ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಆರೋಪಿಗಳಾದ ಮಾಝ್‌, ಶಾರೀಕ್‌, ಯಾಸಿನ್‌ನನ್ನು ಮೂರು ದಿನಗಳ ಹಿಂದೆ ಶಿವಮೊಗ್ಗಕ್ಕೆ ಕರೆತಂದಿದ್ದ ಎನ್‌ಐಎ ತಂಡ ಶಿವಮೊಗ್ಗದ ಚಿಕ್ಕಲ್‌ ಬಡಾವಣೆಯ ಯಾಸಿನ್‌ ಮನೆಯಲ್ಲಿ ಶೋಧ ನಡೆಸಿ ಮಹಜರು ನಡೆಸಿದ್ದು, ಬಳಿಕ ತೀರ್ಥಹಳ್ಳಿಯಲ್ಲಿ ಶಾರೀಕ್‌, ಮಾಜ್‌ ಮುನೀರ್‌ ಸಭೆ ನಡೆಸಿದ್ದರು ಎನ್ನಲಾದ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ(ಜು.30): ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಶಿವಮೊಗ್ಗ-ತೀರ್ಥಹಳ್ಳಿಯಲ್ಲಿ ಸ್ಥಳ ಮಹಜರು ನಡೆಸಿದೆ ಎಂದು ತಿಳಿದುಬಂದಿದೆ.

ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಆರೋಪಿಗಳಾದ ಮಾಝ್‌, ಶಾರೀಕ್‌, ಯಾಸಿನ್‌ನನ್ನು ಮೂರು ದಿನಗಳ ಹಿಂದೆ ಶಿವಮೊಗ್ಗಕ್ಕೆ ಕರೆತಂದಿದ್ದ ಎನ್‌ಐಎ ತಂಡ ಶಿವಮೊಗ್ಗದ ಚಿಕ್ಕಲ್‌ ಬಡಾವಣೆಯ ಯಾಸಿನ್‌ ಮನೆಯಲ್ಲಿ ಶೋಧ ನಡೆಸಿ ಮಹಜರು ನಡೆಸಿದ್ದು, ಬಳಿಕ ತೀರ್ಥಹಳ್ಳಿಯಲ್ಲಿ ಶಾರೀಕ್‌, ಮಾಜ್‌ ಮುನೀರ್‌ ಸಭೆ ನಡೆಸಿದ್ದರು ಎನ್ನಲಾದ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನದ ಐಎಸ್ಐ ಲಿಂಕ್?

ಈ ಮೂವರು ಆರೋಪಿಗಳು ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರು. ಬಳಿಕ ಮಂಗಳೂರಿನಲ್ಲಿ ರಿಕ್ಷಾದಲ್ಲೇ ಕುಕ್ಕರ್‌ ಬಾಂಬ್‌ ಸ್ಫೋಟ ಆಗಿ ಶಾರೀಕ್‌ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ. ಪ್ರಕರಣಕ್ಕೆ ಎನ್‌ಐಎ ತನಿಖೆ ತೀವ್ರಗೊಳಿಸಿದ್ದು, 3 ದಿನಗಳ ಹಿಂದೆ ನಗರಕ್ಕೆ ಬಂದು ಮಹತ್ತರ ಮಾಹಿತಿ ಸಂಗ್ರಹಿಸಿದೆ ಎನ್ನಲಾಗಿದೆ.

ಎನ್‌ಐಎ ಇನ್‌ಸ್ಪೆಕ್ಟರ್‌ ಮಹೇಶ್‌ ಮತ್ತಿಬ್ಬರು ಅಧಿಕಾರಿಗಳು ತೀರ್ಥಹಳ್ಳಿ ಮತ್ತು ಶಿವಮೊಗ್ಗಕ್ಕೆ ತೆರಳಿ ಪರಿಶೀಲನೆ ನಡೆಸಿ ಹೋಗಿದ್ದಾರೆ. ಫೈಜಲ್‌ ಎಂಬುವನಿಂದ ಶಾರೀಕ್‌ .10 ಸಾವಿರ ಕ್ರಿಪ್ಟೋ ಕರೆನ್ಸಿ ಪಡೆದಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.