Asianet Suvarna News Asianet Suvarna News

ಭಾರತದ ಐತಿಹಾಸಿಕ ಒಪ್ಪಂದ; ಮಧ್ಯಪ್ರಾಚ್ಯ, ಯುರೋಪ್ ಸಂಪರ್ಕ ಕಾರಿಡಾರ್ ಶೀಘ್ರ ಆರಂಭ!

ಮೂಲಸೌಕರ್ಯಗಳು , ಸಂಪರ್ಕ ಸೇತುವೆ ಮತ್ತಷ್ಟು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿದೆ. ಭಾರತದ ಮುಂದಾಳತ್ವದಲ್ಲಿ ಮಧ್ಯಪ್ರಾಚ್ಯ, ಯುರೋಪ್ ಸಂಪರ್ಕ ಕಾರಿಡಾರ್ ಶೀಘ್ರದಲ್ಲೇ ಆರಂಭಗೊಳ್ಳುತ್ತಿದೆ.

India Middle East Europe connectivity corridor would be be launched soon says Report ckm
Author
First Published Sep 9, 2023, 5:56 PM IST

ನವದೆಹಲಿ(ಸೆ.09):  ಮಹತ್ವದ ವಿದ್ಯಮಾನವೊಂದರಲ್ಲಿ ಯುರೋಪ್‌, ಮಧ್ಯಪ್ರಾಚ್ಯ ಮತ್ತು ಭಾರತದ ನಡುವೆ ಹೊಸ ವ್ಯಾಪಾರ ಕಾರಿಡಾರ್‌ ರಚನೆಯ ಘೋಷಣೆಯನ್ನು ಜಿ20 ಶೃಂಗದ ವೇಳೆ ಘೋಷಿಸಲಾಗಿದೆ. ಹೊಸ ವ್ಯಾಪಾರ ಮಾರ್ಗ ರಚನೆಯ ಈ ವಿದ್ಯಮಾನ ಜಾಗತಿಕ ಮಟ್ಟದಲ್ಲಿ ಹೊಸ ಮೈಲುಗಲ್ಲು ಎಂದೇ ಬಣ್ಣಿತವಾಘಿದೆ.

ಗ್ಲೋಬಲ್‌ ಸೌತ್‌ ಮೂಲಕ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಚೀನಾಕ್ಕೆ ಪೆಟ್ಟು ನೀಡಿದ್ದ ಭಾರತ, ಇದೀಗ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ದೇಶಗಳನ್ನು ಒಳಗೊಂಡ ಹೊಸ ವ್ಯಾಪಾರ ಕಾರಿಡಾರ್‌ ರಚನೆಯ ಘೋಷಣೆ ಮೂಲಕ ಚೀನಾಕ್ಕೆ ಮತ್ತೊಂದು ಪೆಟ್ಟು ನೀಡಿದೆ. ಈ ಕಾರಿಡಾರ್‌ ಅನ್ನು ‘ಐತಿಹಾಸಿಕ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆಲವು ಜಿ20 ದೇಶಗಳ ಮುಖ್ಯಸ್ಥರು ಬಣ್ಣಿಸಿದ್ದಾರೆ.

ಯಾರಾರ‍ಯರು ಭಾಗಿ?
ಭಾರತ, ಅಮೆರಿಕ, ಸೌದಿ ಅರೇಬಿಯಾ, ಯುರೋಪ್‌ ಒಕ್ಕೂಟ, ಯುಎಇ ಮತ್ತು ಇತರೆ ದೇಶಗಳು.

ಏನೇನು ಜೋಡಣೆ?
ಪರಸ್ಪರ ದತ್ತಾಂಶ ಸಂಪರ್ಕ, ರೈಲ್ವೆ, ಬಂದರುಗಳು, ವಿದ್ಯುತ್‌ ಜಾಲಗಳು ಮತ್ತು ಹೈಡ್ರೋಜನ್‌ ಪೈಪ್‌ಲೈನ್‌ ಸಂಪರ್ಕಿಸುವ ಉದ್ದೇಶ.

ಯೋಜನೆ ಹೇಗೆ ಜಾರಿ
ಭಾರತದಿಂದ ಕೊಲ್ಲಿ ದೇಶಗಳಿಗೆ ಬಂದರು ಸಂಪರ್ಕ. ಕೊಲ್ಲಿ ದೇಶಗಳ ನಡುವೆ ರೈಲು ಜಾಲ. ಕೊಲ್ಲಿ ದೇಶದಿಂದ ಮಧ್ಯಪ್ರಾಚ್ಯ ಮತ್ತು ಯುರೋಪ್‌ ದೇಶಗಳಿಗೆ ರೈಲು ಮತ್ತು ಹಡಗು ಮೂಲಕ ಸಂಪರ್ಕ

ಭಾರತಕ್ಕೆ ಏನು ಲಾಭ?
140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ವಿಶಾಲ ಮಾರುಕಟ್ಟೆಯನ್ನು ಅರಬ್‌ ದೇಶಗಳು ಹಾಗೂ ಪಶ್ಚಿಮ ದೇಶಗಳೊಂದಿಗೆ ಸಂಯೋಜಿಸಲು ಕಾರಿಡಾರ್‌ ಸಹಾಯ ಮಾಡುತ್ತದೆ. ಇದು ಚೀನಾದ ‘ಬೆಲ್ಟ್‌ ಆ್ಯಂಡ್‌ ರೋಡ್‌’ನಂಥ ಮೂಲಸೌಕರ್ಯ ಯೋಜನೆಗೆ ಪರಾರ‍ಯಯವಾಗಬಹುದಾಗಿದೆ. ಭಾರತ ಮತ್ತು ಯುರೋಪ್‌ ನಡುವಿನ ವ್ಯಾಪಾರವನ್ನು ಶೇ.40ರಷ್ಟುವೇಗಗೊಳಿಸುತ್ತದೆ.

ಪಾಲುದಾರ ದೇಶಗಳಿಗೆ ಏನು ಲಾಭ?
ಇಂದು ಮುಂಬೈನಿಂದ ಸೂಯೆಜ್‌ ಕಾಲುವೆ ಮೂಲಕ ಯುರೋಪ್‌ಗೆ ಹಡಗು ಕಂಟೇನರ್‌ ಪ್ರಯಾಣಿಸುತ್ತದೆ. ಆದರೆ ಹೊಸ ಪ್ರಸ್ತಾವಿತ ಕಾರಿಡಾರ್‌ ಸಾಕಾರವಾದ ಬಳಿಕ ಭವಿಷ್ಯದಲ್ಲಿ ದುಬೈನಿಂದ ಇಸ್ರೇಲ್‌ನ ಹೈಫಾಗೆ ರೈಲಿನ ಮೂಲಕ ಸರಕು ಸಾಗಣೆ ಮಾಡಬಹುದು. ಅಲ್ಲಿಂದ ಯುರೋಪ್‌ಗೆ ಮತ್ತೆ ಹಡಗು ಮಾರ್ಗದಲ್ಲಿ ಹೋಗಬಹುದು. ಇದು ಹಣ ಮತ್ತು ಸಮಯ ಎರಡನ್ನೂ ಉಳಿಸುತ್ತದೆ ಎಂದು ಆರ್ಥಿಕ ಹಾಗೂ ಔದ್ಯಮಿಕ ತಜ್ಞರು ಹೇಳಿದ್ದಾರೆ.

ಪ್ರಸ್ತುತ, ಸೂಯೆಜ್‌ ಕಾಲುವೆಯು ವಿಶ್ವ ವ್ಯಾಪಾರಕ್ಕೆ ಒಂದು ಪ್ರಮುಖ ಅಡಚಣೆಯಾಗಿದೆ. ಜಾಗತಿಕ ಕಡಲ ವ್ಯಾಪಾರದ ಸರಿಸುಮಾರು ಶೇ.10ರಷ್ಟನ್ನು ಇದು ನಿರ್ವಹಿಸುತ್ತದೆ. ಆದರೆ ಇದರ ಮೂಲಕ ನಾನಾ ಕಾರಣಗಳಿಂದ ವ್ಯಾಪಾರಕ್ಕೆ ಆಗಾಗ ಅಡ್ಡಿ ಆಗುತ್ತದೆ. 2021ರ ಮಾಚ್‌ರ್‍ನಲ್ಲಿ ದೈತ್ಯ ಕಂಟೇನರ್‌ ಹಡಗೊಂದು ಸಿಲುಕಿಕೊಂಡ ಕಾರಣ 1 ವಾರ ಕಾಲ ಇತರ ಹಡಗುಗಳ ಸಂಚಾರಕ್ಕೆ ಅಡ್ಡಿ ಆಗಿತ್ತು.

ಇನ್ನು ಮಧ್ಯಪ್ರಾಚ್ಯದ ಹಲವು ದೇಶಗಳ ಜತ ಉತ್ತಮ ಸಂಬಂಧ ಹೊಂದಿರುವ ಅಮೆರಿಕಕ್ಕೂ ಈ ವ್ಯಾಪಾರ ಕಾರಿಡಾರ್‌ನಿಂದ ಅನುಕೂಲ ಆಗುವ ಸಾಧ್ಯತೆ ಇದೆ.

220 ಸಭೆ, 60 ನಗರ, 25,000 ಅತಿಥಿಗಳು; ಜಿ20 ಶೃಂಗಸಭೆಯಲ್ಲಿ ಭಾರತದ ದಾಖಲೆ!

ಸಂಪರ್ಕಿತ ಡೇಟಾ,ರೈಲ್ವೇ ಸಂಪರ್ಕ, ಬಂದರು, ವಿದ್ಯುತ್ ಗ್ರಿಡ್, ಹೈಡ್ರೋಜನ್ ಪೈಪ್‌ಲೈನ್ ಸ್ಥಾಪಿಸುವ ಗುರಿಯನ್ನು ಈಯೋಜನೆ ಹೊಂದಿದೆ.   ಭಾರತ ಹಾಗೂ ಯೂರೋಪ್ ನಡುವಿನ ವ್ಯಾಪಾರ ಹಾಗೂ ವಹಿವಾಟನ್ನು ವೃದ್ಧಿಗೊಳಿಸಲಿದೆ.  ಇಷ್ಟೇ ಅಲ್ಲ ಉಭಯ ರಾಷ್ಟ್ರಗಳ ನಡುವಿನ ಸಾಗಾಣೆ ಸಮಯವನ್ನು ಶೇಕಡಾ 40 ರಷ್ಟು ಕಡಿಮೆ ಮಾಡಲಿದೆ. 

ಹೈಸಿರು ಹೈಡ್ರೋಜನ್ ಅಭಿವೃದ್ಧಿ ಹಾಗೂ ಸುಲಭ ಸಾಗಾಣೆ, ರಾಷ್ಟ್ರಗಳ ಸಂಪರ್ಕಿಸುವ  ಸಮುದ್ರದೊಳಗಿನ ಕೇಬಲ್ ಯೋಜನೆ, ದೂರ ಸಂಪರ್ಕ, ಡೇಟಾ  ವಿನಿಮಯ ಸಾಮರ್ಥ್ಯ ಬಲಪಡಿಸುವಿಕೆ, ತೈಲ ಅವಲಂಬಿತ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪರಿವರ್ತನೆ ಸಹಾಯ, ಆರ್ಥಿಕ ವೈವಿದ್ಯತೆ, ಸುಸ್ಥಿರತೆಗಳು ನಿರ್ಮಾಣವಾಗಿದೆ. ಈ ಯೋಜನೆ ಮೂಲಕ ಭಾರತ ವಿಶ್ವದ ಪ್ರಮುಖ ಶಕ್ತಿಯಾಗಿ ಬೆಳೆದು ನಿಲ್ಲಲಿದೆ.

Follow Us:
Download App:
  • android
  • ios