ಇಲ್ಲೊಬ್ಬ ಯುವಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇದರ ವಿಡಿಯೋವನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಮುಂಬೈ: ಬೈಕ್‌ನಲ್ಲಿ ರಸ್ತೆ ನಡುವೆ ಯುವಕರು ಡೆಂಜರಸ್ ಬೈಕ್ ಸ್ಟಂಟ್ ಮಾಡುತ್ತಿರುವುದನ್ನು ನೋಡುತ್ತಲೇ ಇರುತ್ತೇವೆ. ಹೀಗೆ ಸ್ಟಂಟ್ ಮಾಡಲು ಹೋಗಿ ಅನೇಕರು ಸಾವಿನ ಮನೆ ಸೇರುತ್ತಾರೆ. ಈ ಬಗ್ಗೆ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸಿದರೂ ಬಿಸಿರಕ್ತದ ಯುವಕರು ಈ ಸಾಹಸ ಮಾಡುವುದನ್ನು ನಿಲ್ಲಿಸುವುದೇ ಇಲ್ಲ. ಅದೇ ರೀತಿ ಇಲ್ಲೊಬ್ಬ ಯುವಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇದರ ವಿಡಿಯೋವನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಛತ್ತಿಸ್‌ಗಡದ (Chhattisgarh) ದುರ್ಗ್‌ನಲ್ಲಿ (Durg) ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಯಾವುದೇ ಹೆಲ್ಮೆಟ್ ಇಲ್ಲದೆ ಸ್ಟಂಟ್ ಮಾಡಿದ್ದಾನೆ. ವಿಡಿಯೋದಲ್ಲಿ ಕಾಣಿಸುವಂತೆ ಬೈಕ್ ಸವಾರನೋರ್ವ ತಲೆಗೆ ಯಾವುದೇ ಹೆಲ್ಮೆಟ್ ಧರಿಸದೇ ತನ್ನ ಎರಡು ಕಾಲುಗಳನ್ನು ಒಂದು ಸೈಡ್‌ನಲ್ಲಿ ಹಾಕಿಕೊಂಡು ಒಂದು ಕೈನಲ್ಲಿ ಬೈಕ್‌ನ ಹ್ಯಾಂಡಲ್ ಹಿಡಿದುಕೊಂಡು ರಸ್ತೆಯಲ್ಲಿ ಬೈಕ್ ರೈಡ್ ಮಾಡುತ್ತಿದ್ದಾನೆ. ಸಂಚಾರಿ ಸುರಕ್ಷತಾ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಈತ ಪೊಲೀಸರಿಗೆ ನಂತರ ತಗಲಾಕಿಕೊಂಡಿದ್ದಾನೆ. ಈತ ಸ್ಟಂಟ್ ಮಾಡುತ್ತಿರುವ ಹಾಗೂ ನಂತರ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡು ದಂಡ ಹಾಕಿಸಿಕೊಂಡಿರುವ ವಿಡಿಯೋವನ್ನು ಪೊಲೀಸರು (Police) 'ಮೊದಲು ಹಾಗೂ ನಂತರ' ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ(Social Media) ಪೋಸ್ಟ್ ಮಾಡಿದ್ದಾರೆ. 

Scroll to load tweet…

ಈತನಿಗೆ ಪೊಲೀಸರು ಬರೋಬ್ಬರಿ 4,200 ರೂಪಾಯಿ ದಂಡ ವಿಧಿಸಿದ್ದಾರೆ. ಈತ ತನ್ನ ಎರಡು ಕಿವಿಗಳನ್ನು ಹಿಡಿದುಕೊಂಡು ಪೊಲೀಸರ ಬಳಿ ಕ್ಷಮೆ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಕ್ರಿಯೇಟಿವ್ ಆಗಿ ಎಡಿಟ್ ಮಾಡಿರುವ ಪೊಲೀಸರು ಯಾರಾ ದಿಲ್ದಾರಾ ಸಿನಿಮಾದ ಬಿನ್ ತೆರೆ ಸನಂ ಹಾಡನ್ನು ಈ ವಿಡಿಯೋಗೆ ಸಂಯೋಜಿಸಿದ್ದಾರೆ.

ಒಂದೇ ಬೈಕ್ ಏರಿ 7 ಜನರ ಪ್ರಯಾಣ: ಹೀಗಾದ್ರೆ ಕಾರು ಕಂಪನಿ ಬಾಗಿಲು ಹಾಕ್ಬೇಕಷ್ಟೇ ಎಂದ ನೆಟ್ಟಿಗರು

ದುರ್ಗ್ ಪೊಲೀಸರ ಸೃಜನಾತ್ಮಕತೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ದುರ್ಗ್‌ ಪೊಲೀಸರು ಸ್ಟಂಟ್ಮನ್‌ಗಳು, ಕರ್ಕಶ ಸೈಲೆನ್ಸರ್‌ ಬಳಸುವವರು, ರಾಶ್ ಡ್ರೈವಿಂಗ್ ಮಾಡುವವರು ಮುಂತಾದವರ ವಿರುದ್ಧ ದುರ್ಗ್ ಪೊಲೀಸರು ನಿರಂತರವಾಗಿ ಕ್ರಮ ಕೈಗೊಳ್ಳುತ್ತಾರೆ. ದಯವಿಟ್ಟು ಟ್ರಾಫಿಕ್ ರೂಲ್ಸ್ ಫಾಲೋ ಮಾಡಿ ಎಂದು ಬರೆದು ಜೊತೆಗೆ ಹೆಲ್ಪ್‌ಲೈನ್ ನಂಬರ್‌ನ್ನು ಕೂಡ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಹೆಲ್ಮೆಟ್ ಧರಿಸದ್ದಕ್ಕೆ ದಂಡ: ಸಿಟ್ಟಿಗೆದ್ದು ಬಿಲ್ ಕಟ್ಟದ ಪೊಲೀಸ್ ಠಾಣೆಯ ಪವರ್‌ ಕಟ್ ಮಾಡಿದ ಲೈನ್‌ಮ್ಯಾನ್‌