnataka) ಕೊರೋನಾ(Coronavirus) ಲಸಿಕೆಯ ಮೊದಲ ಡೋಸ್‌ ಶೇ.89 ಹಾಗೂ ಎರಡನೇ ಡೋಸ್‌ ಶೇ. 48 ರಷ್ಟು ಪ್ರಗತಿ ಕಂಡಿದೆ. ಎರಡನೇ ಡೋಸ್‌ ಪಡೆಯಲು ಜನರು ಉದಾಸೀನ ಮಾಡಬಾರದು ಎಂದರು.

ಶುಲ್ಕ ಹೆಚ್ಚಳ ಇಲ್ಲ: 

ಖಾಸಗಿ ಶಿಕ್ಷಣ ಸಂಸ್ಥೆಗಳು(Private Educational Institutions) ಶುಲ್ಕ(Fees) ಹೆಚ್ಚಳ ಮಾಡುವಂತೆ ಮನವಿ ಮಾಡಿವೆ. ಆದರೆ ಈ ಬಾರಿ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಡಾ. ಸುಧಾಕರ್‌ ತಿಳಿಸಿದರು.

ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.!

12 ವರ್ಷ ಮೇಲ್ಪಟ್ಟಮಕ್ಕಳು ಸೇರಿ ಎಲ್ಲರಿಗೂ ನೀಡಬಹುದಾದ ದೇಶೀಯ ‘ಝೈಕೋವ್‌ ಡಿ’ ಲಸಿಕೆಯ ಪ್ರತೀ ಡೋಸ್‌ಗೆ 265 ರು. ದರ ನಿಗದಿ ಪಡಿಸಲಾಗಿದೆ. ಇದು ಸಿರಿಂಜ್‌ರಹಿತವಾಗಿದ್ದು, ಈ ಲಸಿಕೆ ನೀಡಲು ಫಾರ್ಮಾಜೆಟ್‌ ಎಂಬ ಅಪ್ಲಿಕೇಟರ್‌ ಬಳಸಲಾಗುತ್ತದೆ. ಇದಕ್ಕೆ ಪ್ರತ್ಯೇಕ 93 ರು. ಇದೆ. ಹೀಗಾಗಿ ಒಂದು ಡೋಸ್‌ಗೆ ಒಟ್ಟಾರೆ 358 ರು. ಆಗಲಿದೆ. ಇದು ಮೂರು ಡೋಸ್‌ನ ಲಸಿಕೆಯಾದ ಕಾರಣ, ಮೂರೂ ಡೋಸ್‌ಗೆ ಒಟ್ಟಾರೆ 1058 ರು. ಆಗಲಿದೆ.

ಈಗಾಗಲೇ ಭಾರತದಲ್ಲಿ ಬಳಕೆಯಲ್ಲಿರುವ ಕೋವಿಶೀಲ್ಡ್‌ನ 1 ಡೋಸ್‌ಗೆ 215 ರು. ದರ ನಿಗದಿ ಮಾಡಲಾಗಿದೆ. ಅಂದರೆ 2 ಡೋಸ್‌ಗೆ 430 ರು. ಆಗುತ್ತದೆ. ಇನ್ನು ಕೋವ್ಯಾಕ್ಸಿನ್‌ ಪ್ರತಿ ಡೋಸ್‌ ಅನ್ನು ಸರ್ಕಾರ 225 ರು. ನಂತೆ ಖರೀದಿಸಿತ್ತು. ಅಂದರೆ 2 ಡೋಸ್‌ಗೆ 450 ರು. ಹೀಗಾಗಿ ಈ ಲಸಿಕೆಗಳಿಗೆ ಹೋಲಿಸಿದರೆ ಸರ್ಕಾರ ಪ್ರತಿ ವ್ಯಕ್ತಿಗೆ ನೀಡಲು ಝೈಡಸ್‌ ಲಸಿಕೆಗೆ ಕನಿಷ್ಠ 600 ರು. ಹೆಚ್ಚು ಹಣ ಪಾವತಿ ಮಾಡಬೇಕಾಗಲಿದೆ. ಈಗಾಗಲೇ ಇದೇ ದರದಲ್ಲಿ 1 ಕೋಟಿ ಡೋಸ್‌ ಝೈಡಸ್‌ ಲಸಿಕೆ ಖರೀದಿಗೆ ಸರ್ಕಾರ ಬೇಡಿಕೆ ಸಲ್ಲಿಸಿದೆ. ಝೈಕೋವ್‌ -ಡಿ ವಿಶ್ವದ ಮೊಟ್ಟಮೊದಲ ಪ್ಲಾಸ್ಮಾಯ್ಡ್‌ ಡಿಎನ್‌ಎ ಲಸಿಕೆಯಾಗಿದೆ. ಪ್ರತಿ ಡೋಸ್‌ ಅನ್ನು 28 ದಿನಗಳ ಅಂತರದಲ್ಲಿ ಪಡೆದುಕೊಳ್ಳಬೇಕು. ಭಾರತದಲ್ಲಿ ಮಕ್ಕಳಿಗೆ ನೀಡಲು ಬಳಸಲು ಅನುಮತಿ ಪಡೆದ ಮೊದಲ ಲಸಿಕೆ ಇದು.

ಅಮೆರಿಕದಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ?

ಮಕ್ಕಳಿಗೂ ಕೊವ್ಯಾಕ್ಸಿನ್‌ಗೆ ಅನುಮತಿ

ಸಂಭವನೀಯ ಮೂರನೇ ಕೊರೋ​ನಾ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಎದುರಾಗಿದೆ. ಇದೀಗ ಮಕ್ಕಳಿಗೂ ಕೊವ್ಯಾಕ್ಸಿನ್‌ ಲಸಿಕೆ ನೀಡಲು ತಜ್ಞರ ಸಮಿತಿ ಮಕ್ಕಳ ಮೇಲೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಇದರಿಂದ ಮಕ್ಕಳು ಮತ್ತು ಪೋಷಕರು ನಿಟ್ಟಿಸಿರುವ ಬಿಡುವಂತಾಗಿದೆ.

ಈ ಕುರಿತು ಬೆಳಗಾವಿ ನಗರದ ಜೀವನ್‌ ರೇಖಾ ಆಸ್ಪತ್ರೆ ವೈದ್ಯ ಡಾ. ಅಮಿತ್‌ ಭಾತೆ ಮಾಹಿತಿ ನೀಡಿದ್ದು, ಎರಡರಿಂದ 18 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್‌ಲಸಿಕೆ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ.