Asianet Suvarna News Asianet Suvarna News

ಬಿಜೆಪಿ ಅಧಿಕಾರಕ್ಕೆ ಬಂದರೆ...ಎಲ್ಲ ಸರಿಯಾಗುವುದು ಮನೋಜ್ ತಿವಾರಿ ಹೇಳಿದ್ದು ಕೇಳಿದರೆ..!

ವಾಯುಮಾಲಿನ್ಯದಿಂದ ತತ್ತರಿಸಿ ಹೋಗಿರುವ ರಾಜಧಾನಿ ದೆಹಲಿ ಜನತೆ| ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು| 'ಬಿಜೆಪಿ ಅಧಿಕಾರಕ್ಕೆ ಬಂದರೆ ಎರಡು ವರ್ಷಗಳಲ್ಲಿ ವಾಯುಮಾಲಿನ್ಯಕ್ಕೆ ಇತಿಶ್ರೀ'| ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಭರವಸೆ| ಮುಂದಿನ ವರ್ಷ ದೆಹಲಿ ವಿಧಾನಸಭೆಗೆ ಚುನಾವಣೆ ಹಿನ್ನೆಲೆ| ಆಪ್ ಸರ್ಕಾರ ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲ ಎಂದ ಮನೋಜ್ ತಿವಾರಿ|

Manoj Tiwari Says Delhi Will Be Pollution-Free In 2 Years If BJP Comes To Power
Author
Bengaluru, First Published Nov 12, 2019, 7:21 PM IST

ನವದೆಹಲಿ(ನ.12): ತೀವ್ರ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿ ನವದೆಹಲಿ ಜನತೆ ತತ್ತರಿಸಿ ಹೋಗಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾದ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಈ ಮಧ್ಯೆ ದೆಹಲಿಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಎರಡು ವರ್ಷಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.

ಸಮ-ಬೆಸ ವಾಹನ ಸಂಚಾರ ದೆಹಲಿ ಮಾಲಿನ್ಯಕ್ಕೆ ಮದ್ದೇ?

ಮುಂದಿನ ವರ್ಷ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ ಎರಡು ವರ್ಷಗಳಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲಾಗುವುದು ಎಂದು ತಿವಾರಿ ಹೇಳಿದ್ದಾರೆ.

ಇದೇ ನ.18ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಕ್ರಮ ಕಟ್ಟಡ ಹಾಗೂ ಕಾಲೋನಿಗಳ ನಿಯುಂತ್ರಣಕ್ಕೆ ಹೊಸ ಕಾನೂನು ಜಾಆರಿಗೆ ಬರಲಿದೆ ಎಂದು ಮನೋಜ್ ತಿವಾರಿ ಸ್ಪಷ್ಟಪಡಿಸಿದ್ದಾರೆ.

ವಾಯುಮಾಲಿನ್ಯಕ್ಕೆ ಪಾಕ್, ಚೀನಾ ಕಾರಣ: ಕ್ಸಿ ಅವರನ್ನು ಮೋದಿ ಮುದ್ದಾಡಿದ್ದೇಕಣ್ಣ?

ಇದೇ ವೇಳೆ ಆಪ್ ಸರ್ಕಾರವನ್ನು ಟೀಕಿಸಿದ ಮನೋಜ್ ತಿವಾರಿ, ವಾಯುಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಕೇಜ್ರಿವಾಲ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹರಿಹಾಯ್ದರು.

Follow Us:
Download App:
  • android
  • ios