Asianet Suvarna News Asianet Suvarna News

Mann Ki Baat: ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ಬಹುದೊಡ್ಡ ಅವಕಾಶ: ಪ್ರಧಾನಿ ಮೋದಿ

ಮುಂಬರುವ G20 ಶೃಂಗಸಭೆಯಲ್ಲಿ ಭಾರತವು "ಒಂದು ಭವಿಷ್ಯ, ಒಂದು ಕುಟುಂಬ" ಎಂಬ ಥೀಮ್‌ ಅನ್ನು ಜಗತ್ತಿಗೆ ನೀಡಿದೆ, ಇದು ಪ್ರಾಯೋಗಿಕ ಜೀವನ ವಿಧಾನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಜನರು ಜಿ20 ಶೃಂಗಸಭೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದೂ ಮನವಿ ಮಾಡಿದರು.

mann ki baat assuming G20 presidency is a huge opportunity for India says pm narendra modi ash
Author
First Published Nov 27, 2022, 1:52 PM IST

ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಮಾಸಿಕ ಮನ್ ಕೀ ಬಾತ್‌ (Mann Ki Baat) ಕಾರ್ಯಕ್ರಮದ ವೇಳೆ ಜಿ - 20 ಅಧ್ಯಕ್ಷ ಸ್ಥಾನ (G20 Presidency) ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಮಾತನಾಡಿದರು. ನವೆಂಬರ್ ತಿಂಗಳ ಕೊನೆಯ ಭಾನುವಾರವಾದ ಇಂದಿನ ರೇಡಿಯೋ ಕಾರ್ಯಕ್ರಮದ 95 ನೇ ಸಂಚಿಕೆಯಲ್ಲಿ, ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜನರ ನೇರವಾದ ಅನುಭವ ಹಂಚಿಕೊಳ್ಳುವುದು ನನಗೆ ಆಧ್ಯಾತ್ಮಿಕ ಅನುಭವವಾಗಿದೆ ಎಂದು ಹೇಳಿದರು. ಇನ್ನು, ಜಿ 20 ನೇತೃತ್ವ ವಹಿಸಿಕೊಳ್ಳುತ್ತಿರುವುದು ಭಾರತಕ್ಕೆ ಒಂದು ದೊಡ್ಡ ಅವಕಾಶ ಎಂದು ಭಾವಿಸಿ ಮತ್ತು ದೇಶವು ಜಾಗತಿಕ ಕಲ್ಯಾಣದ ಮೇಲೆ ಕೇಂದ್ರೀಕರಿಸುವ ಮೂಲಕ ಅದನ್ನು ಬಳಸಿಕೊಳ್ಳಬೇಕು ಎಂದೂ ನವೆಂಬರ್ 27, 2022, ಭಾನುವಾರದ ಸಂಚಿಕೆಯಲ್ಲಿ ಹೇಳಿದ್ದಾರೆ.
 
ಭಾರತವು ಡಿಸೆಂಬರ್ 1 ರಂದು ಶಕ್ತಿಯುತ G20 ಗುಂಪಿನ ಅಧ್ಯಕ್ಷ ವಹಿಸಿಕೊಳ್ಳಲಿದೆ. ಈ ಹಿನ್ನೆಲೆ ಭಾರತವು G20 ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಉತ್ಸಾಹವನ್ನು ವ್ಯಕ್ತಪಡಿಸುತ್ತಿರುವ ಜನರನ್ನು ಮೋದಿ ಗಮನಿಸಿದರು. ಈ ಸಂಬಂಧ ಮನ್ ಕೀ ಬಾತ್‌ ಕಾರ್ಯಕ್ರಮದ 95 ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜನರ ನೇರ ಅನುಭವವನ್ನು ಹಂಚಿಕೊಳ್ಳುವುದು ನನಗೆ ಆಧ್ಯಾತ್ಮಿಕ ಅನುಭವವಾಗಿದೆ ಎಂದೂ ಹೇಳಿದರು.

ಇದನ್ನು ಓದಿ: Mann Ki Baat: ಪರಿಸರ ಕಾಳಜಿ ಜತೆಗೆ ಕನ್ನಡದ ಅರಿವು ಮೂಡಿಸುತ್ತಿರುವ ಸುರೇಶ್‌ ಕುಮಾರ್‌ ಶ್ಲಾಘಿಸಿದ ಮೋದಿ
 
ಇನ್ನು, ಮುಂಬರುವ G20 ಶೃಂಗಸಭೆಯಲ್ಲಿ ಭಾರತವು "ಒಂದು ಭವಿಷ್ಯ, ಒಂದು ಕುಟುಂಬ" (One Future One Family) ಎಂಬ ಥೀಮ್‌ ಅನ್ನು ಜಗತ್ತಿಗೆ ನೀಡಿದೆ, ಇದು ಪ್ರಾಯೋಗಿಕ ಜೀವನ ವಿಧಾನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಜನರು ಜಿ20 ಶೃಂಗಸಭೆಯ (G20 Summit) ಬಗ್ಗೆ ಜಾಗೃತಿ ಮೂಡಿಸಬೇಕು ಎಂದೂ ಅವರು ಮನವಿ ಮಾಡಿದರು.
 
ಅಲ್ಲದೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ (Space Technology) ಭಾರತದ ಸಾಧನೆಯನ್ನು ಗುರುತಿಸುವ ವಿಕ್ರಮ್-ಎಸ್ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿರುವ ಬಗ್ಗೆಯೂ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಹೊಸ ಯುಗವನ್ನು ಗುರುತಿಸಿದೆ ಎಂದು ಮೋದಿ ಹೇಳಿದರು. ಹಾಗೂ, ಭಾರತ ತನ್ನ ಸಾಧನೆಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಪ್ರಗತಿಯು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: Mann Ki Baat: ಬೆಂಗಳೂರಿನ ಯೂಥ್‌ ಫಾರ್‌ ಪರಿವರ್ತನ್‌ ಸಂಸ್ಥೆಗೆ ಮೋದಿ ಭೇಷ್‌
 
ಅದೇ ರೀತಿ, ನವೀನತೆ ಮತ್ತು ಸೃಷ್ಟಿಯೊಂದಿಗೆ ತಂತ್ರಜ್ಞಾನದಲ್ಲಿ ತಮ್ಮನ್ನು ತಾವು ವಿಸ್ತರಿಸಿಕೊಳ್ಳುತ್ತಿರುವ ಭಾರತದ ಯುವಕರನ್ನು ಸಹ ಮೋದಿ ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಹಕ ಸೇವೆಗಳ ವಿತರಣೆಗಾಗಿ ಡ್ರೋನ್‌ಗಳ ಬಳಕೆಯ ಬಗ್ಗೆ ಮೋದಿ ಶ್ಲಾಘಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ಸೇಬುಗಳ ವಿತರಣೆ ಮಾಡುತ್ತಿರುವುದನ್ನು ಅವರು ಪ್ರಸ್ತಾಪಿಸಿದರು.
 
ಭಾರತವು ಸಂಗೀತ, ನೃತ್ಯ ಮತ್ತು ಸಂಗೀತದ ಶ್ರೀಮಂತ ಪರಂಪರೆಯನ್ನು ಹೊಂದಿದೆ ಎಂದೂ ಪ್ರಧಾನಿ ಹೇಳಿದರು. ಅಲ್ಲದೆ, ಮಹಾತ್ಮಾ ಗಾಂಧಿಯವರು ಹಾಡುತ್ತಿದ್ದ ಸ್ತೋತ್ರಗಳ ವಿಡಿಯೋ ತುಣುಕನ್ನು ಸಹ ಮೋದಿ ಮನ್ ಕೀ ಬಾತ್‌ ಕಾರ್ಯಕ್ರಮದಲ್ಲಿ ಹಾಕಿದ್ದಾರೆ. 

ಇದನ್ನೂ ಓದಿ: Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ
 
ವಿದ್ಯುತ್ ಉಪಕರಣ ಸೇರಿದಂತೆ ಭಾರತೀಯ ಸಂಗೀತ ವಾದ್ಯ ರಫ್ತು ಮೂರೂವರೆ ಪಟ್ಟು ಏರಿಕೆ ಕಂಡಿದೆ. ಮುಂದುವರಿದ ದೇಶಗಳಾದ ಯುಎಸ್‌ಎ, ಯುಕೆ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ರಫ್ತು ಹೆಚ್ಚಾಗಿದೆ ಎಂದೂ ಪ್ರಧಾನಿ ಮೋದಿ ಹೇಳಿದರು. ಭಾಂಗ್ರಾ ಮತ್ತು ರವೀಂದ್ರ ಸಂಗೀತಕ್ಕೆ ಸಂಬಂಧಿಸಿದ ಸಂಗೀತದ ಬಗ್ಗೆಯೂ ಮೋದಿ ಮಾತನಾಡಿದರು. ದೇಶದ ಪಾರಂಪರಿಕ ಜ್ಞಾನದ ಪರಂಪರೆಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದೂ ಅವರು ಜನರನ್ನು ಮನವಿ ಮಾಡಿಕೊಂಡರು.
 
ಈ ಮಧ್ಯೆ, ಮಸ್ಕ್ಯುಲರ್ ಡಿಸ್ಟ್ರೋಫಿ ಮತ್ತು ಸಾರ್ವಜನಿಕರೇ ನಡೆಸುತ್ತಿರುವ  Manav Mandirನ ಸೇವೆಯ ಬಗ್ಗೆ ಪ್ರಧಾನಿ ವಿವರ ನೀಡಿದ್ದಾರೆ. ಅಲ್ಲದೆ, ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ ಕೆಲವು ರೋಗಗಳು ಇನ್ನೂ ಸವಾಲುಗಳನ್ನು ಒಡ್ಡುತ್ತಿವೆ ಎಂದೂ ನವೆಂಬರ್ ತಿಂಗಳ ಕೊನೆಯ ಭಾನುವಾರವಾದ ಇಂದು ತಮ್ಮ 95ನೇ ಸಂಚಿಕೆಯ ಮನ್ ಕೀ ಬಾತ್‌ ವೇಳೆ ಪ್ರಧಾನಿ ಮೋದಿ ಹೇಳಿದರು. 

ಇದನ್ನೂ ಓದಿ: Mann Ki Baat: ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಮೋದಿ ಶ್ಲಾಘನೆ

Follow Us:
Download App:
  • android
  • ios