ಮಾಜಿ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಮಣಿಪುರ ಗವರ್ನರ್‌, ಬಿಹಾರಕ್ಕೆ ಆರಿಫ್‌ ಖಾನ್‌ ಶಿಫ್ಟ್‌!

ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಜನಾಂಗೀಯ ಹಿಂಸಾಚಾರದ ನಡುವೆ ಈ ನೇಮಕಾತಿ ನಡೆದಿದ್ದು, ಲಕ್ಷ್ಮಣ ಪ್ರಸಾದ್ ಆಚಾರ್ಯ ಅವರ ಸ್ಥಾನವನ್ನು ಭಲ್ಲಾ ತುಂಬಲಿದ್ದಾರೆ.

Arif Khan moved to Bihar Ajay Bhalla appointed Manipur Governor san

ನವದೆಹಲಿ (ಡಿ.24): ಮಾಜಿ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಮಣಿಪುರದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ಮಂಗಳವಾರ ಅಧಿಕೃತ ಅಧಿಸೂಚನೆ ತಿಳಿಸಿದೆ. 2023ರ ಮೇ ತಿಂಗಳಿನಿಂದ ರಾಜ್ಯದ ಬುಡವನ್ನೇ ಅಲುಗಾಡಿಸಿರುವ ಜನಾಂಗೀಯ ಹಿಂಸಾಚಾರದ ನಡುವೆ ಮಣಿಪುರಕ್ಕೆ ಭಲ್ಲಾ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ವರ್ಷದ ಜುಲೈ 31 ರಂದು ಮಣಿಪುರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದ ಲಕ್ಷ್ಮಣ ಪ್ರಸಾದ್ ಆಚಾರ್ಯ ಅವರ ಸ್ಥಾನವನ್ನು ಅಜಯ್‌ ಕುಮಾರ್‌ ಭಲ್ಲಾ ತುಂಬಲಿದ್ದಾರೆ. ಭಲ್ಲಾ ಅವರು ಅಸ್ಸಾಂ-ಮೇಘಾಲಯ ಕೇಡರ್‌ನ 1984 ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿ. ಅವರು ಆಗಸ್ಟ್ 2024 ರವರೆಗೆ ಸುಮಾರು ಐದು ವರ್ಷಗಳ ಕಾಲ ಭಾರತದ ಗೃಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅಜಯ್ ಕುಮಾರ್ ಭಲ್ಲಾ ಪಂಜಾಬ್‌ನ ಜಲಂಧರ್‌ ಮೂಲದವರಾಗಿದ್ದಾರೆ.

ಹಲವಾರು ವಿಚಾರಗಳಲ್ಲಿ ಕೇರಳ ರಾಜ್ಯ ಸರ್ಕಾರದೊಂದಿಗೆ ವಾಕ್ಸಮರ ನಡೆಸಿದ್ದ ಗವರ್ನರ್ ಆರಿಫ್‌ ಮೊಹಮದ್‌ ಖಾನ್‌ ಅವರನ್ನು ಬಿಹಾರ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ. ಇದೇ ವೇಳೆ ಬಿಹಾರದಲ್ಲಿ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ಶಿಫ್ಟ್‌ ಮಾಡಲಾಗಿದೆ.

Fact Check: ಮೊಹಮದ್‌ ಶಮಿ-ಸಾನಿಯಾ ಮಿರ್ಜಾ ದುಬೈ ಟ್ರಿಪ್‌, ವೈರಲ್‌ ಆಯ್ತು ಎಐ ಫೋಟೋಸ್‌!

ರಾಷ್ಟ್ರಪತಿ ದ್ರೌಪದಿ ಮುರ್ಮು ಈ ನೇಮಕಾತಿಗಳಿಗೆ ಅನುಮೋದನೆ ನೀಡಿದ್ದು, ಅವರು ಒಡಿಶಾದ ಗವರ್ನರ್ ಹುದ್ದೆಗೆ ರಘುಬುರ್ ದಾಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿದರು ಮತ್ತು ಅವರ ಸ್ಥಾನಕ್ಕೆ ಡಾ ಹರಿಬಾಬು ಕಂಬಂಪತಿ ಅವರನ್ನು ನೇಮಿಸಿದರು. ಡಾ.ಕಂಭಂಪತಿ ಈ ಮೊದಲು ಮಿಜೋರಾಂ ರಾಜ್ಯಪಾಲರಾಗಿದ್ದರು. ಮಾಜಿ ಸೇನಾ ಮುಖ್ಯಸ್ಥ, ಜನರಲ್ ಡಾ ವಿಜಯ್ ಕುಮಾರ್ ಸಿಂಗ್ ಅವರು ಮಿಜೋರಾಂ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ಮತ್ತು ಡಾ ಕಂಬಂಪತಿ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಜನರಲ್ ವಿಕೆ ಸಿಂಗ್ ಅವರು ರಾಜ್ಯವೊಂದರ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಇದೇ ಮೊದಲು.

350 ಅಡಿ ಆಳದ ಕಮರಿಗೆ ಬಿದ್ದ ಸೇನಾ ವಾಹನ, 5 ಸೈನಿಕರು ಹುತಾತ್ಮ!

ಸಿಂಗ್ ಅವರು 2014-2024ರ ಅವಧಿಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಸಂಸದರಾಗಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹಿಂದಿನ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದರು. ಗವರ್ನರ್‌ಗಳು ತಮ್ಮ ಆಯಾ ಕಚೇರಿಗಳ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ನೇಮಕಾತಿಗಳು ಜಾರಿಗೆ ಬರುತ್ತವೆ.

Latest Videos
Follow Us:
Download App:
  • android
  • ios