Asianet Suvarna News Asianet Suvarna News

Mann Ki Baat: ‘ವೋಕಲ್ ಫಾರ್‌ ಲೋಕಲ್‌’ಗೆ ಮೋದಿ ಒತ್ತು; ಯುಪಿಐ ಬಳಸಿ ಎಂದೂ ಪ್ರಧಾನಿ ಕರೆ

ಮನ್‌ ಕೀ ಬಾತ್‌ನಲ್ಲಿ ಪ್ರವಾಸಿಗರು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ಪ್ರೋತ್ಸಾಹಿಸಿದರು. ಅಲ್ಲದೆ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಾಗ, ನಮ್ಮ ದೇಶದ ಹೆಮ್ಮೆಯ UPI ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿಸಿ ಎಮದು ಕರೆ ನೀಡಿದ್ದಾರೆ.

mann ki baat highlights october 2023 modi speaks on vocal for local and upi use mera yuva bharat ash
Author
First Published Oct 29, 2023, 12:51 PM IST

ನವದೆಹಲಿ(ಅಕ್ಟೋಬರ್ 29, 2023): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್‌’ನ 106 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ್ದು, 30 ನಿಮಿಷಗಳ ಭಾಷಣದಲ್ಲಿ ನಾನಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಬ್ಬ ಹರಿದಿನಗಳ ಮಧ್ಯೆ ನಾಗರಿಕರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. “ಇಡೀ ದೇಶದಲ್ಲಿ ಹಬ್ಬಗಳ ಉತ್ಸಾಹ ಇರುವ ಸಮಯದಲ್ಲಿ ಈ ಸಂಚಿಕೆ ನಡೆಯುತ್ತಿದೆ. ಮುಂಬರುವ ಎಲ್ಲಾ ಹಬ್ಬಗಳಿಗೆ ನಿಮ್ಮೆಲ್ಲರಿಗೂ ಅಭಿನಂದನೆಗಳು ಎಂದು ಮೋದಿ ಹೇಳಿದ್ದಾರೆ.

ವೋಕಲ್‌ ಫಾರ್‌ ಲೋಕಲ್‌ ಪರ ಪ್ರಧಾನಿ ಬ್ಯಾಟಿಂಗ್

ಮನ್‌ ಕೀ ಬಾತ್‌ನಲ್ಲಿ ಪ್ರವಾಸಿಗರು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ಮೋದಿ ಪ್ರೋತ್ಸಾಹಿಸಿದರು. ಸ್ನೇಹಿತರೇ, ಇಂದು ನಾನು ನಿಮಗೆ ಇನ್ನೊಂದು ವಿನಂತಿಯನ್ನು ಪುನರಾವರ್ತಿಸಲು ಬಯಸುತ್ತೇನೆ ಮತ್ತು ಅದನ್ನು ಬಹಳ ಒತ್ತಾಯದಿಂದ ಪುನರಾವರ್ತಿಸುತ್ತೇನೆ. ನೀವು ಪ್ರವಾಸ ಅಥವಾ ತೀರ್ಥಯಾತ್ರೆಗೆ ಹೋದಾಗ, ನೀವು ಸ್ಥಳೀಯ ಕಲಾವಿದರಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು’ ಎಂದು ಮೋದಿ ಹೇಳಿದ್ದಾರೆ. 

ಇದನ್ನು ಓದಿ: ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಅಲ್ಲದೆ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಾಗ, ನಮ್ಮ ದೇಶದ ಹೆಮ್ಮೆಯ UPI ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿಸಿ. ಅದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಳ್ಳಿ ಎಂದೂ ಹೇಳಿದರು. 

ಅಕ್ಟೋಬರ್ 31 ರಂದು 'ಮೇರಾ ಯುವ ಭಾರತ್' ಸ್ಥಾಪನೆ
ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಪ್ರಮುಖ ರಾಷ್ಟ್ರವ್ಯಾಪಿ ಸಂಘಟನೆಯನ್ನು ಸ್ಥಾಪಿಸಲಾಗುವುದು ಎಂದು ಮನ್ ಕೀ ಬಾತ್‌ ವೇಳೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೇವಲ ಎರಡು ದಿನಗಳ ನಂತರ, ಅಕ್ಟೋಬರ್ 31 ರಂದು, ಒಂದು ದೊಡ್ಡ ರಾಷ್ಟ್ರವ್ಯಾಪಿ ಸಂಘಟನೆಯ ಅಡಿಪಾಯವನ್ನು ಹಾಕಲಾಗುತ್ತದೆ ಮತ್ತು ಅದು ಕೂಡ ಸರ್ದಾರ್ ಸಾಹೇಬ್ ಅವರ ಜನ್ಮದಿನದಂದು’ ಎಂದು ಮೋದಿ ಹೇಳಿದ್ದಾರೆ.

 

ಇದನ್ನೂ ಓದಿ: Mann ki baat: ಚಂದ್ರಯಾನ ಮಿಷನ್ ನವ ಭಾರತದ ಸ್ಪೂರ್ತಿ, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ

ಅಲ್ಲದೆ, ಅಕ್ಟೋಬರ್ 31 ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯತಿಥಿಯೂ ಆಗಿದೆ. ನಾನು ಕೂಡ ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದೂ ಮೋದಿ ಹೇಳಿದ್ದಾರೆ. ಈ ಮಧ್ಯೆ, ತಮಿಳುನಾಡಿನ ವೈಭವೋಪೇತ ಪರಂಪರೆಗೆ ಸಂಬಂಧಿಸಿದ ಸ್ಪೂರ್ತಿದಾಯಕ ಪ್ರಯತ್ನಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಖ್ಯಾತ ಲೇಖಕಿ ಶಿವಶಂಕರಿ ಮತ್ತು ಅವರ ಯೋಜನೆಯಾದ Knit India, Through Literature ಕುರಿತು ಪ್ರಧಾನಿ ಮೋದಿ ಮಾತನಾಡಿದರು.

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಸಾಧನೆಗೆ ಪ್ರಧಾನಿ ಶ್ಲಾಘನೆ
ನನ್ನ ಪ್ರೀತಿಯ ದೇಶವಾಸಿಗಳೇ, ಈ ಹಬ್ಬದ ಋತುವಿನಲ್ಲಿ, ದೇಶದಲ್ಲಿ ಕ್ರೀಡೆಯ ಧ್ವಜ ಹಾರಾಡುತ್ತಿದೆ. ಇತ್ತೀಚೆಗೆ, ಏಷ್ಯನ್ ಗೇಮ್ಸ್ ನಂತರ, ಭಾರತದ ಆಟಗಾರರು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿಯೂ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ’ ಎಂದು ಪ್ರಧಾನಿ ಮೋದಿ ಅಕ್ಟೋಬರ್ 2023ರ ಕೊನೆಯ ಭಾನುವಾರವಾದ ಇಂದು ತಮ್ಮ 106ನೇ ಸಂಚಿಕೆಯ ಮನ್‌ ಕೀ ಬಾತ್‌ನಲ್ಲಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Mann Ki Baat: ಹುತಾತ್ಮರ ಸ್ಮರಣೆಗೆ ಶೀಘ್ರದಲ್ಲೇ 'ಮೇರಿ ಮಾತಿ ಮೇರಾ ದೇಶ್' ಅಭಿಯಾನ: ಮೋದಿ ಘೋಷಣೆ

Follow Us:
Download App:
  • android
  • ios