Asianet Suvarna News Asianet Suvarna News

Telangana: 15 ಅಡಿ ಆಳದ ಗುಹೆಯೊಳಗೆ 2 ದಿನದಿಂದ ಸಿಲುಕಿದ ವ್ಯಕ್ತಿ; ರಕ್ಷಣಾ ಕಾರ್ಯಕ್ಕೆ ಹರಸಾಹಸ

ರೆಡ್ಡಿಪೇಟ್ ಗ್ರಾಮದಲ್ಲಿ (Reddypet Village) ಸಿಕ್ಕಿಬಿದ್ದ ವ್ಯಕ್ತಿಯನ್ನು ರಾಜು ಎಂದು ಗುರುತಿಸಲಾಗಿದ್ದು, 2 ಬಂಡೆಗಳ ನಡುವೆ ರೂಪುಗೊಂಡ 15 ಅಡಿ ಆಳದ ಗುಹೆಯೊಳಗೆ ಸಿಕ್ಕಿಬಿದ್ದಿದ್ದಾರೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಮಂಡಲದಲ್ಲಿ ಆತ 30 ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಬಿದ್ದಿದ್ದಾರೆ.

man trapped in 15 foot cave in telanganas kamareddy for 30 hours ash
Author
First Published Dec 15, 2022, 12:09 PM IST

ತೆಲಂಗಾಣದ (Telangana) ಕಾಮರೆಡ್ಡಿ ಜಿಲ್ಲೆಯಲ್ಲಿ (Kamareddy District) 30 ಗಂಟೆಗಳಿಗೂ ಹೆಚ್ಚು ಕಾಲ (ಸುಮಾರು ಒಂದೂವರೆ ದಿನ) ವ್ಯಕ್ತಿಯೊಬ್ಬ ಗುಹೆಯೊಳಗೆ (Cave) ಸಿಲುಕಿದ್ದಾನೆ. ಗುಹೆಯೊಳಗೆ ಸಿಲುಕಿರುವ ವ್ಯಕ್ತಿಯನ್ನು ರಕ್ಷಿಸಲು ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ (Rescue Operation) ನಡೆಸುತ್ತಿದ್ದಾರೆ. 2 ಬಂಡೆಗಳ (Boulders) ನಡುವೆ ರೂಪುಗೊಂಡ ಗುಹೆಯಿಂದ ಆತನನ್ನು ರಕ್ಷಿಸಲು ರಕ್ಷಣಾ ಅಧಿಕಾರಿಗಳು ಜೆಸಿಬಿ (JCB) ಯಂತ್ರದ ಮೊರೆ ಹೋಗಿದ್ದು, ಗುಹೆಯಿಂದ ಹೊರಗೆ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. 

ರೆಡ್ಡಿಪೇಟ್ ಗ್ರಾಮದಲ್ಲಿ (Reddypet Village) ಸಿಕ್ಕಿಬಿದ್ದ ವ್ಯಕ್ತಿಯನ್ನು ರಾಜು ಎಂದು ಗುರುತಿಸಲಾಗಿದ್ದು, 2 ಬಂಡೆಗಳ ನಡುವೆ ರೂಪುಗೊಂಡ 15 ಅಡಿ ಆಳದ ಗುಹೆಯೊಳಗೆ ಸಿಕ್ಕಿಬಿದ್ದಿದ್ದಾರೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಮಂಡಲದಲ್ಲಿ ಆತ 30 ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ರೆಡ್ಡಿ ಪೇಟ್‌ ಗ್ರಾಮದಿಂದ ಗಣಪುರ ತಾಂಡಾ ಮಾರ್ಗವಾಗಿ ಸಿಂಗರಾಯಪಲ್ಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ರಾಜು ಕಾಡಿನಲ್ಲಿ ಸುತ್ತಾಡಲು ತೆರಳಿದ್ದರು. ಈ ವೇಳೆ ಬಂಡೆಗಳ ಮೇಲೆ ನಡೆಯುತ್ತಿದ್ದಾಗ ರಾಜು ಬಂಡೆಗಳ ನಡುವಿನ ಗುಹೆಯೊಳಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಇದನ್ನು ಓದಿ: Gujarat ತೂಗು ಸೇತುವೆ ಕುಸಿತ: 132 ಜನರ ಬಲಿ; ಮುಂದುವರಿದ ರಕ್ಷಣಾ ಕಾರ್ಯ

ಬಳಿಕ, ಹೊರಗೆ ತೆರಳಲು ಅವಕಾಶವಿಲ್ಲದ ಕಾರಣ ರಾಜು ಒಂದು ದಿನಕ್ಕೂ ಹೆಚ್ಚು ಕಾಲ ಒಳಗೆ ಸಿಕ್ಕಿಹಾಕಿಕೊಂಡಿದ್ದರು. ಇದೇ ವೇಳೆ ಆತನನ್ನು ರಕ್ಷಿಸಲು ಕುಟುಂಬಸ್ಥರು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಖಾಕಿ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ಇನ್ನೊಂದೆಡೆ, ರಾಜು ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಮಂಗಳವಾರ ಸಂಜೆ ಗುರುತಿಸಲಾದ ವ್ಯಕ್ತಿಯೊಬ್ಬರು ಬಂಡೆಗಳ ಉದ್ದಕ್ಕೂ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರ ಸೆಲ್ ಫೋನ್ ಬಂಡೆಗಳ ನಡುವೆ ಆಳವಾಗಿ ಬಿದ್ದಿತು. ಸೆಲ್ ಫೋನ್ ತೆಗೆಯುವಾಗ ಅವರು ಒಳಗೆ ಸಿಕ್ಕಿಬಿದ್ದಿದ್ದಾರೆ. ಮಂಗಳವಾರ ರಾಜುವನ್ನು ರಕ್ಷಿಸಲು ಕುಟುಂಬಸ್ಥರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬುಧವಾರ ಮಧ್ಯಾಹ್ನ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರಿಗೆ ನೀರು ಮತ್ತು ಒಆರ್‌ಎಸ್‌ ಪೂರೈಸಿದ್ದೇವೆ. ಸದ್ಯಕ್ಕೆ ಅವರು ಸುರಕ್ಷಿತವಾಗಿದ್ದಾರೆ. ಜೆಸಿಬಿ ಮತ್ತು ಇತರ ಅಧಿಕಾರಿಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಡೆಪ್ಯುಟಿ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಕಾಮರೆಡ್ಡಿ ತಿಳಿಸಿದ್ದಾರೆ. 

ಇದನ್ನೂ ಓದಿ: ಕಂದಕಕ್ಕೆ ಉರುಳಿದ ಬಸ್: 11 ಜನರ ದಾರುಣ ಸಾವು: ಸೇನೆಯಿಂದ ರಕ್ಷಣಾ ಕಾರ್ಯ

ಇನ್ನು, ಈ ರೀತಿ ರಕ್ಷಣಾ ಕಾರ್ಯಗಳು ಆಗಾಗ ನಡೆಯುತ್ತಿರುತ್ತದೆ. ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಬಳಿಯ ತ್ರಿಕೂಟ ಬೆಟ್ಟಗಳ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಕನಿಷ್ಠ 10 ಪ್ರವಾಸಿಗರು ಗಾಯಗೊಂಡಿದ್ದು, ಇಬ್ಬರು ಮಹಿಳಾ ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರೋಪ್‌ವೇಯಲ್ಲಿನ ಕನಿಷ್ಠ 12 ಕ್ಯಾಬಿನ್‌ಗಳಲ್ಲಿ 46 ಜನರು ಸಿಲುಕಿಕೊಂಡಿದ್ದರು. ಕೇಬಲ್‌ ಕಾರುಗಳಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯಾಚರಣೆ ಸುಮಾರು 2 ದಿನ ನಡೆದಿತ್ತು. ರಕ್ಷಣಾ ಕಾರ್ಯಾಚರಣೆಗೆ 2 ಎಂಐ-17 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ITBP ಮತ್ತು NDRF ತಂಡಗಳು ಕೂಡ ಸ್ಥಳಕ್ಕೆ ಧಾವಿಸಿವೆ. ಸೇನೆಗೆ ಸಹಾಯ ಮಾಡಲು ಸ್ಥಳೀಯ ಆಡಳಿತ ತಂಡವೂ ಸ್ಥಳದಲ್ಲಿತ್ತು.

ಇದನ್ನೂ ಓದಿ: ಮಾವಿನ ಮರವೇರಿದ ಚಿರತೆ: ಬರೋಬರಿ 8 ಗಂಟೆ ನಡೆಯಿತು ರಕ್ಷಣಾ ಕಾರ್ಯ

Follow Us:
Download App:
  • android
  • ios