ಮನ್ ಕೀ ಬಾತ್: ಕಾರ್ಗಿಲ್ ವೀರರು, ಅವರನ್ನು ಹೆತ್ತ ತಾಯಂದಿರಿಗೆ ಮೋದಿ ನಮನ!
ಕಾರ್ಗಿಲ್ ವೀರರಿಗೆ ಮೋದಿ ನಮನ| ಕೊರೋನಾ ಪರಿಸ್ಥಿತಿಯಲ್ಲಿ ಎಚ್ಚರವಾಗಿರುವಂತೆ ಮೋದಿ ಮನವಿ| ಸ್ವಾವಲಂಭಿ ಭಾರತದ ಬಗ್ಗೆ ಮನ್ ಕೀ ಬಾತ್‌ನಲ್ಲಿ ಉಲ್ಲೇಖ
ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ನೆನಪಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಕೊರೋನಾ ಆತಂಕದ ಮಧ್ಯೆ ಎಚ್ಚರದಿಂದಿರುವಂತೆ ಸೂಚಿಸಿದ್ದಾರೆ.
"
ಹೌದು 67ನೇ ಮನ್ ಕೀ ಬಾತ್ ಸಂಚಿಕೆಯಲ್ಲಿ ಪಿಎಂ ಮೋದಿ ಮಾತಿನ ಪ್ರಮುಖ ಅಂಶಗಳು
* ಇಂದಿನ ದಿನ ಬಹಳ ವಿಶೇಷವಾದದ್ದು, ಇದು ಕಾರ್ಗಿಲ್ ವಿಜಯ್ ದಿವಸ್. 21 ವರ್ಷಗಳ ಹಿಂದೆ ಇದೇ ದಿನ ನಮ್ಮ ಸೇನೆ ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಿದ್ದರು. ಕಾರ್ಗಿಲ್ ಯುದ್ಧ ಯಾವ ಪರಿಸ್ಥಿತಿಯಲ್ಲಿ ನಡೆದಿತ್ತೋ ಅದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನ ದುಸ್ಸಾಹಸ ಮಾಡಿತ್ತು. ದುಷ್ಟತನ ಮಾಡಲಿಚ್ಛಿಸುವವರು ತಮಗೆ ಹಿತ ಬಯಸುವವರಿಗೂ ಕೆಟ್ಟದನ್ನೇ ಮಾಡುತ್ತಾರೆ. ಹೀಗಾಗಿ ಪಾಕಿಸ್ತಾನ ಅಂದು ಭಾರತದ ಬೆನ್ನಿಗೆ ಚೂರಿ ಹಾಕಲು ಯತ್ನಿಸಿತ್ತು. ಆದರೆ ನಮ್ಮ ವೀರ ಯೋಧರು ತೋರಿಸಿದ ಪರಾಕ್ರಮ ಹಾಗೂ ಶಕ್ತಿಯನ್ನು ಇಡೀ ವಿಶ್ವವೇ ನೋಡಿತ್ತು.
21ನೇ ಕಾರ್ಗಿಲ್ ವಿಜಯ ದಿವಸ: ಪಾಕ್ ಕುತಂತ್ರದಿಂದ ಆರಂಭವಾಗಿದ್ದ ಯುದ್ಧ!
* ಎತ್ತರದ ಪರ್ವತದಲ್ಲಿದ್ದ ಶತ್ರುಗಳು ಹಾಗೂ ಕೆಳಗಿದ್ದ ನಮ್ಮ ಸೈನಿಕರು ಅಂದು ಹೋರಾಡಿದ್ದರು. ಆದರೆ ಅಂದು ಎತ್ತರದಲ್ಲಿದ್ದ ಶತ್ರುಗಳು ಜಯಿಸಲಿಲ್ಲ, ಬದಲಾಗಿ ಭಾರತೀಯ ಯೋಧರ ನಿಜವಾದ ಶಕ್ತಿಗಾಯಿತು. ಅಂದು ನನಗೂ ಕಾರ್ಗಿಲ್‌ಗೆ ತೆರಳು ಹಾಗೂ ವೀರ ಯೋಧರನ್ನು ಭೇಟಿಯಾಗಲು ಅವಕಾಶ ಸಿಕ್ಕಿತ್ತು. ಆ ದಿನ ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದು.
* ಇಂದು ದೇಶಾದ್ಯಂತ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ #CourageInKargil ಎಂಬ ಹ್ಯಾಷ್ ಟ್ಯಾಗ್ ಜೊತೆ ಜನರು ವೀರ ಯೋಧರಿಗೆ ನಮನ ಸಲ್ಲಿಸುತ್ತಿದ್ದಾರೆ. ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸರ್ಪಿಸುತ್ತಿದ್ದಾರೆ.
* ನಾನಿಂದು ಇಡೀ ದೇಶದ ಪರವಾಗಿ ಅಂದು ಕಾರ್ಗಿಲ್‌ನಲ್ಲಿ ಹೋರಾಡಿದ್ದ ವೀರ ಸೈನಿಕರ ಜೊತೆ ಅವರನ್ನು ಹೆತ್ತ ವೀರ ತಾಯಿಯಂದಿರಿಗೂ ನಮಿಸುತ್ತೇನೆ.
* ಇಂದು ಇಡೀ ದಿನ ಕಾರ್ಗಿಲ್ ವಿಜಯ್ ದಿನಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಹಂಚಿಕೊಂಡು ತಿಳಿಯುವಂತೆ ಆಗ್ರಹಿಸುತ್ತೇನೆ.
"
'ವೀರಯೋಧನ ಛಿದ್ರ ದೇಹ ನನ್ನಲ್ಲಿ ಕಿಚ್ಚು ಹಚ್ಚಿತು'; ಯುದ್ಧದ ಮೆಲುಕು ಹಾಕಿದ ದಕ್ಷಿಣ ಕನ್ನಡದ ಯೋಧ
* ಕಾರ್ಗಿಲ್ ಯುದ್ಧದ ವೇಳೆ ಅಟಲ್ ಬಿಹಾರಿ ವಾಜಪೇಯಿ ಕೆಂಪು ಕೋಟೆಯಿಂದ ಏನು ನುಡಿದಿದ್ದರೋ ಅದು ಇಂದಿಗೂ ಅನ್ವಯವಾಗುತ್ತದೆ. ಅಟಲ್‌ಜೀ ಅಂದು ದೇಶಕ್ಕೆ ಗಾಂಧೀಜಿಯವರ ನುಡಿಯೊಂದನ್ನು ನೆನಪಿಸಿದ್ದರು. ಯಾರೊಬ್ಬರಿಗೂ ಏನು ತಾನೇನು ಮಾಡಬೇಕೆಂದು ತಿಳಿಯದೆ ಗೊಂದಲ ಮೂಡಿದರೆ ಭಾರತದ ಅತ್ಯಂತ ಬಡ ಹಾಗೂ ಅಸಹಾಯಕ ವ್ಯಕ್ತಿ ಬಗ್ಗೆ ಯೋಚಿಸಬೇಕು. ತಾನು ಮಾಡಲು ಹೊರಟಿರುವ ಕಾರ್ಯದಿಂದ ಆ ವ್ಯಕ್ತಿಗೆ ಏನಾದರೂ ಲಾಭವಾಗುತ್ತಾ ಎಂದು ಯೋಚಿಸಬೇಕು ಎಂದು ಗಾಂಧೀಜಿ ಹೇಳಿದ್ದರು. ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಅಂದು ಅಟಲ್‌ಜೀ ಕಾರ್ಗಿಲ್ ಯುದ್ಧ ನಮಗೆ ಮತ್ತೊಂದು ಪಾಠ ಹೇಳಿಕೊಟ್ಟಿದೆ. ಯಾವುದೇ ಮಹತ್ವಪೂರ್ಣ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಮ್ಮ ಈ ಹೆಜ್ಜೆ ಈ ಹೆಜ್ಜೆ ಕಾರ್ಗಿಲ್‌ನಂತಹ ಕಣಿವೆಯಲ್ಲಿ ತಮ್ಮ ಪ್ರಾಣವನ್ನು ಆಹುತಿಗೈದ ಸೈನಿಕರ ಪ್ರತಿರೂಪದಂತಿದೆಯಾ ಎಂದು ಯೋಚಿಸಿ ಎಂದಿದ್ದರು.
* ಯುದ್ಧದ ಪರಿಸ್ಥಿತಿಯಲ್ಲಿ ನಾವೇನು ಮಾಡುತ್ತೇವೋ, ಹೇಳುತ್ತೇವೋ ಅದು ಗಡಿಯಲ್ಲಿರುವ ಸೈನಿಕರ ಮನೋಬಲ ಹಾಗೂ ಅವರ ಕುಟುಂಬದ ಮೇಲೆ ಬಹುದೊಡ್ಡ ಪ್ರಭಾವ ಬೀರುತ್ತದೆ. ಇದನ್ನು ನಾವು ಯಾವತ್ತೂ ಮರೆಯಬಾರದು. ಹೀಗಾಗಿ ನಾವೇನು ಮಾಡುತ್ತೇವೋ ಆಗೆಲ್ಲಾ ಸೈನಿಕರ ಮನೋಬಲ ಹೆಚ್ಚುವಂತೆ ನಡೆದುಕೊಳ್ಳಬೇಕು ಎದಿದ್ದಾರೆ.
* ಇನ್ನು ಇಡೀ ದೇಶ ಹೇಗೆ ಒಗ್ಗಟ್ಟಾಗಿ ಕೊರೋನಾ ವಿರುದ್ಧ ಹೋರಾಡುತ್ತಿದೆಯೋ ಅದು ಅನೇಕ ಶಂಕೆಗಳನ್ನು ತಪ್ಪೆಂದು ಸಾರಿದೆ. ಇಂದು ನಮ್ಮ ದೇಶದಲ್ಲಿ ಗುಣಮುಖಗೊಳ್ಳುತ್ತಿರುವ ಸಂಖ್ಯೆ ಹೆಚ್ಚು ಇದೆ. ಜೊತೆಗೆ ನಮ್ಮ ದೇಶದಲ್ಲಿ ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ವಿಶ್ವದ ಅನೇಕ ರಾಷ್ಟ್ರಗಳ ಹೋಲಿಕೆಯಲ್ಲಿ ಕಡಿಮೆ ಇದೆ. ಒಬ್ಬ ವ್ಯಕ್ತಿಯನ್ನು ಕಳೆದುಕೊಳ್ಳುವುದು ಕೂಡಾ ದುಃಖದ ವಿಚಾರ ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಭಾರತ ತನ್ನ ಲಕ್ಷಾಂತರ ಮಂದಿ ದೇಶವಾಸಿಗರ ಜೀವನ ಉಳಿಸಿಕೊಳ್ಳಲು ಯಶ್ವಿಯೂ ಆಗಿದೆ.
* ಆದರೆ ಕೊರೋನಾ ಆತಂಕ ಇನ್ನೂ ಮುಗಿದಿಲ್ಲ. ಅನೇಕ ಕಡೆ ಇದು ಬಹಳ ವೇಗವಾಗಿ ಹಬ್ಬಿಕೊಳ್ಳುತ್ತಿದ್ದು, ನಾವು ಎಚ್ಚರ ವಹಿಸುವ ಅಗತ್ಯವಿದೆ. ಕೊರೋನಾ ಈಗಲೂ ಈಗಲೂ ಆರಂಭದಲ್ಲಿದ್ದಷ್ಟೇ ಹಾನಿಕಾರಕ ಎಂಬುವುದನ್ನು ನೆನಪಿಟಗ್ಟುಕೊಳ್ಳಬೇಕು. ಹೀಗಾಗಿ ಮಾಸ್ಕ್ ಧರಿಸುವುದು, ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡುವುದು, ಉಗುಳದಿರುವುದು, ಸ್ವಚ್ಛತೆ ಕಾಪಾಡಬೇಕು. ಇದೇ ಆಯುಧ ನಮ್ಮನ್ನು ಕೊರೋನಾದಿಂದ ಕಾಪಾಡುತ್ತದೆ.
* ಮಾಸ್ಕ್ ನಮಗೆ ಬಹಳ ಕಿರಿ ಕಿರಿಯುಂಟು ಮಾಡುತ್ತದೆ. ಮಾತನಾಡುವಾಗ, ಮಾಸ್ಕ್ ಧರಿಸಲೇಬೇಕು. ಆದರೆ ಹೀಗಾಗುತ್ತಿಲ್ಲ.
* ಇನ್ನು ಮಾಸ್ಕ್ ಧರಿಸಲು ಸಮಸ್ಯೆಯಾಗುತ್ತದೆ ಎನ್ನುವವರು ಮಾಸ್ಕ್ ತೆಗೆಯುವ ಮುನ್ನ ಒಂದು ಕ್ಷಣ ಗಂಟೆಗಟ್ಟಲೇ ಮಾಸ್ಕ್ ಧರಿಸಿಕೊಂಡೇ ಸೇವೆ ಸಲ್ಲಿಸುತ್ತಿರುವ ಡಾಕ್ಟರ್, ನರ್ಸ್ ಹಾಗೂ ಕೊರೋನಾ ವಾರಿಯರ್ಸ್ ನೆನಪಿಸಿಕೊಳ್ಳಿ. ಅವರು ನಮ್ಮ ಜೀವನ ಕಾಪಾಡಲು ಹೀಗೆ ಮಾಡುತ್ತಾರೆ. ಅವರಿಗೂ ಸಮಸ್ಯೆಯಾಗುವುದಿಲ್ಲವೇ?