Mangli birthday party drug controversy: ಜಾನಪದ ಗಾಯಕಿ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ ಸೇವನೆ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 9 ಜನರಲ್ಲಿ ಗಾಂಜಾ ಸೇವನೆ ಪಾಸಿಟಿವ್ ಎಂದು ದೃಢಪಟ್ಟಿದೆ. ಮಂಗ್ಲಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
Mangli birthday party drug controversy: ಜನಪ್ರಿಯ ಜಾನಪದ ಗಾಯಕಿ ಮಂಗ್ಲಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಗಾಂಜಾ ಮತ್ತು ವಿದೇಶಿ ಮದ್ಯ ಬಳಕೆಯ ಆರೋಪದಡಿ ಟಾಲಿವುಡ್‌ನಲ್ಲಿ ಮತ್ತೊಮ್ಮೆ ಡ್ರಗ್ಸ್ ಸಮಸ್ಯೆ ತಲೆದೋರಿದೆ. ಮಂಗ್ಲಿ ತಮ್ಮ ಹುಟ್ಟುಹಬ್ಬವನ್ನು ಚೆವೆಲ್ಲಾದ ತ್ರಿಪುರಾ ರೆಸಾರ್ಟ್‌ನಲ್ಲಿ ಮಂಗಳವಾರ ಆಚರಿಸಿದ್ದರು. ಆದರೆ, ಪಾರ್ಟಿಯಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಮಾಹಿತಿ ಪಡೆದ ಚೆವೆಲ್ಲಾ ಪೊಲೀಸರು ದಾಳಿ ನಡೆಸಿದ್ದಾರೆ.
ಮಂಗ್ಲಿ ಬರ್ತಡೇ ಪೊಲೀಸ್ ದಾಳಿ
ಪಾರ್ಟಿಯಲ್ಲಿ 48 ಜನ ಭಾಗವಹಿಸಿದ್ದರು. ಪೊಲೀಸರು ವಿದೇಶಿ ಮದ್ಯವನ್ನು ವಶಪಡಿಸಿಕೊಂಡು, ಭಾಗವಹಿಸಿದವರ ಮೇಲೆ ಮಾದಕ ದ್ರವ್ಯ ಪರೀಕ್ಷೆ ನಡೆಸಿದಾಗ 9 ಜನರಿಗೆ ಗಾಂಜಾ ಸೇವನೆ ಪಾಸಿಟಿವ್ ಎಂದು ದೃಢಪಟ್ಟಿದೆ. ಶೋಧದ ವೇಳೆ ಭಾರಿ ಪ್ರಮಾಣದ ಗಾಂಜಾ ಮತ್ತು ವಿವಿಧ ಬ್ರಾಂಡ್‌ಗಳ ವಿದೇಶಿ ಮದ್ಯ ಪತ್ತೆಯಾಗಿದೆ. ಅನುಮತಿಯಿಲ್ಲದೆ ಡಿಜೆ ನಡೆಸಿದ್ದಕ್ಕಾಗಿ ಡಿಜೆ ಸಾಧನಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲು
ಗಾಯಕಿ ಮಂಗ್ಲಿ, ತ್ರಿಪುರಾ ರೆಸಾರ್ಟ್‌ನ ಎಜಿಎಂ ಶಿವರಾಮಕೃಷ್ಣ, ಕಾರ್ಯಕ್ರಮ ಆಯೋಜಕರಾದ ಡ್ಯೂನ್ ಮೇಘಾವತ್ ಮತ್ತು ದಾಮೋದರ್ ರೆಡ್ಡಿ ವಿರುದ್ಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಅನುಮತಿಯಿಲ್ಲದೆ ವಿದೇಶಿ ಮದ್ಯ ಸೇವನೆ, ಗಾಂಜಾ ಸಂಗ್ರಹಣೆ ಮತ್ತು ಧ್ವನಿ ಮಾಲಿನ್ಯದ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಪಾರ್ಟಿಯಲ್ಲಿ ಭಾಗವಹಿಸಿದ ಎಲ್ಲರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಮಂಗ್ಲಿ ಹುಟ್ಟುಹಬ್ಬದಲ್ಲಿ ಸೆಲೆಬ್ರಿಟಿಗಳು:
ವರದಿಗಳ ಪ್ರಕಾರ, ಪಾರ್ಟಿಯಲ್ಲಿ ಕೆಲವು ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಭಾಗವಹಿಸಿದ್ದರು. ಗೀತರಚನೆಕಾರ ಕಾಸರ್ಲಾ ಶ್ಯಾಮ್ ಮತ್ತು ಗಾಯಕ ದಿವಿ ಕೂಡ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಆದರೆ, ಕಾಸರ್ಲಾ ಶ್ಯಾಮ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. 'ನಾನು ಕೇಕ್ ಕತ್ತರಿಸುವವರೆಗೆ ಮಾತ್ರ ಪಾರ್ಟಿಯಲ್ಲಿದ್ದೆ. ಡ್ರಗ್ಸ್ ಬಗ್ಗೆ ಯಾವುದೇ ಸಂಬಂಧವಿಲ್ಲ, ಸುಳ್ಳು ಪ್ರಚಾರ ಮಾಡಬೇಡಿ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್ ವಿವಾದ:
ಈ ಘಟನೆ ಟಾಲಿವುಡ್‌ನಲ್ಲಿ ಮತ್ತೊಮ್ಮೆ ಡ್ರಗ್ಸ್ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಈ ಹಿಂದೆಯೂ ಟಾಲಿವುಡ್‌ನಲ್ಲಿ ಮಾದಕ ವಸ್ತುಗಳ ಬಳಕೆಯ ಬಗ್ಗೆ ದೊಡ್ಡ ಚರ್ಚೆಗಳು ನಡೆದಿದ್ದವು. ಮಂಗ್ಲಿ, ತಮ್ಮ ಜಾನಪದ ಗೀತೆಗಳಾದ ಬತುಕಮ್ಮ, ಬೋನಾಲು, ಸಂಕ್ರಾಂತಿ ಹಾಡುಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. 'ಪುಷ್ಪ' ಚಿತ್ರದ 'ಓ ಅಂತವ' ಹಾಡಿನ ಕನ್ನಡ ಆವೃತ್ತಿಯಿಂದ ರಾಷ್ಟ್ರೀಯ ಮನ್ನಣೆ ಪಡೆದಿದ್ದ ಅವರು, ಈಗ ಈ ವಿವಾದದಿಂದಾಗಿ ಚರ್ಚೆಗೆ ಒಳಗಾಗಿದ್ದಾರೆ. ಪೊಲೀಸರು ಈ ಘಟನೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಟಾಲಿವುಡ್‌ನ ಚಿತ್ರರಂಗದಲ್ಲಿ ಮತ್ತೊಮ್ಮೆ ಕಳವಳಕ್ಕೆ ಕಾರಣವಾಗಿದೆ.


