Asianet Suvarna News Asianet Suvarna News

ಮಂಗಳೂರು ಕುಕ್ಕರ್‌ ಬಾಂಬ್‌ ಸಂಚುಗಾರ ದೆಹಲಿಯಲ್ಲಿ ಬಂಧನ: ಕೀನ್ಯಾದಿಂದ ಬಂದಿಳಿಯುತ್ತಿದ್ದಂತೆ ಅರೆಸ್ಟ್‌

ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ ಐಸಿಸ್‌ ಉಗ್ರಗಾಮಿ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ ಮೂಲದ ಅರಾಫತ್‌ ಅಲಿ (Arafat Ali) ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಬಂಧಿಸಿದೆ.

Mangalore cooker bomb plotter arrested in Delhi airport while landing from Kenya akb
Author
First Published Sep 15, 2023, 7:07 AM IST

ನವದೆಹಲಿ: ಮಂಗಳೂರಿನಲ್ಲಿ ಕಳೆದ ವರ್ಷ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ ಐಸಿಸ್‌ ಉಗ್ರಗಾಮಿ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ ಮೂಲದ ಅರಾಫತ್‌ ಅಲಿ (Arafat Ali) ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಬಂಧಿಸಿದೆ. ಕೀನ್ಯಾದ ನೈರೋಬಿಯಿಂದ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣವೇ ಆತನನ್ನು ಬಂಧಿಸಲಾಗಿದೆ. ಇದರಿಂದಾಗಿ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ವಿದೇಶಿ ಮೂಲದ (Islamic State) (ಐಸಿಸ್‌) ಸಂಚು ವಿಫಲಗೊಳಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಎನ್‌ಐಎ ಹೇಳಿದೆ.

"ಅಲಿ 2020 ರಿಂದ ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ (ISIS propaganda activities)ತೊಡಗಿಸಿಕೊಂಡಿದ್ದ ಹಾಗೂ ಐಸಿಸ್‌ ಮೂಲಕ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಿದ್ದ. ಆಗಿನಿಂದ ಈತ ಮರೆಸಿಕೊಂಡಿದ್ದ ಆತ ಐಸಿಸ್‌ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾಗೆ ಕುಮ್ಮಕ್ಕು ನೀಡಲು ವಿದೇಶದಿಂದಲೇ ಕಾರ್ಯನಿರ್ವಹಿಸುತ್ತಿದ್ದ" ಎಂದು ಸಿಬಿಐ ವಕ್ತಾರರು ಹೇಳಿದರು.

ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್‌ ಬಾಂಬ್‌ ಕಿಂಗ್‌ಪಿನ್‌ ಬೆಳಗಾವಿ ಲಷ್ಕರ್‌ ಉಗ್ರ!

ಮಂಗಳೂರು ಸ್ಫೋಟದಲ್ಲಿ ಪಾತ್ರ:

"ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಿವಾಸಿಯಾಗಿರುವ ಅಲಿ, ವಿದೇಶದಿಂದ ಕೆಲಸ ಮಾಡುತ್ತಿರುವಾಗ ಐಸಿಸ್‌ ಸಂಘಟನೆಗೆ ಮುಸ್ಲಿಂ ಯುವಕರನ್ನು ಗುರುತಿಸುವುದು, ಅವರನ್ನು ಸಂಘಟನೆಗೆ ನೇಮಿಸಿಕೊಳ್ಳುವುದು ಹಾಗೂ ಅವರನ್ನು ತೀವ್ರವಾದಿಯನ್ನಾಗಿ ಮಾಡುವುದು- ಈ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.

“ಈತನ ‘ಶಿವಮೊಗ್ಗ ಭಯೋತ್ಪಾದನೆ ಸಂಚು ಪ್ರಕರಣ’ದ (Shivamogga terror conspiracy case)ಭಾಗವಾಗಿ, ಕಳೆದ ವರ್ಷ ಮಂಗಳೂರಲ್ಲಿ ಪ್ರೆಶರ್‌ ಕುಕ್ಕರ್‌ ಬಾಂಬ್‌ ಸ್ಫೋಟ ಸಂಭವಿಸಿತ್ತು. ಈಗ ಬಂಧಿತನಾಗಿರುವ ಮೊಹಮ್ಮದ್ ಶಾರಿಕ್ (Mohammed Shariq)ಎಂಬಾತ, ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದ ಬಳಿ ಪ್ರೆಶರ್ ಕುಕ್ಕರ್ ಐಇಡಿ ಬಾಂಬ್‌ (pressure cooker IED bomb) ಇಡಲು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಐಇಡಿ ಸ್ಫೋಟಗೊಂಡಿತ್ತು" ಎಂದು ಎನ್‌ಐಎ ಹೇಳಿದೆ. ಅಲಿ ಈ ಪ್ರಕರಣದ ಇತರ ಆರೋಪಿಗಳೊಂದಿಗೆ ಸಕ್ರಿಯ ಸಂಪರ್ಕದಲ್ಲಿದ್ದ ಮತ್ತು ಪಿತೂರಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ" ಎಂದು ತನಿಖಾ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಮಂಗ್ಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಶಿವಮೊಗ್ಗಕ್ಕೆ ಶಂಕಿತ ಉಗ್ರರ ಕರೆತಂದು ಎನ್‌ಐಎ ಶೋಧ

ಗೋಡೆ ಗೀಚು ಬರಹ ರೂವಾರಿ:

"2020 ರ ಮಂಗಳೂರು ಗೋಡೆಯ ಗೀಚುಬರಹ ಪ್ರಕರಣಗಳಿಗೆ (wall graffiti cases) ಅಲಿ ಸಹ ಜವಾಬ್ದಾರ. ಅವನ ನಿರ್ದೇಶನದ ಮೇರೆಗೆ ಇತರ ಇಬ್ಬರು ಆರೋಪಿಗಳಾದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಅವರು ಗೋಡೆಯ ಗೀಚು ಬರಹ ಬರೆದಿದ್ದರು. ಸಂಘಿಗಳು ಹಾಗೂ ಮನುವಾದಿಗಳನ್ನು ನಿಗ್ರಹಿಸಲು ಲಷ್ಕರ್-ಎ-ತೊಯ್ಬಾ (Lashkar-e-Toiba)ಮತ್ತು ತಾಲಿಬಾನಿಗಳನ್ನು ಆಹ್ವಾನಿಸುವಂತೆ ಮಾಡಬೇಡಿ. 'ಲಷ್ಕರ್ ಜಿಂದಾಬಾದ್' ಎಂಬುದು ಆ ಬರಹವಾಗಿತ್ತು. ಪ್ರಕರಣದಲ್ಲಿ ಅಲಿ ಮತ್ತು ಇತರ ಶಂಕಿತರ ವಿರುದ್ಧ ತನಿಖೆ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಶಂಕಿತ ಉಗ್ರನ ಜತೆ ಚಾಟ್: ಯಾದಗಿರಿ ಯುವಕನ ವಿಚಾರಣೆ

ಯಾದಗಿರಿ/ಶಹಾಪುರ: ಜಾರ್ಖಂಡ್‌ನಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಫೈಜಾನ್‌ ಅನ್ಸಾರಿ ಜತೆ ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್‌ ನಡೆಸಿದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಎನ್ಐಎ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ಸೆ.20ರಂದು ರಾಂಚಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಶಹಾಪುರದ ಖಾಲಿದ್‌ ಅಹ್ಮದ್‌ (22) ವಿಚಾರಣೆಗೆ ಒಳಗಾದ ವ್ಯಕ್ತಿ.

Follow Us:
Download App:
  • android
  • ios