ಸ್ವದೇಶಿ ಆಟಿಕೆ ನಿರ್ಮಿಸುವ ಸಮಯ, ಸ್ವಾವಲಂಬಿ ಭಾರತ ನಿರ್ಮಾಣದತ್ತ ಮತ್ತೊಂದು ಹೆಜ್ಜೆ!

ಸ್ವದೇಶಿ ಆಟಿಕೆ ನಿರ್ಮಾಣದತ್ತ ಪಿಎಂ ಮೋದಿ ಚಿತ್ತ| ಆತ್ಮನಿರ್ಭರ ಭಾರತದತ್ತ ಮೋದಿ ಮತ್ತೊಂದು ಹೆಜ್ಜೆ| ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು

Mann Ki Baat PM Modi says time to get vocal for local toys

ನವದೆಹಲಿ(ಆ.30): ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 68ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕೊರೋನಾ ನಡುವೆ ಜನರ ತಾಳ್ಮೆಯನ್ನು ಶ್ಲಾಘಿಸಿರುವ ಮೋದಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿರುವ ಜನರ ನಡೆಗೆ ನಮಿಸಿದ್ದಾಋಎ. ಇದೇ ವೇಳೆ ಮಕ್ಕಳ ಸಮಯದ ಬಗ್ಗೆಯೂ ಕಾಳಜಿ ವಹಿಸಿರುವ ಭಾರತದಲ್ಲಿ ಆಟಿಕೆ ಉತ್ಪಾದನೆ ಕುರಿತು ವಿವಿಧ ಇಆಖೆಗಳೊಂದಗೆ ಮಾತುಕತೆ ನಡೆಸಿದ್ದಾರೆ.

"

ಮೋದಿ ಮನ್‌ ಕೀ ಬಾತ್‌ ಮುಖ್ಯಾಂಶಗಳು 

* ಸಾಮಾನ್ಯವಾಗಿ ಇದು ಉತ್ಸವ ಸಮಯವಾಗಿರುತ್ತಿತ್ತು. ದೇಶದ ನಾನಾ ಕಡೆ ಜಾತ್ರೆ ನಡೆಯುತ್ತೆ,. ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕೊರೋನಾತಂಕದ ನಡುವೆಯೂ ಜನರಲ್ಲಿ ಉತ್ಸಾಹ ಹಾಗೂ ಹುಮ್ಮಸ್ಸು ಎರಡೂ ಇದೆ. ಆದರೆ ಶಿಸ್ತು ಹಾಗೂ ನಿಯಮಗಳನ್ನೂ ಪಾಲಿಸಬೇಕಾದ ಅನಿವಾರ್ಯತೆ ಇದೆ. 

* ಜನರಿಗೆ ಈ ಬಗ್ಗೆ ಕಾಳಜಿ ಇದೆ. ಜನರು ತಮ್ಮ ಕಾಳಜಿ ವಹಿಸುವುದರೊಂದಿಗೆ ಇತರರ ಕಾಳಜಿಯನ್ನೂ ವಹಿಸಿ ತಮ್ಮ ನಿತ್ಯದ ಕೆಲಸವನ್ನು ಮಾಡುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದೂ ಆಯೋಜನೆಯಲ್ಲೂ ಜನರು ಅನುಸರಿಸುತ್ತಿರುವ ತಾಳ್ಮೆ ಹಾಗೂ ಸರಳತೆ ಅಭೂತಪೂರ್ವವಾಗಿದೆ.

ಮನ್‌ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ!

* ಗಣೇಶೋತ್ಸವ ಕೂಡಾ ಕೆಲವೆಡೆ ಆನ್‌ಲೈನ್ ಆಚರಿಸಿದರೆ, ಹಲವೆಡೆ ಈ ಬಾರಿ ಪರಿಸರ ಸ್ನೇಹಹಿ ಗಣೇಶ ಪ್ರತಿಮೆ ಸ್ಥಾಪಿಸಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಒಂದು ವಿಚಾರ ನಮ್ಮ ಗಮನ ಸೆಳೆಯುತ್ತದೆ. ನಮ್ಮ ಹಬ್ಬ ಹಾಗೂ ಪರಿಸರ ಇವೆರಡರ ನಡುವೆ ಒಂದು ಆಳವಾದ ಸಂಬಂಧವಿದೆ. ಒಂದೆಡೆ ನಮ್ಮ ಹಬ್ಬಗಳಲ್ಲಿ ಪರಿಸರ ಹಾಗೂ ಪ್ರಕೃತಿಯೊಂದಿಗೆ ಸಹಬಾಳ್ವೆಯ ಸಂದೇಶವಿದ್ದರೆ ಮತ್ತೊಂದೆಡೆ ಅನೇಕ ಹಬ್ಬಗಳನ್ನು ಪ್ರಕೃತಿ ರಕ್ಷಣೆಗಾಗಿ ಆಚರಿಸಲಾಗುತ್ತದೆ.

* ಉದಾಹರಣೆಗೆ ಬಿಹಾರದ ಪಶ್ಚಿಮ ಚಂಪಾರಣ್ಯದಲ್ಲಿ ಸಾವಿರಾರು ವರ್ಷಗಳಿಂದ ಆದಿವಾಸಿ ಸಮಾಜದ ಜನರು ಎಂಭತ್ತು ಗಂಟೆಯ ಲಾಕ್‌ಡೌನ್ ರೀತಿ ಆಚರಿಸುತ್ತಾರೆ. ಪ್ರಜೃತಿ ರಕ್ಷಣೆಯಾದ ಭರ್ನಾವನ್ನು ಥಾರೂ ಅಮುದಾಯದವರು ತಮ್ಮ ಪರಂಪರೆಯ ಭಾಗವಾಗಿಸಿಕೊಂಡಿದ್ದಾರೆ. ಹೀಗಿರುವಾಗ ಯಾರೂ ಇಲ್ಲಿಗೆ ತೆರಳುವುದಿಲ್ಲ, ಅಲ್ಲದೇ ಇಲ್ಲಿನ ಜನರೂ ತಮ್ಮ ಮನೆಯಿಂದ ಹೊರ ಬರುವುದಿಲ್ಲ. 

* ಒಂದು ವೇಳೆ ಮನೆಯಿಂದ ಹೊರ ಬಂದರೆ ಅಥವಾ ಯಾರಾದರೂ ಬಂದರೆ, ಈ ಚಟುವಟಿಕೆಗಳಿಂದ ಹೊಸ ಗಿಡಗಳಿಗೆ ಹಾನಿಯಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಈ ವೇಳೆ ಸಂಗೀತ, ನೃತ್ಯ ಕಾರ್ಯಕ್ರಮಗಳೂ ನಡೆಯುತ್ತವೆ. 

* ಸದ್ಯ ಓಣಂ ಕೂಡಾ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಜನರು ಏನಾದರೂ ಹೊಸ ವಸ್ತುಗಳನ್ನು ಖರೀದಿಸುತ್ತಾರೆ, ಮನೆಗಳನ್ನು ಅಲಂಕರಿಸುತ್ತಾರೆ. ಪೊಕ್ಲಂ ಮಾಡುತ್ತಾರೆ. ಬಗೆ ಬಗೆಯ ಕ್ರೀಡೆ ಹಾಗೂ ಕಾರ್ಯಕ್ರಮಗಳೂ ನಡೆಯುತ್ತವೆ. ಓಣಂ ವಿಚಾರ ಸದ್ಯ ವಿದೇಶಗಳಿಗೂ ತಲುಪಿದೆ. ಅಮೆರಿಕ, ಯೂರೋಪ್ ಮೊದಲಾದ ದೇಶಗಳಲ್ಲೂ ಓಣಂ ಆಚರಿಸಲಾಗುತ್ತದೆ. ಈ ಮೂಲಕ ಓಣಂ ಅಂತಾರಾಷ್ಟ್ರೀಯ ಹಬ್ಬವಾಗುತ್ತಿದೆ

4 ರಾಷ್ಟ್ರಗಳಿಂದ ಭಾರತಕ್ಕೆ ಶಸ್ತ್ರಾಸ್ತ್ರ: ಚೀನಾಕ್ಕೀಗ ನಡುಕ!

* ಓಣಂ ಕೃಷಿಗೆ ಸಂಬಂಧಿಸಿದ ಹಬ್ಬವಾಗಿದೆ. ಇದು ಗ್ರಾಮೀಣ ಅರ್ಥ ವ್ಯವಸ್ಥೆಗೆ ಹೊಸ ಆರಂಭದ ಸಮಯವಾಗಿದೆ. ರೈತರಿಂದೇ ನಮ್ಮ ಜೀವನ ಹಾಗೂ ಸಮಾಜ ಮುಂದೆ ಸಾಗುತ್ತದೆ. ನಮ್ಮ ಹಬ್ಬ ರೈತರ ಪರಿಶ್ರಮದಿಂದಲೇ ಕಳೆ ಪಡೆಯುತ್ತದೆ. 

* ನಮ್ಮ ಅನ್ನದಾತನ ಶ್ರಮವನ್ನು ವೇದಗಳಲ್ಲೂ ಗೌರವಯುತವಾಗಿ ನಮಿಸಲಾಗಿದೆ. ಋಗ್ವೇದದಲ್ಲೂ ಅನ್ನದಾತನಿಗೆ ನಮನ, ರೈತನಿಗೆ ನಮನ ಎಂಬ ಮಂತ್ರವಿದೆ. ನಮ್ಮ ರೈತರು ಕೊರೋನಾದಂತಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. 

* ಕೊರೋನಾತಂಕದ ಈ ಸಮಯದಲ್ಲಿ ದೇಶ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ಒಂದೇ ಸಮಯದಲ್ಲಿ ಹೋರಾಡುತ್ತಿದೆ. ಆದರೆ ಇದರೊಂದಿಗೆ ಅನೇಕ ಬಾರಿ ಇಷ್ಟು ದೀರ್ಘ ಸಮಯದಿಂದ ಮನೆಗಳಲ್ಲಿ ಉಳಿದುಕೊಂಡಿರುವುದರಿಂದ ನನ್ನ ಪುಟಾಣಿ ಮಿತ್ರರ ಸಮಯ ಹೇಗೆ ಕಳೆಯುತ್ತಿದೆ ಎಂಬ ಬಗ್ಗೆ ಯೋಚಿಸುತ್ತಿದ್ದೆ. ಇದಕ್ಕಾಗೇ ನಾನು ಗಾಂಧೀನಗರದ ಚಿಲ್ಡ್ರನ್ ಯೂನಿವರ್ಸಿಟಿ ಸೇರಿದಂತೆ ಅನೇಕ ಇಲಾಖೆಗಗಳ ಜೊತೆ ಸಭೆ ನಡೆಸಿ ನಮ್ಮ ಮಕ್ಕಳಿಗಾಗಿ ಏನು ಮಾಡಬಹುದೆಂದು ಚರ್ಚೆ ನಡೆಸಿದೆ. ಈ ಮೂಲಕ ನನಗೂ ಹೊಸ ವಿಚಾರ ತಿಳಿಯಲು ಅವಕಾಶ ನೀಡಿತ್ತು. ಹೀಗಘಾಇ ನನಗೆ ಖುಷಿಯಾಯಿತು. 

* ಈ ಸಭೆಯಲ್ಲಿ ಆಟಿಕೆಗಳು ಅದರಲ್ಲೂ ವಿಶೇಷವಾಗಿ ಭಾರತೀಯ ಆಟಿಕೆಗಳ ಬಗ್ಗೆ ಚರ್ಚೆ ನಡೆದಿತ್ತು. ಭಾರತದ ಮಕ್ಕಳಿಗೆ ಹೊಸ ಬಗೆಯ ಆಟಿಕೆಗಳು ಹೇಗೆ ಸಿಗಬೇಕು ಎಂಬ ಬಗ್ಗೆ ನಾವು ಮಾತುಕತೆ ನಡೆಸಿದೆವು. ಭಾರತ ಆಟಿಕೆಗಳ ದೊಡ್ಡ ಉತ್ಪಾದನಾ ಕೇಂದ್ರವಾಗುವುದು ಹೇಗೆ ಎಂಬ ಬಗ್ಗೆ ವಿಚಾರ ನಡೆಸಿದೆವು. ಆಟಿಕೆಗಳು ಒಂದೆಡೆ ಮಕ್ಕಳ ಚಟುವಟಿಕೆ  ಹೆಚ್ಚಿಸಿದರೆ, ಮತ್ತೊಂದೆಡೆ ನಮ್ಮ ಆಕಾಂಕ್ಷೆಗಳಿಗೂ ಸ್ವಚ್ಛಂದವಾಗಿ ಹಾರಾಡುವ ಅವಕಾಶ ನೀಡುತ್ತದೆ. 

ಗುಡ್ಡಗಾಡಿನಲ್ಲಿ 16 ಕೆರೆ: ಮಂಡ್ಯದ ಮಾಡರ್ನ್ ಭಗೀರಥ ಕಾಮೇಗೌಡರಿಗೆ ಪ್ರಧಾನಿ ಮೋದಿ ಶ್ಲಾಘನೆ!

* ಈ ಆಟಿಕೆಗಳ ಬಗ್ಗೆ ರವೀಂದ್ರನಾಥ್ ಠಾಗೋರ್ ಕೂಡಾ ಸಂಪೂರ್ಣವಾಗಿದ್ದು, ಮಕ್ಕಳು ಆಟವಾಡುತ್ತಲೇ ಅದನ್ನು ಪೂರ್ಣಗೊಳಿಸುವ ಆಟಿಕೆಯೇ ಅತ್ಯುತ್ತಮವಾದದ್ದು ಎನ್ನುತ್ತಿದ್ದರು. 

* ಜಾಗತಿಕ ಆಟಿಕೆ ಉದ್ಯಮ 7 ಲಕ್ಷ ಕೋಟಿಗೂ ಅಧಿಕ ವ್ಯವಹಾರ ನಡೆಯುತ್ತಿದೆ. ಆದರೆ ಭಾರತದ ಪಾಲು ಈ ಉದ್ಯಮದಲ್ಲಿ ತುಂಬಾ ಕಡಿಮೆ ಇದೆ. ಆದ್ದರಿಂದ ನಾವು ಭಾರತದಲ್ಲಿ ಆಟಿಕೆ ಉದ್ಯಮಕ್ಕೆ ಉತ್ತೇಜನೆ ನೀಡಬೇಕು.

* ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶ ಸೇರಿ ಹಲವೆಡೆ ದೇಸಿ ಆಟಿಕೆ ಉತ್ಪಾದನೆಯಾಗುತ್ತಿದೆ. ದೇಸಿ ಆಟಿಕೆಗಳ ಉತ್ಪಾದನೆಗೆ ಉತ್ತೇಜನ ನೀಡುವ ಕುರಿತು ಮೋದಿ ಮಾತು.

ಆತ್ಮನಿರ್ಭರ ಭಾರತವೇ ಹುತಾತ್ಮರಿಗೆ ನಾವು ಸಲ್ಲಿಸುವ ಗೌರವ: ಮೋದಿ ಮನ್‌ ಕೀ ಬಾತ್

* ಆಟಿಕೆಗಳ ಉತ್ಪಾದನೆಯಿಂದ ಹಲವು ಜನರು ಜೀವನ ಕಟ್ಟಿಕೊಳ್ಳಬಹುದು. ಲೋಕಲ್ ಆಟಿಕೆಗಳನ್ನು ಗ್ಲೋಬಲ್ ಮಾರುಕಟ್ಟೆ ನೀಡಲು ಮೋದಿ ಕರೆ. ಪರಿಸರ ಪ್ರಿಯ ಆಟಿಕೆಗಳ ಉತ್ಪಾದನೆಯಿಂದ ಪರಿಸರ ಕಾಳಜಿ ಮೆರೆಯೋಣ.

* ನಮ್ಮ ದೇಶದಲ್ಲಿ ಹಲವು ಕೌಶಲ್ಯ ಇರುವ ಯುವಕರಿದ್ದಾರೆ. ಲೆಟ್ ದ ಗೇಮ್ ಬಿಗಿನ್ ಎಂದು ಕಂಪ್ಯೂಟರ್ ಗೇಮ್ಸ್ ಗಳಿಗೆ ಉತ್ತೇಜನೆ. ಭಾರತದ ಯುವಕರಿಗೆ ಕಂಪ್ಯೂಟರ್ ಗೇಮ್ ಅಭಿವೃದ್ಧಿಗೆ ಕರೆ.

Latest Videos
Follow Us:
Download App:
  • android
  • ios