ಶರದ್ ಪವಾರ್‌ಗೆ ಬಿಜೆಪಿ ಕಾರ್ಯಕರ್ತನಿಂದ್ಲೇ ಜೀವ ಬೆದರಿಕೆ: ಅಜಿತ್ ಪವಾರ್ ಸ್ಫೋಟಕ ಹೇಳಿಕೆ
ಪವಾರ್ ಸಾಹಬ್‌ಗಾಗಿ ನನಗೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದೆ. ಅವರಿಗೆ ವೆಬ್‌ಸೈಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಸುಪ್ರಿಯಾ ಸುಳೆ ಪೊಲೀಸರಿಗೆ ದೂರು ನೀಡಿದ್ದರು.
ಮುಂಬೈ (ಜೂನ್ 10, 2023): ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಸೋದರಳಿಯ ಅಜಿತ್ ಪವಾರ್ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಕೊಲೆ ಬೆದರಿಕೆಯ ಸಂದೇಶ ಕಳಿಸಿದ್ದು ಬಿಜೆಪಿ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ.
"ಈ ಯುವಕ ಸೌರಭ್ ಪಿಂಪಾಲ್ಕರ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಶರದ್ ಪವಾರ್ ನರೇಂದ್ರ ದಾಭೋಲ್ಕರ್ ಅವರು ಎದುರಿಸಿದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರಕಟಿಸಿದ್ದ. ಅವರ ಸಾಮಾಜಿಕ ಮಾಧ್ಯಮ ಖಾತೆಯ ಬಯೋಡೇಟಾದಲ್ಲಿ ಸೌರಭ್ ಪಿಂಪಾಲ್ಕರ್ ಬಿಜೆಪಿ ಕಾರ್ಯಕರ್ತ ಎಂದು ಉಲ್ಲೇಖಿಸಿದ್ದಾರೆ. ಅವರು ನಿಜವಾಗಿಯೂ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ? ಅವರು ನಿಜವಾಗಿಯೂ ಬಿಜೆಪಿ ಕಾರ್ಯಕರ್ತನೇ?’’ ಎಂದು ಪ್ರಶ್ನೆ ಮಾಡಿದ್ದು, ಅಲ್ಲದೆ ಇಂತಹ ಬೇಜವಾಬ್ದಾರಿ ವರ್ತನೆಯನ್ನು ಬಲವಾಗಿ ಖಂಡಿಸುವುದಾಗಿಯೂ ಅಜಿತ್ ಪವಾರ್ ಹೇಳಿದ್ದಾರೆ.
ಇದನ್ನು ಓದಿ: ಮಹಾ ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್: ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ
ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ತಮ್ಮ ತಂದೆ ಶರದ್ ಪವಾರ್‌ಗೆ ಬೆದರಿಕೆ ಸಂದೇಶವನ್ನು ನನ್ನ ಫೋನ್‌ಗೆ ಕಳಿಸಿದ್ದಾರೆ ಎಂದು ಶುಕ್ರವಾರ ಹೇಳಿದ್ದರು. ಅಲ್ಲದೆ, ಶರದ್ ಪವಾರ್ ಅವರ ಭದ್ರತೆಯ ಜವಾಬ್ದಾರಿ ಗೃಹ ಸಚಿವಾಲಯದ ಮೇಲಿದೆ ಮತ್ತು ಅಮಿತ್ ಶಾ ಅವರ ಮಧ್ಯಸ್ಥಿಕೆಗೂ ಸುಪ್ರಿಯಾ ಸುಳೆ ಕೋರಿದರು. "ಪವಾರ್ ಸಾಹಬ್‌ಗಾಗಿ ನನಗೆ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದೆ. ಅವರಿಗೆ ವೆಬ್‌ಸೈಟ್ ಮೂಲಕ ಬೆದರಿಕೆ ಹಾಕಲಾಗಿದೆ. ಹಾಗಾಗಿ ನ್ಯಾಯಕ್ಕಾಗಿ ನಾನು ಪೊಲೀಸರ ಬಳಿ ಬಂದಿದ್ದೇನೆ. ನಾನು ಮಹಾರಾಷ್ಟ್ರ ಗೃಹ ಸಚಿವರು ಮತ್ತು ಕೇಂದ್ರ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ. ಇಂತಹ ಕ್ರಮಗಳು ಕೀಳು ಮಟ್ಟದ ರಾಜಕೀಯವಾಗಿದ್ದು, ಮತ್ತು ಇಂತದ್ದನ್ನು ನಿಲ್ಲಿಸಬೇಕು’’ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
82 ವರ್ಷದ ಶರದ್ ಪವಾರ್ ಅವರಿಗೆ ಫೇಸ್‌ಬುಕ್‌ನಲ್ಲಿ ಸಂದೇಶ ಬಂದಿದೆ ಎಂದು ಎನ್‌ಸಿಪಿ ನಾಯಕರು ಪೊಲೀಸರಿಗೆ ತಿಳಿಸಿದ್ದಾರೆ, "ನರೇಂದ್ರ ದಾಭೋಲ್ಕರ್ ಅವರಂತೆಯೇ ಶೀಘ್ರದಲ್ಲೇ ನೀವೂ ಅದೇ ಪರಿಸ್ಥಿತಿಯನ್ನು ಎದುರಿಸುತ್ತೀರ’’ ಎಂಬ ಬೆದರಿಕೆ ಬಂದಿರುವ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮೂಢ ನಂಬಿಕೆಗಳ ವಿರುದ್ಧ ಹೋರಾಡಿದ ದಾಭೋಲ್ಕರ್ ಅವರನ್ನು ಆಗಸ್ಟ್ 20, 2013 ರಂದು ಪುಣೆಯಲ್ಲಿ ಬೆಳಗ್ಗೆ ವಾಕ್ ಮಾಡುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.
ಇದನ್ನೂ ಓದಿ: 2ಕ್ಕಿಂತ ಹೆಚ್ಚು ಮಕ್ಕಳಿರುವ ಸಂಸದ, ಶಾಸಕರನ್ನು ಅನರ್ಹಗೊಳಿಸಿ: ಅಜಿತ್ ಪವಾರ್
ಇನ್ನು, ತನಗೆ ಜೀವ ಬೆದರಿಕೆಯ ಕುರಿತು ಮಾತನಾಡಿದ ಶರದ್ ಪವಾರ್, ಬೆದರಿಕೆಗಳನ್ನು ನೀಡುವ ಮೂಲಕ ಒಬ್ಬರ ಧ್ವನಿಯನ್ನು ಮೌನಗೊಳಿಸಬಹುದು ಎಂದು ಯಾರಾದರೂ ಭಾವಿಸಿದರೆ, ಆ ವ್ಯಕ್ತಿಯು "ತಪ್ಪು ಗ್ರಹಿಕೆ" ಯಲ್ಲಿದ್ದಾನೆ ಎಂದು ಶುಕ್ರವಾರ ಹೇಳಿದ್ದಾರೆ. ಅಲ್ಲದೆ, ಮಹಾರಾಷ್ಟ್ರ ಪೊಲೀಸರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದೂ ಹೇಳಿದ್ದಾರೆ.
.
ಹಾಗೂ, ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ, ಯಾರಾದರೂ ಬೆದರಿಕೆಗಳನ್ನು ನೀಡುವ ಮೂಲಕ ಒಬ್ಬರ ಧ್ವನಿಯನ್ನು ಮೌನಗೊಳಿಸಬಹುದು ಎಂದು ಭಾವಿಸಿದರೆ, ಅದು ಅವರ ತಪ್ಪು ಕಲ್ಪನೆ’’ ಎಂದೂ ಹಿರಿಯ ನಾಯಕ ಹೇಳಿದರು.
ಇದನ್ನೂ ಓದಿ: ‘ಮಹಾ’ ಬಿಜೆಪಿಗೆ ಅಜಿತ್ ಪವಾರ್ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..
ಈ ಮಧ್ಯೆ, ಮುಂಬೈ ಪೊಲೀಸರು ಬೆದರಿಕೆಯ ಕುರಿತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದರೆ, ಪುಣೆ ಪೊಲೀಸರು ನಗರದ ಶಿವಾಜಿನಗರ ಪ್ರದೇಶದಲ್ಲಿ ಶರದ್ ಪವಾರ್ ಅವರ ನಿವಾಸದ ಭದ್ರತೆಯನ್ನು ಪರಿಶೀಲಿಸಿ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಜನ ಮೋದಿ ವರ್ಚಸ್ಸಿಗೆ ವೋಟ್ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್ ಬೀಸಿದ ಎನ್‌ಸಿಪಿ ನಾಯಕ