Asianet Suvarna News Asianet Suvarna News

Mann Ki Baat: ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಮೋದಿ ಶ್ಲಾಘನೆ

ಪ್ರಧಾನಿ ಮೋದಿ ಪ್ರತಿ ತಿಂಗಳ ಕೊನೆಯ ಭಾನುವಾರ ತಮ್ಮ ರೇಡಿಯೋ ಸಂದೇಶ ಮನ್‌ ಕೀ ಬಾತ್‌ನಲ್ಲಿ ಮಾತನಾಡುತ್ತಾರೆ. ಅದೇ ರೀತಿ, ಇಂದು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 

modi on mann ki baat august talks on har ghar tiranga campaign success ash
Author
First Published Aug 28, 2022, 12:14 PM IST

ಪ್ರಧಾನಿ ಮೋದಿ ಇಂದು, ಆಗಸ್ಟ್ 28, 2022 ರಂದು ತಮ್ಮ 92ನೇ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಈ ವೇಳೆ, ಈ ಸ್ವಾತಂತ್ರ್ಯ ದಿನದಂದು ‘ಹರ್ ಘರ್ ತಿರಂಗ’ ಅಭಿಯಾನದಲ್ಲಿ ದೇಶವಾಸಿಗಳು ಭಾಗವಹಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶ್ಲಾಘಿಸಿದ್ದಾರೆ ಮತ್ತು ಇದು ರಾಷ್ಟ್ರದ ಸಾಮೂಹಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ. ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಆಗಸ್ಟ್‌ನಲ್ಲಿ, ನಿಮ್ಮ ಎಲ್ಲಾ ಪತ್ರಗಳು, ಸಂದೇಶಗಳು ಮತ್ತು ಕಾರ್ಡ್‌ಗಳು ನನ್ನ ಕಚೇರಿಯನ್ನು ತ್ರಿವರ್ಣ ಧ್ವಜದಲ್ಲಿ ನೆನೆಸಿವೆ. ತ್ರಿವರ್ಣ ಧ್ವಜವನ್ನು ಹೊಂದಿರದ ಅಥವಾ ತ್ರಿವರ್ಣ ಧ್ವಜದ ಬಗ್ಗೆ ಬರೆಯದ ಹಾಗೂ ಸ್ವಾತಂತ್ರ್ಯದ ಬಗ್ಗೆ ಮಾತನಾಡದ ಯಾವುದೇ ಪತ್ರವನ್ನು ನಾನು ನೋಡಿಲ್ಲ’ ಎಂದು ಹೇಳಿದರು. 

"ತ್ರಿವರ್ಣ ಪ್ರಚಾರಕ್ಕಾಗಿ ಜನರು ವಿಭಿನ್ನ ವಿನೂತನ ಕಲ್ಪನೆಗಳನ್ನು ತಂದರು. ಕಲಾವಿದರೊಬ್ಬರು ದಾಖಲೆ ಸಮಯದಲ್ಲಿ ಸುಂದರವಾದ ತ್ರಿವರ್ಣ ಮೊಸಾಯಿಕ್ ಕಲೆಯನ್ನು ರಚಿಸಿದ್ದಾರೆ. ಅಸ್ಸಾಂ ಸರ್ಕಾರಿ ನೌಕರರು 20 ಅಡಿ ತ್ರಿವರ್ಣ ಧ್ವಜವನ್ನು ರಚಿಸಿದ್ದಾರೆ" ಎಂದೂ ಪ್ರಧಾನಿ ಮೋದಿ ತಮ್ಮ ಮನ್‌ ಕೀ ಬಾತ್‌ನಲ್ಲಿ ಹೇಳಿದರು. 

ಇದನ್ನು ಓದಿ: ಆಗಸ್ಟ್ 2 ರಿಂದ 15ರವರೆಗೆ ತಿರಂಗ ಬಾವುಟವನ್ನು ನಿಮ್ಮ ಪ್ರೊಫೈಲ್‌ ಫೋಟೋ ಮಾಡಿಕೊಳ್ಳಬಹುದು: ಮೋದಿ

ಅಮೃತ ಮಹೋತ್ಸವದ ಬಣ್ಣಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಇತರ ದೇಶಗಳಲ್ಲಿಯೂ ಕಂಡುಬಂದಿವೆ ಎಂದೂ ಪ್ರಧಾನಿ ಪ್ರತಿಪಾದಿಸಿದರು. ಬೋಟ್ಸ್ವಾನಾದಲ್ಲಿ ವಾಸಿಸುವ ಸ್ಥಳೀಯ ಗಾಯಕರು 75 ದೇಶಭಕ್ತಿಯ ಗೀತೆಗಳನ್ನು ಭಾರತದ ಸ್ವಾತಂತ್ರ್ಯದ ವರ್ಷಾಚರಣೆಯನ್ನು ಆಚರಿಸಿದರು ಎಂದೂ ಹೇಳಿದರು. 

ಇನ್ನು, ಅಮೃತ್ ಸರೋವರದ ಬಗ್ಗೆ ಮಾತನಾಡಿದ ಅವರು, "ನಿಮಗೆ ನೆನಪಿದೆಯೇ, ಮನ್‌ ಕೀ ಬಾತ್‌ನಲ್ಲಿ, ನಾನು ನಾಲ್ಕು ತಿಂಗಳ ಹಿಂದೆ ಅಮೃತ ಸರೋವರದ ಬಗ್ಗೆ ಮಾತನಾಡಿದ್ದೆ. ಇದರ ನಂತರ, ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಆಡಳಿತವು ಸಕ್ರಿಯವಾಯಿತು, ಸ್ವಯಂಸೇವಾ ಸಂಸ್ಥೆಗಳು ಒಗ್ಗೂಡಿ ಸ್ಥಳೀಯ ಜನರ ಸಂಪರ್ಕ ಸಾಧಿಸಿದರು, ಈ ಹಿನ್ನೆಲೆ ಅಮೃತ ಸರೋವರ ನಿರ್ಮಾಣ ಜನಾಂದೋಲನವಾಗಿದೆ. ಈ ಅಮೃತ ಸರೋವರಗಳನ್ನು ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ನಿರ್ಮಿಸಲಾಗಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ, "ಅಮೃತ ಸರೋವರ ಅಭಿಯಾನವು ಇಂದಿನ ನಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಗೆ ಸಹ ಅಷ್ಟೇ ಅವಶ್ಯಕವಾಗಿದೆ. ಈ ಹಿನ್ನೆಲೆ, ಅಮೃತ್ ಸರೋವರ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನಾನು ನಿಮ್ಮೆಲ್ಲರನ್ನು ವಿಶೇಷವಾಗಿ ನನ್ನ ಯುವ ಸ್ನೇಹಿತರನ್ನು ಕೋರುತ್ತೇನೆ" ಎಂದು ಪ್ರಧಾನಿ ಮೋದಿ ತಮ್ಮ ಆಗಸ್ಟ್‌ ತಿಂಗಳ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Mann Ki Baat ನಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಮೋದಿ ಶ್ಲಾಘನೆ

ರಾಷ್ಟ್ರೀಯ ಪೋಷಣ್‌ ಅಭಿಯಾನದಲ್ಲಿ ಭಾಗಿಯಾಗಲು ಮೋದಿ ಕರೆ
ಪೋಷಣ್‌ ಅಭಿಯಾನ ಅಥವಾ ‘ಪೋಷಣ್‌ ಮಾ’ದಲ್ಲಿ  ಭಾಗವಹಿಸುವಂತೆ ನಾಗರಿಕರಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಅಪೌಷ್ಟಿಕತೆಯ ವಿರುದ್ಧದ ವಾರ್ಷಿಕ ‘ಪೋಶಣ್‌ ಅಭಿಯಾನದಲ್ಲಿ ನಾಗರಿಕರು ಸಕ್ರಿಯವಾಗಿ ಭಾಗವಹಿಸಬೇಕು. ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ಇದನ್ನು ಆಚರಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ತಮ್ಮ 92ನೇ ಮನ್‌ ಕೀ ಬಾತ್‌ನಲ್ಲಿ ಕರೆ ನೀಡಿದ್ದಾರೆ. 

Follow Us:
Download App:
  • android
  • ios