ಆಗಿದ್ದು ಅಯ್ತು, ಸಹಬಾಳ್ವೆ ನಡೆಸಿ: ಮಣಿಪುರ ಹಿಂಸಾಚಾರಕ್ಕೆ ಕ್ಷಮೆ ಯಾಚಿಸಿದ ಸಿಎಂ ಬಿರೇನ್ ಸಿಂಗ್

ರಾಜ್ಯದಲ್ಲಿ ಏನಾಯಿತೋ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಹಲವರು ಮನೆ ಕಳೆದುಕೊಂಡರು, ಪ್ರೀತಿ ಪಾತ್ರರಿಂದ ದೂರವಾದರು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಪರಿಸ್ಥಿತಿ ಶಾಂತವಾಗುತ್ತಿರುವುದನ್ನು ನೋಡಿದರೆ, ಬರುವ ವರ್ಷ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಆಗಿದ್ದೆಲ್ಲಾ ಆಗಿ ಹೋಯಿತು. ಎಲ್ಲಾ ಸಮುದಾಯದವರು ನನ್ನನ್ನು ಕ್ಷಮಿಸಿ ಶಾಂತಿಯಿಂದ ಸಹಬಾಳ್ವೆ ನಡೆಸಿ' ಎಂದು ಕರೆ ನೀಡಿದ ಮುಖ್ಯಮಂತ್ರಿ ಬಿರೇನ್ ಸಿಂಗ್ 

Manipur CM Biren Singh Apologized for Violence grg

ನವದೆಹಲಿ(ಜ.01): ಕಳೆದ 1.5 ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಸಂಬಂಧ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್, ಇದೇ ಮೊದಲ ಬಾರಿಗೆ ರಾಜ್ಯದ ಜನತೆಯ ಕ್ಷಮೆಯಾಚಿಸಿದ್ದಾರೆ. ಆಗಿದ್ದು ಹೋಯ್ತು. ಇನ್ನು ಎಲ್ಲಾ ಸಮುದಾಯದವರೂ ಒಂದಾಗಿ ಬಾಳಿ ಎಂದು ಅವರು ಮೈತೇಯಿ ಮತ್ತು ಕುಕಿ ಸಮುದಾಯದ ಜನರಿಗೆ ಕರೆ ನೀಡಿದ್ದಾರೆ. ಈ ನಡುವೆ ಬಿರೇನ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, 'ದೇಶ ವಿದೇಶಗಳನ್ನು ಸುತ್ತುವ ಪ್ರಧಾನಿಗಳೇಕೆ ಮಣಿಪುರಕ್ಕೆ ಹೋಗುತ್ತಿಲ್ಲ' ಎಂದು ಪ್ರಶ್ನೆ ಮಾಡಿದೆ.

ಕ್ಷಮೆಯಾಚನೆ:

ಒಂದೂವರೆ ವರ್ಷದಲ್ಲಿ 220ಕ್ಕೂ ಹೆಚ್ಚು ಜನರ ಸಾವಿಗೆ, 1000ಕ್ಕೂ ಹೆಚ್ಚು ಜನರನ್ನು ಗಾಯಾಳುಗಳನ್ನಾಗಿ ಮಾಡಿದ, 60000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯುವಂತೆ ಮಾಡಿದ ಜನಾಂಗೀಯ ಸಂಘರ್ಷದ ಬಗ್ಗೆ ಮಣಿಪುರ ಸಿಎಂ ಬಿರೇನ್‌ ಸಿಂಗ್‌ ಕ್ಷಮೆಯಾಚನೆ ಮಾಡಿದ್ದಾರೆ. 

ಮಾಜಿ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಮಣಿಪುರ ಗವರ್ನರ್‌, ಬಿಹಾರಕ್ಕೆ ಆರಿಫ್‌ ಖಾನ್‌ ಶಿಫ್ಟ್‌!

ಮಂಗಳವಾರ ಇಂಫಾಲ್‌ನಲ್ಲಿ ಮಾತನಾಡಿದ ಬಿರೇನ್, 'ರಾಜ್ಯದಲ್ಲಿ ಏನಾಯಿತೋ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಹಲವರು ಮನೆ ಕಳೆದುಕೊಂಡರು, ಪ್ರೀತಿ ಪಾತ್ರರಿಂದ ದೂರವಾದರು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಪರಿಸ್ಥಿತಿ ಶಾಂತವಾಗುತ್ತಿರುವುದನ್ನು ನೋಡಿದರೆ, ಬರುವ ವರ್ಷ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಆಗಿದ್ದೆಲ್ಲಾ ಆಗಿ ಹೋಯಿತು. ಎಲ್ಲಾ ಸಮುದಾಯದವರು ನನ್ನನ್ನು ಕ್ಷಮಿಸಿ ಶಾಂತಿಯಿಂದ ಸಹಬಾಳ್ವೆ ನಡೆಸಿ' ಎಂದು ಕರೆ ನೀಡಿದರು. ಜೊತೆಗೆ, 2023ರ ಮೇನಿಂದ ಅಕ್ಟೋಬರ್‌ವರೆಗೆ 408 ಗುಂಡಿನ ದಾಳಿಗಳು ನಡೆದಿದ್ದು, ನವೆಂಬರ್‌ನಿಂದ 2024ರ ಏಪ್ರಿಲ್ ತನಕ 345 ದಾಳಿಗಳು ವರದಿಯಾಗಿದ್ದವು. ಆದರೆ ಈ ವರ್ಷದ ಮೇನಿಂದ ಈ ಸಂಖ್ಯೆ 112ಗೆ ಇಳಿಕೆಯಾಗಿದೆ. 

ಲೂಟಿಯಾದ ಆಯುಧಗಳ ಪೈಕಿ 3,112 ಆಯುಧಗಳನ್ನು ಮರುವಶಪಡಿಸಿಕೊಳ್ಳಲಾ ಗಿದ್ದು, 2,511 ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. 12,047 ಎಫ್‌ಐಆರ್ ದಾಖಲಾಗಿದ್ದು, 625 ಜನರನ್ನು ಬಂಧಿಸಲಾಗಿದೆ' ಎಂದು ಬಿರೇನ್ ಮಾಹಿತಿ ನೀಡಿದರು.

ಜನಾಂಗೀಯ ಹಿಂಸಾಚಾರ ತೀವ್ರ; ಮಣಿಪುರಕ್ಕೆ ಮತ್ತೆ 10 ಸಾವಿರ ಯೋಧರು!

ಹಿಂಸಾಚಾರ ಏಕೆ?: 

ಸ್ಥಳೀಯ 'ಮೈತೇಯಿ ಹಿಂದೂ'ಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಹೈಕೋರ್ಟ್ ಮಣಿಪುರ ಸರ್ಕಾರಕ್ಕೆ ಸಲಹೆ ನೀಡಿತ್ತು. ಇದಕ್ಕೆ ಕ್ರೈಸ್ತರಾದ ಕುಕಿ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ ಹಿಂಸಾಚಾರ ಆರಂಭಿಸಿತ್ತು. ಬಳಿಕ ಎರಡೂ ಸಮುದಾಯಗಳ ನಡುವೆ ಕಲ್ಲು ತೂರಾಟ, ಗುಂಡಿನ ದಾಳಿ, ಅಪಹರಣ, ಮನೆಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದು ನೂರಾರು ಜನರು ಬಲಿಯಾಗಿದ್ದರು.

ಏನಿದು ಗಲಭೆ? 

• ಮಣಿಪುರದಲ್ಲಿ ಮೈತೇಯಿ- ಕುಕಿ ಜನಾಂಗಗಳ ಸಂಘರ್ಷ 
• ಮೈತೇಯಿ ಜನಾಂಗದ ಮೀಸ ಲು ವಿರುದ್ಧ ಕುಕಿಗಳ ದಂಗೆ 
• 1.5 ವರ್ಷದಿಂದ ಗಲಭೆ, 220 ಬಲಿ, 1000 ಮಂದಿಗೆ ಗಾಯ 
• 400ಕ್ಕೂ ಹೆಚ್ಚು ಗುಂಡಿನ ದಾಳಿ: 60000 ಜನ ನಿರ್ವಸಿತ 
* 12,047 2 ಎಫ್‌ಐಆರ್‌ ದಾಖಲು, 625 ಜನರ ಬಂಧನ

Latest Videos
Follow Us:
Download App:
  • android
  • ios